Ad Widget .

ಮಂಗಳೂರು: ಮಳೆ ಅವಾಂತರ; ಲಾರಿ ಮೇಲೆ ಬಿದ್ದ ಮರ

Ad Widget . Ad Widget .

ಸಮಗ್ರ ನ್ಯೂಸ್: ನಗರದಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಸ್ಟೇಟ್ ಬ್ಯಾಂಕ್ ಬಳಿಯಿರುವ ರೋಜಾರಿಯೋ ರಸ್ತೆಯಲ್ಲಿ ಬೃಹತ್​ ಗಾತ್ರದ ಮರವೊಂದು ರಸ್ತೆಬದಿ ನಿಂತಿದ್ದ ಲಾರಿ ಮೇಲೆ ಉರುಳಿದೆ.

Ad Widget . Ad Widget .

ಅದೃಷ್ಟವಶಾತ್ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮರ ಬೀಳುತ್ತಿದ್ದಂತೆ ಚಾಲಕ ಪುರುಷೋತ್ತಮ ಲಾರಿಯಿಂದ ಕೆಳಗೆ ಜಿಗಿದಿದ್ದಾರೆ. ಶಾಲೆ-ಕಾಲೇಜು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು, ಬಿಎಸ್​ಎನ್​ಎಲ್ ಆವರಣದಿಂದ ಕಂಪೌಂಡ್ ಸಮೇತ ಮರ ಉರುಳಿದೆ.

ಪಾಂಡೇಶ್ವರ ಅಗ್ನಿಶಾಮಕ ದಳದಿಂದ ಮರ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಮರ ಉರುಳಿದ್ದರಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.

Leave a Comment

Your email address will not be published. Required fields are marked *