Ad Widget .

ಸುಳ್ಯ: ಪ್ರತಿಷ್ಟಿತ ಕಾಲೇಜೊಂದರ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ| ಆರೋಪಿ ಕೈಗೆ ಕೋಳ ಬಿಗಿದ ಪೊಲೀಸರು|

ಸಮಗ್ರ ನ್ಯೂಸ್ : ಪುತ್ತೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸುಳ್ಯ ತಾಲೂಕಿನ ಐವರ್ನಾಡು ಮೂಲದ ರಕ್ಷಿತ್ ಎಂಬಾತನ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದೆ.

Ad Widget . Ad Widget .

ಆರೋಪಿಯ ವಿರುದ್ದ ಐಪಿಸಿ ಕಲಂ 354 A , 506 ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಈತ ಸಂಘಟನೆಯೊಂದರ ಸಂಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿದು ಬಂದಿದೆ.

Ad Widget . Ad Widget .

ಸಂತ್ರಸ್ತೆ ಅಪ್ರಾಪ್ತೆಯಾಗಿದ್ದು, ಬಾಲಕಿಯನ್ನು ಆರೋಪಿ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಸಂತ್ರಸ್ತ ಬಾಲಕಿಯು ಸುಳ್ಯದ ಪ್ರತಿಷಿತ ಕುಟುಂಬವೊಂದಕ್ಕೆ ಸೇರಿದವಳೆಂದು ಹೇಳಲಾಗಿದ್ದು, ಈ ವಿಚಾರ ಬಾಲಕಿಯ ಮನೆಯವರಿಗೆ ತಿಳಿದು ಅವರು ರಕ್ಷಿತನ್ನು ಕರೆದು ಬುದ್ದಿವಾದ ಹೇಳಿದ್ದರು. ಇದೇ ವಿಚಾರವಾಗಿ ಬಾಲಕಿಯ ತಂದೆ, ಸಹೋದರ ಹಾಗೂ ಆರೋಪಿಯ ಮಧ್ಯೆ ಎರಡು ತಿಂಗಳ ಹಿಂದೆ ಗಲಾಟೆಯಾಗಿ ಪ್ರಕರಣ ಠಾಣೆ ಮೆಟ್ಟೇಲಿರಿತ್ತು. ಆ ಸಂದರ್ಭ ಬಾಲಕಿಯ ತಂದೆ ನೀಡಿದ ದೂರಿನಂತೆ ಆರೋಪಿ ರಕ್ಷಿತ್‌ ವಿರುದ್ದ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆ ಬಳಿಕವೂ ರಕ್ಷಿತ್ ಬಾಲಕಿ ವಾಸ್ತವ್ಯ ಹೂಡಿದ್ದ ಪುತ್ತೂರಿನ ಹಾಸ್ಟೇಲ್ ವಾರ್ಡನ್ ಗೆ ಕರೆ ಮಾಡಿ ತಾನೂ ಸಂತ್ರಸ್ತೆಯ ಅಣ್ಣನೆಂದು ಸುಳ್ಳು ಹೇಳಿ ಆಕೆಗೆ ಫೋನ್‌ ನೀಡಲು ತಿಳಿಸುತ್ತಿದ್ದ . ಈ ವೇಳೆ ಬಾಲಕಿ ಬಳಿ ಹೊರಗಡೆ ಎಲ್ಲಾದರೂ ಭೇಟಿಯಾಗುವಂತೆ ಒತ್ತಾಯಿಸುತ್ತಿದ್ದ ಹಾಗೂ ಬಾಲಕಿ ಬರಲು ನಿರಾಕರಿಸಿದಾಗ ಕೊಲ್ಲುವ ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಆರೋಪಿಯ ಜೀವ ಬೆದರಿಕೆಯಿಂದ ಹೆದರಿದ ಬಾಲಕಿಯೂ ಫೆ 27 ರಂದು ಪುತ್ತೂರಿನ ಯಾತ್ರಿ ಸ್ಥಳ ಬೀರುಮಲೆ ಗುಡ್ಡೆಗೆ ಬರುವುದಾಗಿ ತಿಳಿಸಿದ್ದಾಳೆ. ಅಲ್ಲಿಗೆ ಆಕೆ ತೆರಳಿದ ಸಂದರ್ಭ ಆರೋಪಿ ಆಕೆಯನ್ನು ಬಲವಂತವಾಗಿ ಅಪ್ಪಿಕೊಂಡು ಮುತ್ತಿಕ್ಕಿ ಲೈಂಗಿಕ ದೌರ್ಜನ್ಯ ಎಸಗಿರುತ್ತಾನೆ . ಕೂಡಲೇ ಬಾಲಕಿಯೂ ಅಲ್ಲಿಂದ ತಪ್ಪಿಸಿಕೊಂಡು ಹಾಸ್ಟೆಲ್‌ ಗೆ ಬಂದಿದ್ದಾಳೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಬಂದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪುತ್ತೂರು ಮಹಿಳಾ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *