ಸಮಗ್ರ ನ್ಯೂಸ್: ಕೋವಿಡ್ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಸಂಚಾರದ ಮೇಲೆ ವಿಧಿಸಲಾಗಿರುವ ನಿರ್ಬಂಧವನ್ನು ಮುಂದಿನ ಆದೇಶದವರೆಗೆ ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ.
ಆದರೆ, ಏರ್ ಬಬಲ್ ವ್ಯವಸ್ಥೆಗಳ ಅಡಿಯಲ್ಲಿ ವಿಶೇಷ ಪ್ರಯಾಣಿಕ ವಿಮಾನಗಳು 2020ರ ಜುಲೈ ತಿಂಗಳಿನಿಂದ ಸುಮಾರು 45 ದೇಶಗಳಿಗೆ ಭಾರತದಿಂದ ಸಂಚಾರ ನಡೆಸುತ್ತಿವೆ. ಏರ್ ಬಬಲ್ ವ್ಯವಸ್ಥೆ ಅಡಿಯಲ್ಲಿ ಕಾರ್ಯನಿರ್ವಹಿಸುವ ವಿಮಾನಗಳಿಗೆ ಮತ್ತು ಡಿಜಿಸಿಎ ಅನುಮತಿ ಪಡೆದ ಸರಕು ಸಾಗಣೆಯ ಅಂತರರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಈ ನಿರ್ಬಂಧ ಅನ್ವಯಿಸುವುದಿಲ್ಲ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
2020ರ ಮಾರ್ಚ್ 23ರ ರಿಂದ ಅಂತರರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. 2021ರ ಡಿಸೆಂಬರ್ 15 ರಿಂದ ಸಂಚಾರ ಆರಂಭಿಸಲಾಗುವುದು ಎಂದು ನವೆಂಬರ್ 26 ರಂದು ಸುತ್ತೋಲೆ ಹೊರಡಿಸಲಾಗಿತ್ತು. ಆದರೆ, ಡಿಸೆಂಬರ್ 1 ರಂದು ಈ ಸುತ್ತೋಲೆಯನ್ನು ಡಿಜಿಸಿಎ ಹಿಂದಕ್ಕೆ ಪಡೆದಿತ್ತು. ಫೆಬ್ರವರಿ 28ರ ವರೆಗೆ ನಿರ್ಬಂಧವನ್ನು ವಿಸ್ತರಿಸಿ ಜನವರಿ 19 ರಂದು ಮತ್ತೆ ಸುತ್ತೋಲೆ ಹೊರಡಿಸಲಾಗಿತ್ತು. ಈಗ ಮತ್ತೆ ನಿಗದಿತ ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಸಂಚಾರದ ನಿರ್ಬಂಧವನ್ನು ವಿಸ್ತರಿಸಲಾಗಿದೆ.