ಸಮಗ್ರ ನ್ಯೂಸ್: ತಾಲೂಕಿನ ಅಮರ ಮುಡ್ನೂರು ಸಮೀಪದ ಪೈಲಾರಿನಲ್ಲಿ ನಿಲ್ಲಿಸಿದ್ದ ಜೀಪ್ ನಿಂದ ನಗದು ಸಹಿತ ದಾಖಲೆಗಳನ್ನು ಕಳವು ಆಗಿರುವ ಘಟನೆ ಮಾ. 5 ರ ಶನಿವಾರ ನಡೆದಿದೆ.
“ಗಮನಿಸಿ:
ದಿನಾಂಕ 5 ಮಾರ್ಚ್ 2022ನೇ ಶನಿವಾರದಂದು ರಾತ್ರಿ ಪೈಲಾರಿನ ಮಡಪ್ಪಾಡಿ ಬಳಿ ನಿಲ್ಲಿಸಿದ್ದ ಜೀಪಿನಿಂದ ನಗದು ಮತ್ತು ಜೀಪಿನ ದಾಖಲೆಗಳು ಕಳವಾಗಿವೆ. ಜೀಪಿನ ಲಾಕರನ್ನು ಒಡೆದು ಸುಮಾರು ರೂ 30,000.00 ನಗದು ಮತ್ತು ದಾಖಲೆಗಳನ್ನು ಅಪರಿಚಿತರು ಲಪಟಾಯಿಸಿದ್ದು, ಈ ಕೃತ್ಯವೆಸಗಿದವರು ಕೂಡಲೇ ನಗದು ಮತ್ತು ದಾಖಲೆಗಳನ್ನು ಹಿಂದಿರುಗಿಸತಕ್ಕದ್ದು ಇಲ್ಲದಿದ್ದಲ್ಲಿ ಕಾರಣಿಕ ಸ್ಥಳಕ್ಕೆ ಹರಕೆ ಹೊರಲಾಗುವುದೆಂದು ಸಂಬಂಧಪಟ್ಟವರು ತಿಳಿಸಿರುತ್ತಾರೆ.”

ಈ ರೀತಿಯ ಒಂದು ಪೋಸ್ಟರ್ ಕೂಡ ಇದೀಗ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.