ಸಮಗ್ರ ನ್ಯೂಸ್: ಉಕ್ರೇನ್ ನಲ್ಲಿ ರಷ್ಯಾ ಸೇನೆ ಮಾರಣ ಹೋಮ ಮುಂದುವರೆಸಿದೆ. ಆಸ್ಪತ್ರೆ, ಜನವಸತಿ ಪ್ರದೇಶಗಳ ಮೇಲೆ ಭೀಕರ ಶೆಲ್ ದಾಳಿ ನಡೆಸಿದೆ. ಈ ನಡುವೆ ಮರಿಯಪೋಲ್ ನಲ್ಲಿ ರಷ್ಯಾ ನಡೆಸಿದ ದಾಳಿಗೆ 1500 ಜನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮರಿಯಪೋಲ್ ನಲ್ಲಿ ಕಳೆದ 12 ದಿನಗಳ ರಷ್ಯಾ ದಾಳಿಯಲ್ಲಿ 1500 ಜನರು ಸಾವನ್ನಪ್ಪಿದ್ದು, ನಿರಾಶ್ರಿತರಾಗಿರುವ ಜನರಿಗೆ ಆಹಾರ, ನೀರು ಒದಗಿಸುವುದು ಕಷ್ಟಕರವಾಗಿದೆ ಎಂದು ಮರಿಯಪೋಲ್ ಮೇಯರ್ ಕಚೇರಿ ತಿಳಿಸಿದೆ.
ಇನ್ನೊಂದೆಡೆ ರಷ್ಯಾ ಸೇನೆ ಉಕ್ರೇನ್ ನ ಮೈಕೋಲೈವ್ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ದಾಳಿ ನಡೆಸಿದ್ದು, ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಉಕ್ರೇನ್ ಆರೋಪಿಸಿದೆ. ಉಕ್ರೇನ್ ನ ಲುಟ್ಸ್ಕ್, ಇವಾನೊ-ಫ್ರಾಂಕಿವ್ಸ್ ನಗರಳ ಮೇಲೆ ವಾಯು ದಾಳಿ ನಡೆಸಿದ್ದು, ರಾಜಧಾನಿ ಕೀವ್ ನಗರವನ್ನು ರಷ್ಯಾ ಸೇನೆ ಸುತ್ತುವರೆದಿದೆ.