ಸಮಗ್ರ ನ್ಯೂಸ್: ಮನುಷ್ಯನ ಹೃದಯದ ಜಾಗಕ್ಕೆ ಹಂದಿಯ ಹೃದಯವನ್ನು ಕಸಿ ಮಾಡಿಸಿಕೊಂಡಿದ್ದ ಅಮೆರಿಕದ ಮೇರಿಲ್ಯಾಂಡ್‌ನ ವ್ಯಕ್ತಿ ಸಾವನ್ನಪ್ಪಿದ್ದಾರೆ. ಜ.7ರಂದು ಆಪರೇಷನ್ ಮಾಡಿಸಿಕೊಂಡಿದ್ದ 57 ವರ್ಷದ ಡೇವಿಡ್ ಬೆನಟ್ 2 ತಿಂಗಳ ಕಾಲ ಹಂದಿಯ ಹೃದಯದ ಸಹಾಯದಿಂದಲೇ ಉಸಿರಾಟ ನಡೆಸಿದ್ದಾರೆ.
ಆಪರೇಷನ್ ಮಾಡಿರುವ ಮೇರಿಲ್ಯಾಂಡ್ ವಿಶ್ವವಿದ್ಯಾಲಯ ವೈದ್ಯಕೀಯ ಕೇಂದ್ರವು ಡೇವಿಡ್ ಅವರ ಸಾವಿಗೆ ನಿಖರ ಕಾರಣವನ್ನು ಕೊಟ್ಟಿಲ್ಲ. ಹಲವು ದಿನಗಳಿಂದ ಅವರ ಆರೋಗ್ಯ ಹದಗೆಟ್ಟಿದ್ದಾಗಿ ತಿಳಿಸಿದೆ.
ಮನುಷ್ಯನ ಹೊರೆತು ಬೇರೆ ಪ್ರಾಣಿಯ ಹೃದಯದ ಸಹಾಯದಿಂದ ಹೆಚ್ಚು ದಿನಗಳ ಕಾಲ ಬದುಕಿದ ವ್ಯಕ್ತಿ ಎನ್ನುವ ಖ್ಯಾತಿಗೆ ಡೇವಿಡ್ ಭಾಜನರಾಗಿದ್ದಾರೆ. ಈ ಹಿಂದೆ ಕ್ಯಾಲಿಫೋರ್ನಿಯಾದಲ್ಲಿ ಬಾಲಕಿಯೊಬ್ಬಳು ಮಂಗದ ಹೃದಯ ಕಸಿ ಮಾಡಿಸಿಕೊಂಡು 21 ದಿನ ಬದುಕಿದ್ದಳು.