February 2022

ರಾಜ್ಯದ ಬಾಲಮಂದಿರಗಳಿಂದ 141 ಮಕ್ಕಳು ನಾಪತ್ತೆ

ಸಮಗ್ರ ನ್ಯೂಸ್: ರಾಜ್ಯದ ವಿವಿಧ ಬಾಲಮಂದಿರಗಳಿಂದ 141 ಮಕ್ಕಳು ನಾಪತ್ತೆಯಾಗಿದ್ದಾರೆ. ಈ ಮಕ್ಕಳನ್ನು ಇದುವರೆಗೆ ಪತ್ತೆ ಹಚ್ಚಲಾಗಿಲ್ಲ. ಹೀಗಾಗಿ ಕೆರಳಿರುವ ಹೈಕೋರ್ಟ್, ಮಕ್ಕಳ ಪತ್ತೆಗಾಗಿ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎನ್ನುವ ತನಿಖಾ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸಿದೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಕೆ.ಸಿ ರಾಜಣ್ಣ ಎಂಬುವರು ಸಲ್ಲಿಸಿದ್ದಂತ ಪಿಐಎಲ್ ಅರ್ಜಿಯ ವಿಚಾರಣೆ ನಡೆಸಿದಂತ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಆವಸ್ತಿಯವರ ವಿಭಾಗೀಯ ಪೀಠವು, 141 ಮಕ್ಕಳನ್ನು ಪತ್ತೆ ಹಚ್ಚಲು ಯಾವೆಲ್ಲಾ ಕ್ರಮ ಕೈಗೊಳ್ಳಲಾಗಿದೆ […]

ರಾಜ್ಯದ ಬಾಲಮಂದಿರಗಳಿಂದ 141 ಮಕ್ಕಳು ನಾಪತ್ತೆ Read More »

ಮಂಗಳೂರು ವಿಮಾನ ನಿಲ್ದಾಣದಲ್ಲಿ ಆಪ್ ಆಧಾರಿತ ಟ್ಯಾಕ್ಸಿ

ಸಮಗ್ರ ನ್ಯೂಸ್: ಪ್ರಯಾಣಿಕರ ಅನುಕೂಲಕ್ಕಾಗಿ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಆಪ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಓಲಾ ಮತ್ತು ಉಬರ್ ಟ್ಯಾಕ್ಸಿ ಸೇವೆಗಳು ಈ ಸೇವೆಯನ್ನು ನಡೆಸಲು ಆಸಕ್ತಿ ತೋರಿಸಿವೆ ಎಂದು ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಅವರಿಗೆ ಪ್ರತ್ಯೇಕ ಪಾರ್ಕಿಂಗ್ ಸ್ಲಾಟ್‌ಗಳನ್ನು ನೀಡಲಾಗಿದೆ. ವಿಮಾನ ನಿಲ್ದಾಣದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಇತರ ಪ್ರಿ-ಪೇಯ್ಡ್ ಟ್ಯಾಕ್ಸಿ ಸೇವೆಗಳು ಮುಂದುವರಿಯಲಿವೆ. ಅವರಿಗೂ ವಿಮಾನ ನಿಲ್ದಾಣದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರಯಾಣಿಕರು ಪ್ರೀಪೇಯ್ಡ್ ಬೂತ್‌ನಲ್ಲಿ ಟ್ಯಾಕ್ಸಿಗಳನ್ನು ಬುಕ್

ಮಂಗಳೂರು ವಿಮಾನ ನಿಲ್ದಾಣದಲ್ಲಿ ಆಪ್ ಆಧಾರಿತ ಟ್ಯಾಕ್ಸಿ Read More »

ದೇವಾಲಯಕ್ಕೆ ಆನ್‌ಲೈನ್ ಮೂಲಕ ಕಾಣಿಕೆ ವ್ಯವಸ್ಥೆಗೆ ಸಿಎಂ ಚಾಲನೆ| ಏನಿದು ಯೋಜನೆ? ಇಲ್ಲಿದೆ ಮಾಹಿತಿ

