Ad Widget .

ಕ್ಯಾಮೆರಾ ಕಣ್ಣಲ್ಲಿ ಬಂಧಿಯಾದ ಬಲೂನು ಮಾರುತ್ತಿದ್ದ ಹುಡುಗಿ ‌ಈಗ ಮೋಡೆಲ್| ಇಂಟರ್ನೆಟ್ ಸೆನ್ಸೇಶನ್ ಆಗಿ ಬದಲಾದ ಇಂಟ್ರೆಸ್ಟಿಂಗ್ ಕಥೆ!

ಸಮಗ್ರ ಡಿಜಿಟಲ್ ಡೆಸ್ಕ್: ಕೇರಳದ ಬೀದಿ ವ್ಯಾಪಾರಿ ಹುಡುಗಿ ತನ್ನ ಮೇಕ್ ಓವರ್‌ನ ಫೋಟೋಗಳು ವೈರಲ್ ಆದ ನಂತರ ಇಂಟರ್ನೆಟ್ ಸೆನ್ಸೇಶನ್ ಆಗಿದ್ದಾಳೆ.

Ad Widget . Ad Widget .

ಕಣ್ಣಲ್ಲೇ ಕೊಲ್ಲುವ ಈ ಹುಡುಗಿ ಹೆಸರು ಕಿಸ್ಬು. ಕೇರಳದ ದೇವಸ್ಥಾನದ ಬಳಿ ಬಲೂನ್ ಮಾರಾಟ ಮಾಡುತ್ತಿದ್ದಾಗ ಛಾಯಾಗ್ರಾಹಕ ಅರ್ಜುನ್ ಕೃಷ್ಣನ್ ಕಣ್ಣಿಗೆ ಬಿದ್ದಿದ್ದಾಳೆ. ಆಕೆ ಮುಗ್ದತೆ, ಚೆಲುವು ಕ್ಯಾಮೆರಾ ಕಣ್ಣಿನಲ್ಲಿ ಮೋಡಿ ಮಾಡಿದೆ.

Ad Widget . Ad Widget .

ಈ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅವರು ಪ್ರಕಟಿಸಿದ್ದಾರೆ. ಆಕೆಯನ್ನು ಗಮನಿಸಿದ ಅನೇಕರು ಆಕೆಯ ಪಾಲಿಗೆ ಹೊಸ ಅದೃಷ್ಟವನ್ನೇ ತೆರೆದರು.

ಆಕೆಯನ್ನು ಸಂಪರ್ಕಿಸಿ ಆಕೆ ಫೋಟೋಶೂಟ್​ ನಡೆಸಿದ್ದಾರೆ. ಈಕೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಎಲ್ಲರ ಗಮನ ಸೆಳೆದಿದೆ.

‘ಜನವರಿ 17 ರಂದು ಅಂಡಲೂರು ಕಾವು ಉತ್ಸವದಲ್ಲಿ ಕಿಸ್ಬು ಬಲೂನ್‌ಗಳನ್ನು ಮಾರುತ್ತಿದ್ದರು. ಆಕೆಯ ಭಾವನೆಗಳು ಏನನ್ನೋ ಹೇಳುವಂತಿತ್ತು. ತಕ್ಷಣಕ್ಕೆ ನಾನು ಆಕೆಯ ಫೋಟೋ ತೆಗೆದುಕೊಂಡೆ’ ಎಂದು ಅರ್ಜುನ್ ಕೃಷ್ಣನ್ ತಿಳಿಸಿದ್ದಾರೆ.

‘ಒಂದೆರಡು ಛಾಯಾಚಿತ್ರಗಳನ್ನು ತೆಗೆದುಕೊಂಡ ನಂತರ, ಕಿಸ್ಬು ಮತ್ತು ಆಕೆಯ ತಾಯಿಗೆ ಈ ಫೋಟೋಗಳನ್ನು ತೋರಿಸಿದ ಅವರು ಖುಷಿಯಾದರು. ಇದಾದ ಬಳಿಕ ನಾನು ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದೆ’ ಎಂದಿದ್ದಾರೆ ಅರ್ಜುನ್.

ಆಕೆಯ ತಾಯಿಯನ್ನು ಸಂಪರ್ಕಿಸಿ ಫೋಟೋಶೂಟ್​​ಗೆ ಮನವಿ ಮಾಡಿದ್ದಾರೆ. ಇದಾದ ಬಳಿಕ ಆಕೆ ಫೋಟೋಶೂಟ್​ ನಡೆದಿದೆ. ಫೋಟೋ ಶೂಟ್‌ಗಾಗಿ, ಕಿಸ್ಬು ಸಾಂಪ್ರದಾಯಿಕ ಕಸವು ಸೀರೆಯಲ್ಲಿ ಚಿನ್ನದ ಆಭರಣಗಳೊಂದಿಗೆ ಗಮನ ಸೆಳೆದಿದ್ದಾರೆ.

ಫೋಟೋಗಳನ್ನು ಅರ್ಜುನ್ ಕೃಷ್ಣನ್ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ಅರ್ಜುನ್​ ಕೃಷ್ಣನ್​ ಹಂಚಿಕೊಂಡಿದ್ದು, ಮೆಚ್ಚುಗೆ ಮಹಾಪೂರವೇ ಹರಿದು ಬಂದಿದೆ.

Leave a Comment

Your email address will not be published. Required fields are marked *