ನಟ ಚೇತನ್ ಗೆ ಮತ್ತೆ ಸಂಕಷ್ಟ| ಗಡಿಪಾರು ಮಾಡುವ ಸಾಧ್ಯತೆ

Ad Widget ... ..

ಸಮಗ್ರ ನ್ಯೂಸ್: ಇತ್ತಿಚೆಗೆ ಬಂಧನಕ್ಕೀಡಾಗಿ ಜಾಮೀನಿನ ಮೇಲೆ ಹೊರಬಂದಿರುವ ನಟ ಚೇತನ್ ಗೆ ಇದೀಗ ಮತ್ತೆ ಸಂಕಷ್ಟ ಎದುರಾಗಿದೆ. ಅಮೇರಿಕಾ ಪ್ರಜೆಯಾಗಿರುವ ಅವರನ್ನು ಗಡೀಪಾರು ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Ad Widget

ನಟ ಚೇತನ್ ಅಮೇರಿಕ ಪ್ರಜೆಯಾಗಿದ್ದರೂ, ಭಾರತದಲ್ಲಿ ಹೋರಾಟ ನಡೆಸಿ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಅವರ ವಿರುದ್ಧ ಸಾಗರೋತ್ತರ ಭಾರತೀಯ ನಾಗರಿಕ ಪತ್ರ ನಿಯಮಗಳನ್ನು ಉಲ್ಲಂಘನೆ ಮಾಡಿದ ಆರೋಪದ ಮೇಲೆ ಚೇತನ್ ಅವರನ್ನು ಗಡೀಪಾರು ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರಕ್ಕೆ ಬೆಂಗಳೂರು ಪೊಲೀಸರು ವರದಿ ಸಲ್ಲಿಸಿದ್ದಾರೆ.

ನಿಯಮಗಳ ಪ್ರಕಾರ ವಿದೇಶಿ ಪ್ರಜೆಗಳು ಭಾರತದ ಹೋರಾಟಗಳಲ್ಲಿ ಭಾಗಿಯಾಗುವಂತಿಲ್ಲ. ಆದರೆ, ಚೇತನ್ ಅನೇಕ ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಪೊಲೀಸರು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರ, ವಿದೇಶಾಂಗ ಇಲಾಖೆಗೆ ವರದಿ ರವಾನಿಸಲಿದೆ. ಈ ವರದಿ ಆಧರಿಸಿ ಚೇತನ್ ಅವರನ್ನು ಗಡೀಪಾರು ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Leave a Comment

Your email address will not be published. Required fields are marked *