Ad Widget .

ತಾಯಿಯ ಶವದೊಂದಿಗೆ ನಾಲ್ಕು ದಿನ ಕಳೆದ ಬಾಲಕ|

Ad Widget . Ad Widget .

ಸಮಗ್ರ ನ್ಯೂಸ್: ಹತ್ತು ವರ್ಷದ ಬಾಲಕನೋರ್ವ ತನ್ನ ತಾಯಿ ನಿದ್ರೆ ಮಾಡುತ್ತಿದ್ದಾಳೆ ಎಂದು ಭಾವಿಸಿ ಮೃತ ದೇಹದೊಂದಿಗೆ ನಾಲ್ಕು ದಿನ ಕಳೆದಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರ್ ಜಿಲ್ಲೆಯ ತಿರುಪತಿ ಸಮೀಪದ ವಿದ್ಯಾನಗರದಲ್ಲಿ ನಡೆದಿದೆ.

Ad Widget . Ad Widget .

ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದ ರಾಜ್ಯಲಕ್ಷ್ಮಿ ಎಂಬುವರು ಮೃತ ಮಹಿಳೆ. ಎರಡು ವರ್ಷಗಳ ಹಿಂದೆ ಪತಿಯೊಂದಿಗೆ ಜಗಳವಾಗಿ ತಿರುಪತಿಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು. ಆಕೆಯೊಂದಿಗೆ ಪುತ್ರ ಶ್ಯಾಮ್ ಕಿಶೋರ್ ಕೂಡ ಇದ್ದು, 5ನೇ ತರಗತಿಯಲ್ಲಿ ಓದುತ್ತಿದ್ದ.

ಶುಕ್ರವಾರದಂದು ಶ್ಯಾಮ್ ಕಿಶೋರ್​ ತನ್ನ ಚಿಕ್ಕಪ್ಪ ದುರ್ಗಾಪ್ರಸಾದ್​ಗೆ ಮನೆಯಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ತಿಳಿಸಿದ್ದಾನೆ. ಈ ವೇಳೆ ದುರ್ಗಾಪ್ರಸಾದ್ ಸ್ಥಳಕ್ಕೆ ಬಂದು ನೋಡಿದಾಗ ರಾಜ್ಯಲಕ್ಷ್ಮಿ ಮೃತಪಟ್ಟಿರುವುದು ತಿಳಿದು ಬಂದಿದೆ

Leave a Comment

Your email address will not be published. Required fields are marked *