Ad Widget .

‘ಆಪರೇಷನ್ ಗಂಗಾ’ ಯಶಸ್ವಿ| 16 ಸಾವಿರ ಭಾರತೀಯ ವಿದ್ಯಾರ್ಥಿಗಳ ಏರ್ ಲಿಪ್ಟ್ ಪೂರ್ಣ|

Ad Widget . Ad Widget .

ಸಮಗ್ರ ನ್ಯೂಸ್: ಯುದ್ಧಭೂಮಿ ಉಕ್ರೇನ್ ನಿಂದ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ‘ಆಪರೇಷನ್ ಗಂಗಾ’ ಸ್ಥಳಾಂತರ ಪ್ರಕ್ರಿಯೆ ಆರಂಭಿಸಿದ ನಂತರ ಬುಡಾಪೆಸ್ಟ್ ನಿಂದ ಕೊನೆಯ ಬ್ಯಾಚಿನ 6, 711 ಭಾರತೀಯ ವಿದ್ಯಾರ್ಥಿಗಳೊಂದಿಗೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ಹಂಗೇರಿಯಿಂದ ನವದೆಹಲಿಗೆ ವಾಪಸ್ಸಾದರು.

Ad Widget . Ad Widget .

ಈ ಕುರಿತು ಟ್ವೀಟರ್ ನಲ್ಲಿ ಸಂತಸ ವ್ಯಕ್ತಪಡಿಸಿರುವ ಸಚಿವರು, ದೇಶದ ಯುವ ಜನರು, ಇದೀಗ ತಮ್ಮ ತಮ್ಮ ಸ್ಥಳಗಳಿಗೆ ತೆರಳಬಹುದಾಗಿದೆ. ತಮ್ಮ ಪೋಷಕರು ಮತ್ತು ಕುಟುಂಬಸ್ಥರನ್ನು ಸೇರಬಹುದಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ವಾರದಲ್ಲಿ, 16,000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್‌ನಿಂದ ‘ಆಪರೇಷನ್ ಗಂಗಾ’ ಅಡಿಯಲ್ಲಿ ಸ್ಥಳಾಂತರಿಸಲಾಗಿದೆ. ಖಾರ್ಕಿವ್ ಮತ್ತು ಸುಮಿಯನ್ನು ಹೊರತುಪಡಿಸಿ, ಉಕ್ರೇನ್‌ನ ಉಳಿದ ಪ್ರದೇಶಗಳಿಂದ ಬಹುತೇಕ ಎಲ್ಲ ಭಾರತೀಯರನ್ನು ಸ್ಥಳಾಂತರಿಸಲಾಗಿದೆ.

Leave a Comment

Your email address will not be published. Required fields are marked *