ಸಮಗ್ರ ಡಿಜಿಟಲ್ ಡೆಸ್ಕ್: ಪ್ರೀತಿಗೆ ಯಾವುದೇ ಕಂಡೀಷನ್ಸ್ ಇಲ್ಲ. ಸುಮ್ಮನೆ ಹಾಗೆಯೇ ಪ್ರೀತಿ ಆಗಿಬಿಡುತ್ತದೆ. ಮತ್ತೆ ಕಾಣಿಸುವ ಸರಿ ತಪ್ಪುಗಳೆಲ್ಲವೂ ನಂತರ ನಗಣ್ಯ. ಇತ್ತೀಚೆಗ ಝಾರ್ಕಂಡ್ನಲ್ಲಿ ಇಂಥದ್ದೇ ಪ್ರೇಮ ಪ್ರಸಂಗ ನಡೆದಿದೆ. ಇವರ ಪ್ರೇಮವೋ, ಸಂಬಂಧವೋ ಎರಡವೂ ವಿಚಿತ್ರವಾಗಿದೆ. ಅಮ್ಮನ ಸ್ಥಾನದಲ್ಲಿರುವ ಚಿಕ್ಕಮ್ಮನನ್ನೇ ಈತ ಮದುವೆಯಾಗಿದ್ದಾನೆ. ಅದೆಂಥಾ ಪ್ರೀತಿಯೋ ಇವರಿಗೆ ತಮ್ಮ ನಡುವಿನ ಸಂಬಂಧ ಕೂಡಾ ಪ್ರೀತಿಗಿಂತ ದೊಡ್ಡದಲ್ಲ ಎಂದು ಸಾಬೀತು ಮಾಡಿದ್ದಾರೆ ಈ ಜೋಡಿ. ಈ ಯುವಕನಿಗೆ ಅಪ್ಪನೇ ಅಣ್ಣನೂ ಆಗಿಬಿಟ್ಟಿದ್ದಾನೆ.
ತಾಯಿಯ ತಂಗಿಯನ್ನು ಈ ವ್ಯಕ್ತಿ ಮದುವೆಯಾಗಿದ್ದಾನೆ. ಹೈದರಾಬಾದ್‌ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ತನ್ನ ಚಿಕ್ಕಮ್ಮನೊಂದಿಗೆ ಪ್ರೇಮವಿವಾಹ ಮಾಡಿಕೊಂಡು ಎಲ್ಲರನ್ನು ಅಚ್ಚರಿಗೊಳಿಸಿದ್ದಾನೆ.
ಆ ವ್ಯಕ್ತಿ ತನ್ನ ಸ್ವಂತ ತಾಯಿಯ ತಂಗಿಯನ್ನು ವರಿಸಿಕೊಂಡು ಗ್ರಾಮಕ್ಕೆ ಹಿಂತಿರುಗಿದಾಗ, ಈ ಸಂಬಂಧವನ್ನು ಅನುಮೋದಿಸಲು ಗ್ರಾಮಸ್ಥರು ಸಿದ್ಧರಿರಲಿಲ್ಲ. ಹೀಗಿರುವಾಗ ಆ ಪ್ರೇಮಿಗಳು ಪೊಲೀಸ್ ಆಶ್ರಯದ ಮೊರೆ ಹೋಗಬೇಕಾಯಿತು. ಸದ್ಯ ನವ ದಂಪತಿಗಳು ಹೊಸ ಬಾಳಿನಲ್ಲಿ ತೇಲುತ್ತಿದ್ದಾರೆ.