Ad Widget .

ಆಕ್ಷೇಪಾರ್ಹ ಪೋಸ್ಟ್ ಮಾಡಿದ ಮಂಗಳೂರು ಮುಸ್ಲಿಂ ಪೇಜ್ ಕುರಿತು ಸಿಐಡಿ‌ ತನಿಖೆ

ಸಮಗ್ರ ನ್ಯೂಸ್: ಶಿವಮೊಗ್ಗದಲ್ಲಿ ನಡೆದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣವೂ ಸೇರಿದಂತೆ ವಿವಾದಾತ್ಮಕ, ಆಕ್ಷೇಪಾರ್ಹ ಬರಹಗಳನ್ನು ಪೋಸ್ಟ್ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದ್ದ ಆರೋಪದ ಮೇಲೆ ಮಂಗಳೂರು ಮುಸ್ಲಿಂ ಫೇಸ್​​ಬುಕ್ ಖಾತೆ ಕುರಿತಾದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ.

Ad Widget . Ad Widget .

ಮಂಗಳೂರು ಮುಸ್ಲಿಂ ಪೇಜ್​​​​ನಲ್ಲಿ ಹತ್ಯೆಯಾದ ಹರ್ಷನ ಬಗ್ಗೆ ಆಕ್ಷೇಪಾರ್ಹ ಬರಹವನ್ನು ಪೋಸ್ಟ್ ಮಾಡಿದ್ದಲ್ಲದೆ ಸುದ್ದಿವಾಹಿನಿಯ ನಿರೂಪಕರು, ರಾಜ್ಯದ ಸಚಿವರ ಬಗ್ಗೆ ಆಕ್ಷೇಪಾರ್ಹ ಬರಹವನ್ನು ಪೋಸ್ಟ್ ಮಾಡಲಾಗಿತ್ತು ಎನ್ನಲಾಗುತ್ತಿದೆ. ಆದ್ದರಿಂದ ಈ ಪೋಸ್ಟ್‌ ಬಗ್ಗೆ ಮಂಗಳೂರು ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದರು.

Ad Widget . Ad Widget .

ಈ ಫೇಸ್​ಬುಕ್​ ಖಾತೆಯನ್ನು ಬ್ಲಾಕ್ ಮಾಡಲು ಮಂಗಳೂರು ಪೊಲೀಸರು ಫೇಸ್​ಬುಕ್​ ಸಂಸ್ಥೆಗೆ ಮಾಹಿತಿ ಕೇಳಿದ್ದರು. ಇದೀಗ ಈ ಪೇಜ್ ಸಮಗ್ರ ತನಿಖೆಗೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *