Ad Widget .

ಪಂಚರಾಜ್ಯ ಫಲಿತಾಂಶ ಫೈನಲ್|ಮೂರು ಭದ್ರ ಕೋಟೆಗಳಲ್ಲಿ ಮತ್ತೆ ಕೇಸರಿ | ಪಂಜಾಬ್ ನಲ್ಲಿ ‘ಕೈ’ ತಪ್ಪಿಸಿ ‘ಆಪ್’ ಲಾಂಚ್ ಮಾಡಿದ ಕೇಜ್ರಿ|ಗೋವಾದಲ್ಲಿ ಆತಂತ್ರ | ಕಮಲ ಅರಳಿಸುತ್ತಾರಾ ದೇವೇಂದ್ರ….?

Ad Widget . Ad Widget .

ಸಮಗ್ರ ನ್ಯೂಸ್: ಬಹುನಿರೀಕ್ಷಿತ ಪಂಚರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು ಮೂರು ರಾಜ್ಯಗಳಲ್ಲಿ ಮತ್ತೆ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ಇನ್ನುಳಿದಂತೆ ಕಾಂಗ್ರೆಸ್ ಭದ್ರಕೋಟೆ ಪಂಜಾಬಿನಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಪ್ರಚಂಡ ಗೆಲುವು ಸಾಧಿಸುವ ಮೂಲಕ ದೆಹಲಿಯ ನಂತರ ದೇಶದ ಇನ್ನೊಂದು ರಾಜ್ಯದಲ್ಲಿ ಸರಕಾರ ರಚಿಸಲು ಹಾತೊರೆಯುತ್ತಿದೆ. ಇತ್ತ ಗೋವಾದ ಹೆಚ್ಚು ಸ್ಥಾನಗಳಲ್ಲಿ ಗೆದ್ದು, ಸಂಪೂರ್ಣ ಬಹುಮತ ಸಾಭೀತುಗೊಳಿಸುವಲ್ಲಿ ವಿಫಲವಾಗಿರುವ ಬಿಜೆಪಿ ಸರ್ಕಾರ ರಚನೆಗೆ ಕಸರತ್ತು ಶುರುಮಾಡಿದೆ.

Ad Widget . Ad Widget .

ಉತ್ತರಪ್ರದೇಶದಲ್ಲಿ ನಿರೀಕ್ಷೆಯಂತೆಯೇ ಒಟ್ಟು 404 ಸ್ಥಾನಗಳ ಪೈಕಿ 265 ಸ್ಥಾನಗಳಲ್ಲಿ ಬಿಜೆಪಿ ಗೆದ್ದು ಬೀಗುವ ಮೂಲಕ ಬಹುಮತ ಸಾಭೀತುಪಡಿಸಿದೆ. ಇದರೊಂದಿಗೆ ಯೋಗಿ ಆದಿತ್ಯನಾಥ್ ಗೆ ಮತ್ತೆ ಮತದಾರರು ಪಟ್ಟಾಭಿಷೇಕ ಮಾಡಿದ್ದಾರೆ. ಇನ್ನುಳಿದಂತೆ 133 ಸ್ಥಾನಗಳು ಎಸ್ ಪಿ ಪಲಾದರೆ, ಕೇವಲ 2 ಸ್ಥಾನಗಳಲ್ಲಿ ಕಾಂಗ್ರೆಸ್ ಕೈ ಎತ್ತಿದೆ. 4 ಸ್ಥಾನಗಳಲ್ಲಿ ಇತರರು ಜಯಗಳಿಸಿದ್ದಾರೆ.

ಮಣಿಪುರದ ಒಟ್ಟು 60 ಸ್ಥಾನಗಳ ಪೈಕಿ 31 ಸ್ಥಾನಗಳಲ್ಲಿ ಬಿಜೆಪಿ, 9 ಸ್ಥಾನಗಲ್ಲಿ ಎನ್ ಪಿ ಪಿ, 7 ಸ್ಥಾನಗಳಲ್ಲಿ ಜೆಡಿಯು, 4 ಸ್ಥಾನಗಳಲ್ಲಿ ಎನ್ ಪಿ ಎಫ್, 4 ರಲ್ಲಿ ಕಾಂಗ್ರೆಸ್ ಮತ್ತು 5 ಸ್ಥಾನಗಳಲ್ಲಿ ಇತರ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 31 ದಾಟಿರುವ ಬಿಜೆಪಿ ಆರಾಮವಾಗಿ ಸರ್ಕಾರ ರಚಿಸಿಕೊಳ್ಳಲಿದೆ.

ಅತ್ತ ಉತ್ತರಾಖಂಡ ಕೂಡ ಮತ್ತೆ ಬಿಜೆಪಿ ಪಾಲಾಗಿದೆ. ಒಟ್ಟು 70 ಸ್ಥಾನಗಳಲ್ಲಿ, 48 ಬಿಜೆಪಿ ಜಯಗಳಿಸಿದರೆ, ಕಾಂಗ್ರೆಸ್ 18 ಸ್ಥಾನಗಳಲ್ಲಿ, ಬಿ ಎಸ್ ಪಿ 2 ಸ್ಥಾನಗಳಲ್ಲಿ, ಮತ್ತು ಇತರರು 2 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.

ಒಟ್ಟು 40 ಸ್ಥಾನಗಳಿರುವ ಗೋವಾದಲ್ಲಿ 20 ಸ್ಥಾನ ಬಿಜೆಪಿ, 11 ಕಾಂಗ್ರೆಸ್, 2 ಆಪ್ ಮತ್ತು 7 ಸ್ಥಾನಗಳು ಇತರರ ಪಲಾಗಿದೆ. ಸರ್ಕಾರ ರಚನೆಗೆ 21 ಸ್ಥಾನಗಳ ಅಗತ್ಯವಿದ್ದು, ಸರ್ಕಾರ ರಚನೆ ಸರ್ಕಸ್ ನಿರ್ವಹಿಸುವ ಜವಾಬ್ದಾರಿಯನ್ನು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೈಗೆ ನೀಡಲಾಗಿದೆ.

ಬಹುಮುಖ್ಯ ವಿಚಾರವೆಂದರೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಪಂಜಾಬ್ ನಲ್ಲಿ ಆಪ್ ಪ್ರಚಂಡ ಗೆಲುವು ದಾಖಲಿಸಿ, ದೆಹಲಿ ಬಳಿಕ ಪಂಜಾಬ್ ರಾಜ್ಯದಲ್ಲಿ ಸರ್ಕಾರ ರಚಿಸಲು ಸಿದ್ದವಾಗಿದೆ.
ಪಂಜಾಬ್ ವಿಧಾನಸಭೆಯ ಒಟ್ಟು 117 ಸ್ಥಾನಗಳ ಪೈಕಿ 92 ಸ್ಥಾನಗಳು ಆಪ್, 18 ಸ್ಥಾನಗಳು ಕಾಂಗ್ರೆಸ್ ಮತ್ತು 7 ಸ್ಥಾನಗಳು ಇತರ ಅಭ್ಯರ್ಥಿಗಳ ಪಾಲಾಗಿವೆ.

Leave a Comment

Your email address will not be published. Required fields are marked *