ಸಮಗ್ರ ನ್ಯೂಸ್: ನರ್ಸಿಂಗ್ ಕಾಲೇಜೊಂದರ ಪ್ರಾಂಶುಪಾಲೆಯನ್ನು ಹತ್ಯೆಗೈದು ಕಾರಿನಲ್ಲಿ ಆಕೆಯ ಶವವನ್ನು ಸುಟ್ಟುಹಾಕಿದ ಆರೋಪದ ಮೇಲೆ ನೌಕರನನ್ನು ಬಂಧಿಸಲಾಗಿರುವ ಘಟನೆ ದಮನ್ ನ ದಾದ್ರಾ ನಗರದಲ್ಲಿ ನಡೆದಿದೆ
45ರ ಹರೆಯದ ಕನಿಮೊಳಿ ಆರ್ಮುಗಂ ಎಂಬಾಕೆ ನಾಪತ್ತೆಯಾಗಿರುವ ಕುರಿತು ಮಾರ್ಚ್ 1ರಂದು ಸಿಲ್ವಾಸ್ಸಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು, ದಮನ್‌ನ ಕಾಲೇಜಿನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಸವನ್ ಪಟೇಲ್‌ನ ಮೇಲೆ ತಾಂತ್ರಿಕ ಕಣ್ಗಾವಲು ಮತ್ತು ಇತರ ರೀತಿಯ ಇನ್‌ಪುಟ್‌ಗಳನ್ನು ಬಳಸುವ ತಂಡಗಳು ಆರೋಪಿ ಎಂದು ಖಚಿತಪಡಿಸಿಕೊಂಡು ಬಂಧಿಸಿದ್ದಾರೆ.
“ಸಂತ್ರಸ್ತೆ ಮೆಸ್ ಫಂಡ್ ಮತ್ತು ಪ್ರವೇಶ ಶುಲ್ಕದಲ್ಲಿ ಪಟೇಲ್ ಮಾಡಿದ್ದ ಹಣಕಾಸಿನ ಅಕ್ರಮಗಳ ಬಗ್ಗೆ ತಿಳಿದುಕೊಂಡಿದ್ದರು ಮತ್ತು ಹಲವಾರು ಸಂದರ್ಭಗಳಲ್ಲಿ ಅವರನ್ನು ಎದುರು ಹಾಕಿ ಕೊಂಡಿದ್ದರು. ಫೆಬ್ರವರಿ 28 ರಂದು, ಹಣ ದುರುಪಯೋಗದ ವಿವರಗಳನ್ನು ನೀಡುವುದಾಗಿ ಭರವಸೆ ನೀಡಿದ ನಂತರ ಅವರು ಪಟೇಲ್ ಬಳಿ ತಮ್ಮ ಕಾರಿನಲ್ಲಿ ಲಿಫ್ಟ್ ಗಾಗಿ ಕನಿಮೊಳಿ ಮನವಿ ಮಾಡಿದ್ದರು. ಸಮಯ ಸಾಧಿಸಿ ಆತ ಕಾರಿನೊಳಗೆ ಕನಿಮೊಳಿ ಅವರನ್ನು ಕೊಂದು ನಂತರ ವಾಪಿ ಪಟ್ಟಣದ ಕ್ವಾರಿಯಲ್ಲಿ ಶವದೊಂದಿಗೆ ಕಾರನ್ನು ಸುಟ್ಟು ಹಾಕಿದ್ದ. ಆರೋಪಿಯನ್ನು ಸುಟ್ಟ ಅವಶೇಷಗಳ ಸ್ಥಳಕ್ಕೆ ಪೊಲೀಸರು ಕರೆದೊಯ್ದ ಪರಿಶೀಲನೆ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.