ಬೆಂಗಳೂರು: ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ಸಮಗ್ರ ದೇವಾಲಯ ನಿರ್ವಹಣಾ ವ್ಯವಸ್ಥೆ ಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೆ.23ರಂದು ಲೋಕಾರ್ಪಣೆ ಮಾಡಲಿದ್ದಾರೆ. ಐಟಿಎಂಎಸ್ ಯೋಜನೆಯಿಂದ ಒಂದೇ ವೆಬ್‌ಸೈಟ್‌ನಲ್ಲಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ದೇವಾಲಯಗಳ ಸಮಗ್ರ ಮಾಹಿತಿಗಳು ಜನರ ಬೆರಳ ತುದಿಯಲ್ಲೇ ಲಭ್ಯವಿರಲಿವೆ. ಅಲ್ಲದೇ ದೇವಾಲಯಗಳಲ್ಲಿ ಲಭ್ಯವಿರುವ ಸೇವೆಗಳನ್ನು ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡುವ ವ್ಯವಸ್ಥೆ ಇರಲಿದೆ. ದೇವಾಲಯಗಳಲ್ಲಿ ನಡೆಯುವ ಉತ್ಸವ, ಜಾತ್ರೆಗಳು, ಹಬ್ಬ ಹರಿದಿನಗಳ ವಿವರಗಳನ್ನು ಸಾರ್ವಜನಿಕರಿಗೆ/ಭಕ್ತಾದಿಗಳಿಗೆ ಪಡೆಯಲು ಅನುಕೂಲವಾಗುವಂತೆ ಐಟಿಎಂಎಸ್ ತಂತ್ರಾಂಶದಲ್ಲಿ ಮಾಹಿತಿಗಳನ್ನು

ದೇವಾಲಯಕ್ಕೆ ಆನ್‌ಲೈನ್ ಮೂಲಕ ಕಾಣಿಕೆ ವ್ಯವಸ್ಥೆಗೆ ಸಿಎಂ ಚಾಲನೆ| ಏನಿದು ಯೋಜನೆ? ಇಲ್ಲಿದೆ ಮಾಹಿತಿ Read More »

ಹಿಜಾಬ್ ತೆಗೆದಿಡಲು ಪ್ರತ್ಯೇಕ ಸ್ಥಳ ಕಲ್ಪಿಸಿ| ಪ.ಪೂ ಇಲಾಖೆಗೆ ಹೈಕೋರ್ಟ್ ಸೂಚನೆ

ಸಮಗ್ರ ನ್ಯೂಸ್ ಡೆಸ್ಕ್: ಹಿಜಾಬ್ ಅನುಮತಿ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯುತ್ತಿದೆ. ಈ ಸಂದರ್ಭದಲ್ಲಿಯೇ ಹೈಕೋರ್ಟ್ ಮಧ್ಯಂತರ ಆದೇಶದ ಹಿನ್ನಲೆಯಲ್ಲಿ ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರು, ಹಿಜಾಬ್ ತೆಗೆದು, ತರಗತಿಗೆ ಪ್ರವೇಶಿಸಲು ಅನುಕೂಲವಾಗುವಂತೆ, ಪ್ರತ್ಯೇಕ ಸ್ಥಳದಲ್ಲಿ ಹಿಜಾಬ್ ಇರಿಸಲು ವ್ಯವಸ್ಥೆ ಕಲ್ಪಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶಿಸಿದೆ. ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಹೈಕೋರ್ಟ್ ಮಧ್ಯಂತರ ತೀರ್ಪಿನನ್ವಯ ಹಿಜಾಬ್ ಧರಿಸಿ ಶಾಲಾ-ಕಾಲೇಜುಗಳಿಗೆ

ಹಿಜಾಬ್ ತೆಗೆದಿಡಲು ಪ್ರತ್ಯೇಕ ಸ್ಥಳ ಕಲ್ಪಿಸಿ| ಪ.ಪೂ ಇಲಾಖೆಗೆ ಹೈಕೋರ್ಟ್ ಸೂಚನೆ Read More »

