ಸಮಗ್ರ ನ್ಯೂಸ್: ಮುಜುರಾಯಿ ಸಚಿವರ ಮಗಳು ಪ್ರಿಯಕರನೊಂದಿಗೆ ಓಡಿ ಹೋಗಿ ಮದುವೆಯಾದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ರಾಜ್ಯದ ಮುಜರಾಯಿ ಸಚಿವ ಶೇಖರ್ ಬಾಬು ಮಗಳು ಮದುವೆಯಾಗಿದ್ದಾರೆ.

ಪ್ರಿಯಕರ ಸತೀಶ್ ಕುಮಾರ್ ಹಾಗೂ ಮುಜರಾಯಿ ಸಚಿವ ಶೇಖರ್ ಬಾಬು ಮಗಳು ಜಯ ಕಲ್ಯಾಣಿ, ಪ್ರೇಮ ಪ್ರಕರಣ ತಮಿಳುನಾಡಿನಲ್ಲಿ ಗದ್ದಲ ಸೃಷ್ಟಿ ಮಾಡಿದ್ದು, ಯುವತಿ ರಕ್ಷಣೆ ಕೋರಿ ಪ್ರಿಯಕರ ಸತೀಶ್ ಕುಮಾರ್ ಜೊತೆ ಕರ್ನಾಟಕಕ್ಕೆ ಬಂದಿದ್ದಾರೆ.

ಕರ್ನಾಟಕದ ಹಡಗಲಿ ತಾಲೂಕಿನ ಹಾಲಸ್ವಾಮಿ ಮಠದಲ್ಲಿ ಮದುವೆಯಾಗಿರುವ ಈ ಜೋಡಿ ಸದ್ಯ, ಬೆಂಗಳೂರಿನ ಕಮಿಷನರ್ ಕಚೇರಿಗೆ ಆಗಮಿಸಿ ಜೀವ ಬೆದರಿಕೆ ಇದೆ ರಕ್ಷಣೆ ಕೊಡಿ ಎಂದು ಮನವಿ ಮಾಡಿದ್ದಾರೆ.