Ad Widget .

‘ಆಪರೇಷನ್ ಗಂಗಾ’ ಕಾರ್ಯಾಚರಣೆಯಲ್ಲಿ ಮಂಗಳೂರಿನ ಮೈಕಲ್ ಸಲ್ದಾನ

Ad Widget . Ad Widget .

ಸಮಗ್ರ ನ್ಯೂಸ್: ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆತರುವ ‘ಆಪರೇಶನ್ ಗಂಗಾ’ ಕಾರ್ಯಾಚರಣೆಯಲ್ಲಿ ಮಂಗಳೂರು ಮೂಲದ ಪೈಲಟ್ ಕ್ಯಾಪ್ಟನ್ ಮೈಕೆಲ್‌ ಸಲ್ಡಾನ ಕೂಡಾ ಇದ್ದಾರೆ. ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದ ಪೈಲಟ್ ಆಗಿರುವ ಕ್ಯಾಪ್ಟನ್ ಮೈಕೆಲ್‌ ಸಲ್ಡಾನ ಅವರನ್ನು ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ನಿಯೋಜಿಸಲಾಗಿತ್ತು.

Ad Widget . Ad Widget .

ಈಗಾಗಲೇ ಅನೇಕ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಅವರು ತಾಯ್ನಾಡಿಗೆ ಕರೆತಂದಿದ್ದಾರೆ. ಎರಡು ವರ್ಷಗಳ ಹಿಂದೆ ಕೋವಿಡ್‌ -19 ವ್ಯಾಪಕವಾಗಿದ್ದ ಸಂದರ್ಭ ಗಲ್ಫ್ ರಾಷ್ಟ್ರಗಳಲ್ಲಿ ಅನೇಕ ಭಾರತೀಯರು ಸಿಲುಕಿಕೊಂಡಿದ್ದರು. ಆಗಲೂ ಕ್ಯಾಪ್ಟನ್ ಮೈಕೆಲ್‌ ಸಲ್ಡಾನ ಅವರು ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಪೈಲಟ್ ಆಗಿ ‘ವಂದೇ ಭಾರತ್ ಮಿಷನ್’ ಏರ್ ಲಿಫ್ಟ್ ಕಾರ್ಯಾಚರಣೆಯಲ್ಲಿ ಭಾಗವಹಿಸಿ ನೂರಾರು ಭಾರತೀಯರನ್ನು ಕರೆತಂದಿದ್ದರು.

Leave a Comment

Your email address will not be published. Required fields are marked *