Ad Widget .

ಮಾಣಿ: ದ್ವಿಚಕ್ರ ವಾಹನಕ್ಕೆ‌ ಢಿಕ್ಕಿ‌ ಹೊಡೆದ ಲಾರಿ| ತಂದೆ ಗಂಭೀರ, ಬಾಲಕ ಸಾವು|

ಸಮಗ್ರ ನ್ಯೂಸ್: ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ -75ರ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ಇಂದು ಸಂಜೆ ದ್ವಿಚಕ್ರ ವಾಹನ ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿದ್ದು, ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

Ad Widget . Ad Widget .

ಗಡಿಯಾರ ನಿವಾಸಿ ದಿನೇಶ್‌ ಶೆಟ್ಟಿ ಅವರ ಪುತ್ರ ಅದ್ವೀತ್ (12) ಮೃತಪಟ್ಟ ಬಾಲಕ . ಈತನ ತಂದೆ ದಿನೇಶ್‌ ಶೆಟ್ಟಿಯವರು ಕೂಡ ಗಾಯಗೊಂಡಿದ್ದು ,ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

Ad Widget . Ad Widget .

ಮೃತ ಬಾಲಕ ಅದ್ವೀತ್ ಬುಡೋಳಿ ಖಾಸಗೀ ಶಾಲೆಯಲ್ಲಿ 6 ನೇ ತರಗತಿಯಲ್ಲಿ ಓದುತ್ತಿದ್ದ . ಆತನನ್ನು ಸಂಜೆ ಶಾಲೆಯಿಂದ ಮನೆಗೆ ತನ್ನ ದ್ವಿಚಕ್ರ ವಾಹನದಲ್ಲಿ ತಂದೆ ಕರೆದುಕೊಂಡು ಬರುತ್ತಿದ್ದಾಗ ಗಡಿಯಾರ ಸಮೀಪ ಕರೆ ಎಂಬಲ್ಲಿ ಈಚರ್‌ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಮಂಗಳೂರಿನಿಂದ ಬೆಂಗಳೂರಿನತ್ತ ತೆರಳುತ್ತಿತ್ತು. ಅಪಘಾತದ ತೀವ್ರತೆಗೆ ದ್ವಿಚಕ್ರವಾಹನ ಸಂಪೂರ್ಣ ನುಜ್ಜುಗುಜ್ಜಾಗಿದೆ. ಅಪಘಾತದ ಬಳಿಕ ಲಾರಿ ಸ್ಥಳದಿಂದ ಪರಾರಿಯಾಗಿತ್ತು.

ಲಾರಿ ಪರಾರಿಯಾಗಿರುವ ಮಾಹಿತಿಯನ್ನು ಸ್ಥಳೀಯರು ರವಾನಿಸಿದ್ದು , ನೆಲ್ಯಾಡಿ ಬಳಿ ಆ ಲಾರಿಯನ್ನು ಸಾರ್ವಜನಿಕರು ತಡೆದು ನಿಲ್ಲಿಸಿದ್ದಾರೆ ಎನ್ನಲಾಗಿದೆ . ಲಾರಿ ಓವರ್ ಟೇಕ್ ಮಾಡುವ ಭರದಲ್ಲಿ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *