ಸಮಗ್ರ ನ್ಯೂಸ್: ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿ ಭಾಗಶಃ ಕೈವಶಪಡಿಸಿಕೊಂಡಿರುವ ರಷ್ಯಾ ಶನಿವಾರ ತಾತ್ಕಾಲಿಕ ಯುದ್ಧ ವಿರಾಮ ಘೋಷಿಸಿದೆ. ಯುದ್ಧ ಘೋಷಣೆ ಮಾಡಿ 11 ದಿನಗಳ ಬಳಿಕ ರಷ್ಯಾ ಈ ನಿರ್ಧಾರವನ್ನು ಇಂದು ಬೆಳಗ್ಗೆ 6 ಗಂಟೆಗೆ ಘೋಷಿಸಿದೆ.
ನಾಗರಿಕರನ್ನು ತೆರವುಗೊಳಿಸಲು ಅನುಕೂಲವಾಗುವಂತೆ ಮಾನವೀಯ ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ರಷ್ಯಾ ತಿಳಿಸಿದೆ. ಉಭಯ ದೇಶಗಳ ನಡುವೆ 2 ಸುತ್ತಿನ ಮಾತುಕತೆ ನಡೆದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಯುದ್ಧದ 10 ದಿನವಾದ ಇಂದು ಬೆಳಗ್ಗೆ 10ರಿಂದ ಕದನ ವಿರಾಮಕ್ಕೆ ರಷ್ಯಾ ಕರೆ ನೀಡಲಾಗಿದೆ. ಮಾರಿಯುಪೋಲ್ ಮತ್ತು ವೊಲ್ನೋವಾಖಾದಿಂದ ನಾಗರಿಕರನ್ನು ಸ್ಥಳಾಂತರ ಮಾಡಲು ಕದನ ವಿರಾಮ ಘೋಷಣೆ ಮಾಡಲಾಗಿದೆ.
ಇದಕ್ಕೂ ಮುನ್ನ ಬೆಲಾರಸ್‌ನ ಬ್ರೆಸ್ಟ್‌ನಲ್ಲಿ ನಡೆದ ಎರಡನೇ ಸುತ್ತಿನ ಮಾತುಕತೆಯಲ್ಲಿ ನಾಗರಿಕರ ಸ್ಥಳಾಂತರದ ಕುರಿತಂತೆ ಚರ್ಚೆ ನಡೆಸಲಾಗಿತ್ತು ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ. ಈ ವೇಳೆ ರಷ್ಯಾ ತಕ್ಷಣದ ಕದನ ವಿರಾಮವನ್ನು ಘೋಷಿಸಬೇಕು ಎಂದು ಉಕ್ರೇನ್ ಸರ್ಕಾರ ಒತ್ತಾಯ ಮಾಡಿತ್ತು.