Ad Widget .

ದ್ವಿತೀಯ ಪಿಯುಸಿ ಅಂತಿಮ ವೇಳಾಪಟ್ಟಿ ಪ್ರಕಟ| ಇದೇ ಫೈನಲ್ ಅಂತಿದೆ ಪಿಯು ಬೋರ್ಡ್|

ಸಮಗ್ರ ನ್ಯೂಸ್: ಜೆಇಇ ಪರೀಕ್ಷೆಯಂದೇ ರಾಜ್ಯದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ದಿನಾಂಕ ಘೋಷಣೆಯಿಂದಾಗಿ, ಮತ್ತೆ ಪಿಯು ಬೋರ್ಡ್ ನಿಂದ ವಾರ್ಷಿಕ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿ, ತಾತ್ಕಾಲಿಕ ವಾರ್ಷಿಕ ವೇಳಾಪಟ್ಟಿ ಪ್ರಕಟಿಸಲಾಗಿತ್ತು.

Ad Widget . Ad Widget .

ಈ ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ದಿನಾಂಕ 22-04-2022ರಿಂದ 11-05-2022ರವರೆಗೆ ನಿಗದಿಪಡಿಸಲಾಗಿದ್ದು, ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ 05-03-2022ರ ಸಂಜೆ 5 ಗಂಟೆಯವರೆಗೆ ಸಮಯ ನೀಡಲಾಗಿತ್ತು.

Ad Widget . Ad Widget .

ಕಾಮನ್ ಲಾ ಅಡ್ಮೀಷನ್ ಟೆಸ್ಟ್ ಹಾಗು AIMA UGAT ಪರೀಕ್ಷೆ ಹಾಗು ನವೋದಯ ವಿದ್ಯಾಲಯ ಪರೀಕ್ಷೆ ನಿಗದಿಯಾಗಿರುವದರಿಂದ ಹಾಗೂ ವಿದ್ಯಾರ್ಥಿಗಳಿಂದ ಬಂದಂತಹ ಆಕ್ಷೇಪಣೆಗಳನ್ನು ಪರಿಗಣಿಸಿ, ದಿನಾಂಕ 22-04-2022ರಿಂದ 18-05-2022ರವರೆಗೆ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯನ್ನು ನಿಗದಿ ಪಡಿಸಲಾಗಿದೆ. ಇದು ಅಂತಿಮ ವೇಳಾಪಟ್ಟಿಯಾಗಿದ್ದು, ಇನ್ನೂ ಮುಂದೆ ಯಾವುದೇ ಬದಲಾವಣೆಗೆ ಅವಕಾಶವಿರುವುದಿಲ್ಲ ಎಂದು ತಿಳಿಸಿದೆ.

Leave a Comment

Your email address will not be published. Required fields are marked *