ಸಮಗ್ರ ನ್ಯೂಸ್: ಉಕ್ರೇನ್ ನಲ್ಲಿ ದಕ್ಷಿಣ ಭಾರತೀಯರಾದ ನಮಗೆ ಯುದ್ಧದ ಮೊದಲ ಅನುಭವವಾಯಿತು. ಸಾವು ಗೆದ್ದು ಬಂದ ಅನುಭವವಾಯಿತು ಎಂದು ಉಕ್ರೇನ್ ನಿಂದ ಮರಳಿದ ವಿದ್ಯಾರ್ಥಿನಿ ಅನೀಫ್ರೆಡ್ ಡಿಸೋಜ ಕಹಿ ಅನುಭವವನ್ನು ಹಂಚಿಕೊಂಡಿದ್ದಾಳೆ.
ದೈಜಿವರ್ಲ್ಡ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅನೀಫ್ರೆಡ್, ತಂದೆ ತಾಯಿಯನ್ನು ನೋಡುವ ಆಸೆಯಿಂದ ನಾನು ಮತ್ತೆ ಬದುಕಿ ಬಂದಿದ್ದೇನೆ ಎಂದು ಹೇಳಿದ್ದಾರೆ. ಖಾರ್ಕೀವ್ ಕೀವ್ ಗೆ ವಿಮಾನ ಹೆಲಿಕಾಪ್ಟರ್ ತೆರಳುವ ಪರಿಸ್ಥಿತಿ ಇರಲಿಲ್ಲ. ಈ ಕಾರಣದಿಂದ ಕಷ್ಟವಾಯಿತು.
ನಮಗೆ ಭಾರತದ ಮೇಲೆ ಪ್ರೀತಿ ಇತ್ತು. ಈಗ ಮಾತೃಭೂಮಿ ಮೇಲೆ ಪ್ರೀತಿ ಜಾಸ್ತಿಯಾಗಿದೆ ಎಂದು ಹೇಳಿದ್ದಾರೆ. ಹತ್ತುದಿನಗಳ ಕಾಲ ಬಂಕರ್ ನಲ್ಲಿ ಉಳಿದುಕೊಂಡಿದ್ದೆ. ಬಳಿಕ ಹತ್ತು ಕಿ.ಮೀ. ನಡೆದುಕೊಂಡು ಬರಬೇಕಾದ ಪರಿಸ್ಥಿತಿ ಎದುರಾಯಿತು. ಪ್ರಯಾಣದ ಸಂದರ್ಭದಲ್ಲಿ ಅಲ್ಲಲ್ಲಿ ಬಾಂಬಿಂಗ್ ನಡೆಯುತ್ತಿತ್ತು. ಅವೆಲ್ಲವನ್ನು ಧೈರ್ಯದಿಂದ ಎದುರಿಸಿದೆ. ಕುಟುಂಬದವರನ್ನು ನೋಡಲೇ ಬೇಕೆಂದು ಆಸೆ ಹೊಂದಿದ್ದೆ. ಇದೇ ಕಾರಣದಿಂದಾಗಿ ಸುರಕ್ಷಿತವಾಗಿ ಮರಳಲು ಸಾಧ್ಯವಾಯಿತು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.