ನಮ್ಮ ಮನೆಯ ಮಕ್ಕಳು ಅಮಾಯಕರು; ಅವನಿಗೆ ಊಟ ಮಾಡಿಸಿ, ಮಾತ್ರೆ ಕೊಟ್ಟು ಮಲಗಿಸಿದ್ದೆ : ಆರೋಪಿ ತಾಯಿ ಅಳಲು

ಸಮಗ್ರ ನ್ಯೂಸ್ ಡೆಸ್ಕ್: ಹಿಂದೂ ಕಾರ್ಯಕರ್ತ ಹರ್ಷನ ಕೊಲೆ ವಿಚಾರವಾಗಿ 7 ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡುತ್ತಿದ್ದಂತೆ ಆರೋಪಿಗಳ ಕುಟುಂಬದವರು ‘ನಮ್ಮ ಮಕ್ಕಳು ಅಮಾಯಕರು’ ಎಂದು ಅಳಲು ತೋಡಿಕೊಂಡಿದ್ದಾರೆ. ಪರ್ವಿನ್ ತಾಜ್, ಆರೋಪಿ ನದೀಮ್ ತಾಯಿ:ನನ್ನ ಮಗನಿಗೆ ಯಾರು ಸತ್ತಿದ್ದಾರೆ, ಏನೂ ನಡೆದಿದೆ ಎಂಬುದೇ ತಿಳಿದಿಲ್ಲ. ಏನೂ ತಿಳಿಯದ ನನ್ನ ಮಗನ ಮೇಲೆ ಈ ಆರೋಪ ಮಾಡುತ್ತಿದ್ದಾರೆ. ಒಂದು ವೇಳೆ ಅವನು ತಪ್ಪು ಮಾಡಿದರೆ ಅವನನ್ನು ಬಂಧಿಸಿ. ಸರಿಯಾಗಿ ತನಿಖೆ ಮಾಡಿ ಎಂದು ಆರೋಪಿ ನದೀಮ್ ತಾಯಿ

ನಮ್ಮ ಮನೆಯ ಮಕ್ಕಳು ಅಮಾಯಕರು; ಅವನಿಗೆ ಊಟ ಮಾಡಿಸಿ, ಮಾತ್ರೆ ಕೊಟ್ಟು ಮಲಗಿಸಿದ್ದೆ : ಆರೋಪಿ ತಾಯಿ ಅಳಲು Read More »

ಲ್ಯಾಪ್ ಟಾಪ್ ಖರೀದಿಸುವವರಿಗೆ ಶುಭಸುದ್ದಿ| ಅಮೆಜಾನ್‌ ಸೇಲ್‌ನಲ್ಲಿದೆ 30% ಡಿಸ್ಕೌಂಟ್ !

ಸಮಗ್ರ ಡಿಜಿಟಲ್ ಡೆಸ್ಕ್: ಅಮೆಜಾನ್‌ ಪ್ಲಾಟ್‌ಫಾರ್ಮ್‌ನಲ್ಲಿ ಸಾಮಾನ್ಯ ದಿನಗಳಲ್ಲಿಯೂ ಸಹ ವಿಶೇಷ ರಿಯಾಯಿತಿ ನೀಡಲಿದೆ. ಸ್ಮಾರ್ಟ್‌ಫೋನ್‌ಗಳು ಮಾತ್ರವಲ್ಲದೆ ಇತರೆ ಗ್ಯಾಜೆಟ್ಸ್‌ಗಳು ಕೂಡ ನಿಮಗೆ ಡಿಸ್ಕೌಂಟ್‌ನಲ್ಲಿ ದೊರೆಯಲಿವೆ. ಸದ್ಯ ಇದೀಗ ಅಮೆಜಾನ್‌ ಲ್ಯಾಪ್‌ಟಾಪ್‌ಗಳ ಮೇಲೆ 30% ತನಕ ಡಿಸ್ಕೌಂಟ್‌ ನೀಡುತ್ತಿದೆ. ಹೊಸ ಲ್ಯಾಪ್‌ಟಾಪ್‌ ಖರೀದಿಸಬೇಕೆಂದು ಕೊಂಡವರಿಗೆ ಅತ್ಯುತ್ತಮ ರಿಯಾಯಿತಿಗಳನ್ನು ಕೊಡುತ್ತಿದೆ. ಹಾಗಾದ್ರೆ ಅಮೆಜಾನ್‌ ಸೇಲ್‌ನಲ್ಲಿ ರಿಯಾಯಿತಿ ಪಡೆದಿರುವ ಲ್ಯಾಪ್‌ಟಾಪ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ. ಡೆಲ್‌ 15 (2021)ಡೆಲ್‌ ಕಂಪೆನಿಯ ಡೆಲ್‌ 15 (2021) ಲ್ಯಾಪ್‌ಟಾಪ್‌ ಅಮೆಜಾನ್‌ನಲ್ಲಿ 30%

