Ad Widget .

ಚಾಮರಾಜನಗರ: ಕಲ್ಲು ಕ್ವಾರೆಯಲ್ಲಿ ಬಂಡೆ ಕುಸಿತ; 10 ಕ್ಕೂ ಹೆಚ್ಚು ಸಾವಿನ ಶಂಕೆ

Ad Widget . Ad Widget .

ಸಮಗ್ರ ನ್ಯೂಸ್: ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿಯ ಬಿಳಿಕಲ್ಲು ಕ್ವಾರಿಯಲ್ಲಿ ಗುರುವಾರ ಬಂಡೆ ಕುಸಿದಿದ್ದು, 10ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

Ad Widget . Ad Widget .

ಬೊಮ್ಮಲಾಪುರ ಗ್ರಾಮದ ಮಹೇಂದ್ರಪ್ಪ ಎಂಬುವವರ ಜಾಗದಲ್ಲಿ ಕೇರಳ ಮೂಲದ ಉದ್ಯಮಿ ಹಕೀಮ್​ ಎಂಬಾತ ಗುತ್ತಿಗೆ ಪಡೆದು ಬಿಳಿಕಲ್ಲು ಗಣಿಗಾರಿಕೆ ನಡೆಸುತ್ತಿದ್ದರು ಎಂದು ಹೇಳಲಾಗಿದೆ.

ಗಣಿಗಾರಿಕೆ ವೇಳೆ ಬಂಡೆಯೊಂದು ಜೆಸಿಬಿ ಮತ್ತು ಟಿಪ್ಪರ್​ ಮೇಲೆ ಬಿದ್ದಿದ್ದು, 10ಕ್ಕೂ ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಕಾರ್ಮಿಕರು ರಾಜಸ್ಥಾನ, ಉತ್ತರ ಪ್ರದೇಶ ಮೂಲದವರು ಎನ್ನಲಾಗಿದೆ.

Leave a Comment

Your email address will not be published. Required fields are marked *