ಸಮಗ್ರ ನ್ಯೂಸ್: ಯುದ್ಧಪೀಡಿತ ಉಕ್ರೇನ್‌ನಲ್ಲಿ ಕಳೆದ ಹಲವು ದಿನಗಳಿಂದ ಜೀವಭಯದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಹೀನಾ ಫಾತಿಮಾ ಆಪರೇಷನ್ ಗಂಗಾ ಕಾರ್ಯಾಚರಣೆ ಮೂಲಕ ಕೊನೆಗೂ ತವರಿಗೆ ಮರಳಿದ್ದಾರೆ.
ಉಕ್ರೇನ್‌ನ ಭಯಾನಕ ಸ್ಥಿತಿ, ಭಾರತೀಯ ರಾಯಭಾರಿ ಕಚೇರಿ ನೆರವಾದ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಹೀನಾ ಫಾತಿಮಾ ಮಾಧ್ಯಮಗಳ ಮುಂದೆ ತೆರೆದಿಟ್ಟಿದ್ದಾರೆ. ಖಾರ್ಕೀವ್‌ನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಹೀನಾ ಫಾತಿಮಾ, ಖಾರ್ಕೀವ್‌ನಿಂದ ಪೋಲೆಂಡ್‌ಗೆ ಬಂದು ಅಲ್ಲಿಂದ ದೆಹಲಿ ತಲುಪಿ. ಬೆಂಗಳೂರಿಗೆ ಆಗಮಿಸಿದ ಅಲ್ಲಿಂದ ಮಂಗಳೂರಿಗೆ ಆಗಮಿಸಿರು.
ಈ ವೇಳೆ ಮಾತನಾಡಿದ ಹೀನಾ, ”ಭಾರತೀಯ ರಾಯಭಾರ ಕಚೇರಿ ತುಂಬಾ ಸಹಾಯ ಮಾಡಿದೆ. ನಾನು ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಅವರಿಗೆ ಹೃದಯಪೂರ್ವಕ ಧನ್ಯವಾದ ಹೇಳುತ್ತೇನೆ. ಅಲ್ಲಿಂದ ನಮಗೆ ಆಹಾರ, ವಸತಿ ಎಲ್ಲಾ ಕೊಟ್ಟು ರಾಯಭಾರಿ ಕಚೇರಿ ಚೆನ್ನಾಗಿ ನೋಡಿಕೊಂಡಿದೆ” ಎಂದು ವಿವರಿಸಿದರು.