ಲ್ಯಾಪ್ ಟಾಪ್ ಖರೀದಿಸುವವರಿಗೆ ಶುಭಸುದ್ದಿ| ಅಮೆಜಾನ್‌ ಸೇಲ್‌ನಲ್ಲಿದೆ 30% ಡಿಸ್ಕೌಂಟ್ ! Read More »

ಬಂಟ್ವಾಳ: ಕ್ರಿಕೆಟ್ ಆಡುವಾಗ ಕುಸಿದು ಬಿದ್ದು ವ್ಯಕ್ತಿ ಮೃತ್ಯು| ಗೆದ್ದ ಸಂಭ್ರಮಕ್ಕೆ ಆಟಗಾರನೇ ಇಲ್ಲ

ಸಮಗ್ರ ನ್ಯೂಸ್: ವ್ಯಕ್ತಿಯೊಬ್ಬರು ಕ್ರಿಕೆಟ್ ಆಡುವಾಗ ಮೈದಾನದಲ್ಲಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಅನ್ನಡ್ಕ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಮನೋಹರ ಪ್ರಭು (45) ಎಂದು ಗುರುತಿಸಲಾಗಿದೆ. ಇನ್ನು ತೀವ್ರ ಎದೆನೋವಿನಿಂದ ಬಳಲುತ್ತಿದ್ದ ಅವರು ದಿನದ ಮೂರನೇ ಪಂದ್ಯಕ್ಕೆ ಸಿದ್ದರಾಗುತ್ತಿದ್ದಂತೆ ನೆಲಕ್ಕೆ ಕುಸಿದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪ್ರಭು ಒಬ್ಬ ಪ್ರಗತಿಪರ ರೈತ ಮತ್ತು ಒಬ್ಬ ನಿಪುಣ ಕ್ರಿಕೆಟಿಗ. ಪ್ರಭು ಅವರು ಹಲವಾರು ಕ್ರಿಕೆಟ್ ತಂಡಗಳನ್ನು

ಬಂಟ್ವಾಳ: ಕ್ರಿಕೆಟ್ ಆಡುವಾಗ ಕುಸಿದು ಬಿದ್ದು ವ್ಯಕ್ತಿ ಮೃತ್ಯು| ಗೆದ್ದ ಸಂಭ್ರಮಕ್ಕೆ ಆಟಗಾರನೇ ಇಲ್ಲ Read More »

ನೀವು ಹೊಡೆದಾಡಿ ಸಾಯುವ ಮತೀಯ ಸಮಸ್ಯೆಗಳು ನಿಮ್ಮ ನಾಯಕರಿಗೇಕಿಲ್ಲ?

