Ad Widget .

ಕೋವಿಡ್ ಹೊಸ ಅಲೆ ಹೆಚ್ಚಳ| ಮತ್ತೆ ಲಾಕ್ಡೌನ್ ನತ್ತ ಮುಖಮಾಡಿದ ಚೀನಾ|

Ad Widget . Ad Widget .

ಸಮಗ್ರ ನ್ಯೂಸ್: ಕೋವಿಡ್ ನ ಹೊಸ ಅಲೆಯ ಕಾರಣ ಸೋಂಕಿನ ಪ್ರಕರಣಗಳು ತೀವ್ರವಾಗಿ ಏರಿಕೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಚೀನಾ ಮತ್ತೆ ಲಾಕ್‌ಡೌನ್ ನತ್ತ ಮುಖಮಾಡಿದೆ.

Ad Widget . Ad Widget .

ಚೀನಾದ ಈಶಾನ್ಯದಲ್ಲಿರುವ ಚಾಂಗ್ಚುನ್ ಎಂಬ ನಗರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿರುವ ಕಾರಣ ಅಲ್ಲಿನ ನಿವಾಸಿಗಳಿಗೆ ಮೂರು ಸುತ್ತಿನ ಪರೀಕ್ಷೆಗಳನ್ನು ಕಡ್ಡಾಯಗೊಳಿಸಲಾಗಿದ್ದು, ಅಗತ್ಯವಲ್ಲದ ವಹಿವಾಟುಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲಾಗಿದೆ.

ಶುಕ್ರವಾರದಂದು ಒಂದೇ ದಿನದಲ್ಲಿ ಸ್ಥಳೀಯವಾಗಿ 397 ಪ್ರಕರಣಗಳನ್ನು ದಾಖಲಿಸಿದ ಚೀನಾ, ಇವುಗಳಲ್ಲಿ 98 ಪ್ರಕರಣಗಳನ್ನು ಚಾಂಗ್ಚುನ್ ಸುತ್ತಮುತ್ತಲೇ ಕಂಡಿದೆ. ಸೋಂಕಿನ ವಿರುದ್ಧ ಕಠಿಣ ಕ್ರಮ ಅನುಸರಿಸುತ್ತಿರುವ ಚೀನಾ, ಸಾಂಕ್ರಮಿಕವನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಈಗಾಗಲೇ 90 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ನಗರವೊಂದನ್ನು ಅಲ್ಲಿಯ ಸರ್ಕಾರ ಸಂಪೂರ್ಣ ಲಾಕ್ಡೌನ್ ಮಾಡಿದ್ದು, ಕೋವಿಡ್ ಕಂಟ್ರೋಲ್ ಗೆ ಶತಪ್ರಯತ್ನ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ.

Leave a Comment

Your email address will not be published. Required fields are marked *