ಈ ದೃಶ್ಯ ನೋಡಿದ್ರೆ ಬೈಕ್ ಸೃಷ್ಟಿಕರ್ತ ಆತ್ಮಹತ್ಯೆ ಮಾಡ್ಕೊಳ್ಳೋದು ಗ್ಯಾರಂಟಿ!, ಒಂದೇ ಬೈಕಲ್ಲಿ 9 ಮಂದಿ ಜಾಲಿರೈಡ್

Ad Widget ... ..

ಸಮಗ್ರ ನ್ಯೂಸ್: ಒಂದು ಬೈಕ್‌ನಲ್ಲಿ ಅಬ್ಬಬ್ಬಾ..ಎಂದರೆ ಮೂವರು ತೆರಳಬಹುದು. ಇಲ್ಲವೇ ನಾಲ್ವರು ತೆರಳಬಹುದು. ಆದರೆ ಇಲ್ಲೊಬ್ಬ ಒಂದೇ ಬೈಕ್‌ನಲ್ಲಿ ಬರೋಬ್ಬರಿ ತಾನೂ ಸೇರಿದಂತೆ ಒಂಬತ್ತು ಜನರನ್ನು ಬೈಕ್‌ನಲ್ಲಿ ತೆರಳಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Ad Widget

ಕೊಪ್ಪಳದ ಗಿಣಗೇರಾದಿಂದ ಗಂಗಾವತಿಗೆ ದ್ವಿಚಕ್ರ ವಾಹನದಲ್ಲಿ 9 ಜನರು ಪ್ರಯಾಣ ಬೆಳೆಸಿದ್ದು ಕ್ಯಾಮರಾದಲ್ಲಿ ಸೆರೆಯಾಗಿದೆ. ನಾಲ್ವರು ಹಿರಿಯರು, ಐವರು ಸಣ್ಣ ಮಕ್ಕಳು ಈ ಬೈಕಿನಲ್ಲಿ ಕುಳಿತು ಸವಾರಿ ಮಾಡಿದ್ದಾರೆ. ನಿಜಕ್ಕೂ ಈ ಸವಾರಿಯು ಎಲ್ಲರ ಗಮನ ಸೆಳೆದಿದೆ.

ದಾರಿಹೋಕರು ಈ ಕುಟುಂಬವು ತೆರಳುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಮಾಜಿಕ ಜಾಲ ತಾಣಕ್ಕೆ ಹರಿಬಿಟ್ಟಿದ್ದಾರೆ.

Leave a Comment

Your email address will not be published. Required fields are marked *