ಸಮಗ್ರ ವಿಶೇಷ: ಹಿಂದೂ ಮುಸ್ಲಿಂ ಯುವ ಮಿತ್ರರೇ,ನಾನು ಇತ್ತೀಚೆಗೆ ಕೋಮು ಗಲಭೆಯಾದರೆ, ಯಾರದರೂ ಸತ್ತರೆ ತೀರಾ ಭಾವನಾತ್ಮಕವಾಗಿ ಸ್ಪಂದಿಸುವುದನ್ನು ಕಡಿಮೆ ಮಾಡಿದ್ದೇನೆ. ಯಾಕೆಂದರೆ ಇವತ್ತು ಕೆಲವರು ಹೇಳುವುದನ್ನು ನಾನು ೩೦ ವರ್ಷಗಳ ಹಿಂದೆ ಎಕಾಂಗಿಯಾಗಿ ಬೊಬ್ಬೆ ಹೊಡೆದು ಹೇಳಿದ್ದೆ. ಆಗ ಯಾರೂ ಕೂಡಾ ಅದನ್ನ ಕೇಳಿಸಿಕೊಳ್ಳಲಿಲ್ಲ. ಈಗ ಹೆಚ್ಚು ಜನರಿಗೆ ಅರ್ಥವಾದಂತಿದೆ. ಬಡವರ ಮನೆಯ ಮಕ್ಕಳಿಗೆ ಮಾತ್ರ ಹಿಂದೂ ಮುಸ್ಲಿಂ ಕ್ರೈಸ್ತ ಧರ್ಮದಲ್ಲಿ ಹೊಡೆದಾಡಿಕೊಳ್ಳುವ ಪರಿಸ್ಥಿತಿ ಯಾಕೆ. ಸಾಮಾಜಿಕವಾಗಿ ಆರ್ಥಿಕವಾಗಿ ಮೇಲೆ ಇರುವ ಯಾರಿಗೂ ಸಮಸ್ಯೆಗಳಾಗದ್ದು ಈ

ನೀವು ಹೊಡೆದಾಡಿ ಸಾಯುವ ಮತೀಯ ಸಮಸ್ಯೆಗಳು ನಿಮ್ಮ ನಾಯಕರಿಗೇಕಿಲ್ಲ? Read More »

ಬಿಎಸ್ಎನ್ಎಲ್ ನಲ್ಲಿ ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ| ಡಿಪ್ಲೋಮಾ ಆದವರು Apply ಮಾಡಿ

ಸಮಗ್ರ ನ್ಯೂಸ್: ಭಾರತ್​ ಸಂಚಾರ್ ನಿಗಮ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 24 ಟೆಕ್ನಿಕಲ್​​ ಅಪ್ರೆಂಟಿಸ್ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಫೆಬ್ರವರಿ 23ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಮಾರ್ಚ್​​ 9, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಕೆ ಮಾಹಿತಿ ಇಲ್ಲಿದೆ.ಹುದ್ದೆಯ ಮಾಹಿತಿ:ಅಮೃತಸರ- 03ಚಂಡೀಗರ್-04ಫಿರೋಜ್​ಪುರ-03ಹೊಶಿಯಾರ್​ಪುರ್-03ಜಲಂಧರ್-04ಲೂಧಿಯಾನ-03ಪಾಟಿಯಾಲ-04ಒಟ್ಟು 24 ಹುದ್ದೆಗಳು ವಿದ್ಯಾರ್ಹತೆ:ಭಾರತ್​ ಸಂಚಾರ್ ನಿಗಮ್ ಲಿಮಿಟೆಡ್

ಬಿಎಸ್ಎನ್ಎಲ್ ನಲ್ಲಿ ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ| ಡಿಪ್ಲೋಮಾ ಆದವರು Apply ಮಾಡಿ Read More »

ಉಡುಪಿ: ನಡುರಸ್ತೆಯಲ್ಲೇ ಹೊತ್ತಿ ಉರಿದ ಬಸ್

ಸಮಗ್ರ ನ್ಯೂಸ್: ನಡುರಸ್ತೆಯಲ್ಲಿ ಖಾಸಗಿ ಬಸ್ಸೊಂದು ಹೊತ್ತಿ ಉರಿದ ಘಟನೆ ಜಿಲ್ಲೆಯ ಮಣಿಪಾಲದಲ್ಲಿ ಬುಧವಾರ ಮುಂಜಾನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್‌‌ನಿಂದಾಗಿ ಬಳ್ಳಾರಿಯಿಂದ ಮಣಿಪಾಲಕ್ಕೆ ಬರುತ್ತಿದ್ದ ಖಾಸಗಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಇನ್ನು ಬಸ್‌ನಲ್ಲಿದ್ದ ಪ್ರಯಾಣಿಕರು, ಚಾಲಕ, ನಿರ್ವಾಹಕರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಉಡುಪಿ: ನಡುರಸ್ತೆಯಲ್ಲೇ ಹೊತ್ತಿ ಉರಿದ ಬಸ್ Read More »