February 2022

ರಷ್ಯಾ ಕಬಳಿಸುತ್ತಿದ್ದರೂ ಅಮೇರಿಕಾ ಸುಮ್ಮನಿದೆ| ಪೇಸ್ ಬುಕ್ ಲೈವ್ ನಲ್ಲಿ ಉಕ್ರೇನ್ ಅಧ್ಯಕ್ಷನ ಅಳಲು

ಸಮಗ್ರ ನ್ಯೂಸ್: ಉಕ್ರೇನ್‌ನ ರಾಜಧಾನಿ ಕೀವ್‌ ಅನ್ನು ರಷ್ಯಾ ವಶಪಡಿಸಿಕೊಂಡಿದೆ ಎಂಬ ವರದಿಗಳ ಬೆನ್ನಲ್ಲೇ ಉಕ್ರೇನ್‌ ಅಧ್ಯಕ್ಷ ವೋಲೋದಿಮಿರ್‌ ಜೆಲೆನ್‌ಸ್ಕಿ ತನ್ನ ದೇಶವನ್ನುದ್ದೇಶಿಸಿ ಭಾವನಾತ್ಮಕ ಭಾಷಣ ಮಾಡಿದ್ದು, ಜಗತ್ತಿನ ನಂ.1 ಶಕ್ತಿಶಾಲಿ ದೇಶ ಅಮೆರಿಕ ದೂರದಿಂದ ಸುಮ್ಮನೆ ನೋಡುತ್ತಿದೆ ಎಂದು ಅಲವತ್ತುಕೊಂಡಿದ್ದಾರೆ. ನಾನು ರಷ್ಯಾದ ನಂ.1 ಗುರಿ, ನನ್ನ ಕುಟುಂಬ ನಂ.2 ಗುರಿ. ನಿನ್ನೆಯಂತೆ ಇಂದೂ ಕೂಡ ನಾವು ಏಕಾಂಗಿಯಾಗಿ ನಮ್ಮ ದೇಶವನ್ನು ರಕ್ಷಣೆ ಮಾಡಿಕೊಳ್ಳಲು ಯತ್ನಿಸುತ್ತಿದ್ದೇವೆ. ಜಗತ್ತಿನ ಅತ್ಯಂತ ಶಕ್ತಿಶಾಲಿ ದೇಶ ದೂರದಿಂದ ನೋಡುತ್ತಿದೆ ಎಂದು […]

ರಷ್ಯಾ ಕಬಳಿಸುತ್ತಿದ್ದರೂ ಅಮೇರಿಕಾ ಸುಮ್ಮನಿದೆ| ಪೇಸ್ ಬುಕ್ ಲೈವ್ ನಲ್ಲಿ ಉಕ್ರೇನ್ ಅಧ್ಯಕ್ಷನ ಅಳಲು Read More »

ಪ್ರೋ ಕಬಡ್ಡಿ ಸೀಸನ್8| ದಬಂಗ್ ಮಡಿಲಿಗೆ ಚಾಂಪಿಯನ್ ಕಿರೀಟ| ಪಾಟ್ನಾಗೆ 1 ಅಂಕದ ವೀರೋಚಿತ ಸೋಲು|

ಸಮಗ್ರ‌ ನ್ಯೂಸ್: ಎಂಟನೇ ಆವೃತ್ತಿ ಪ್ರೋ ಕಬಡ್ಡಿ ಫೈನಲ್ ರೋಚಕತೆ ಹುಟ್ಟಿಸಿತ್ತು. ಎರಡೂ ತಂಡಗಳು ಅಂಕಗಳನ್ನು ಸುಲಭವಾಗಿ ನೀಡಲಿಲ್ಲ. ಪರಿಣಾಮ ಕೊನೆಯ ಹಂತದವರೆಗೂ ನಡೆದ ಪಂದ್ಯದಲ್ಲಿ ದಬಾಂಗ್ ದೆಹಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಈ ಮೂಲಕ ದಬಾಂಗ್ ಚೊಚ್ಚಲ ಬಾರಿಗೆ ಪ್ರಶಸ್ತಿ ಎತ್ತಿ ಸಂಭ್ರಮಿಸಿದೆ. ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ದಬಾಂಗ್ 37-36 ರಿಂದ ಪಾಟ್ನಾ ಪೈರೇಟ್ಸ್ ತಂಡವನ್ನು ಮಣಿಸಿ ಅಬ್ಬರಿಸಿತು. ಪಾಟ್ನಾ ರಕ್ಷಣಾ ವಿಭಾಗವನ್ನು ವಂಚಿಸಿ ಅಂಕಗಳಿಸಿದ ನವೀನ್ ಕುಮಾರ್ಮೊದಲಾವಧಿಯ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತಂಡ

ಪ್ರೋ ಕಬಡ್ಡಿ ಸೀಸನ್8| ದಬಂಗ್ ಮಡಿಲಿಗೆ ಚಾಂಪಿಯನ್ ಕಿರೀಟ| ಪಾಟ್ನಾಗೆ 1 ಅಂಕದ ವೀರೋಚಿತ ಸೋಲು| Read More »

ವಿದ್ಯಾರ್ಥಿಗಳ ರಕ್ಷಣೆ ಹೇಗೆ? ಮತ್ತು ಯಾವಾಗ?: ಸಿಎಂ ಬಸವರಾಜ ಬೊಮ್ಮಾಯಿಗೆ ನಟಿ ರಮ್ಯಾ ಪ್ರಶ್ನೆ

ಸಮಗ್ರ ನ್ಯೂಸ್ ಡೆಸ್ಕ್ : ಉಕ್ರೇನ್ ಮೇಲೆ ವಿಪರೀತ ದಾಳಿ ನಡೆದಿದ್ದರಿಂದ ಅಲ್ಲಿ ವಾಸವಿರುವ ಕನ್ನಡಿಗರು ಆತಂಕದಿಂದ ದಿನಗಳೆಯುತ್ತಿದ್ದಾರೆ. ಅವರನ್ನು ಕರೆತರಲು ಏನೆಲ್ಲ ಪ್ರಯತ್ನಗಳು ನಡೆದರೂ, ಅವು ವಿಫಲವಾಗುತ್ತಿದೆ. ಹಾಗಾಗಿ ಉಕ್ರೇನ್ ನಲ್ಲಿ ನೆಲೆಸಿರುವ ಕನ್ನಡಿಗರು ವಿಡಿಯೋ ಮತ್ತು ಫೋನ್ ಕರೆಗಳ ಮೂಲಕ ತಮ್ಮನ್ನು ರಕ್ಷಿಸುವಂತೆ ಮೊರೆಯಿಡುತ್ತಿದ್ದಾರೆ. ಈ ಕುರಿತು ನಟಿ, ಮಾಜಿ ಸಂಸದೆ ರಮ್ಯಾ ಕೂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಟ್ವಿಟ್ ಮಾಡಿದ್ದಾರೆ. “ಕರ್ನಾಟಕದ ವಿದ್ಯಾರ್ಥಿಗಳ ರಕ್ಷಣೆ ಹೇಗೆ? ಅವರನ್ನು

ವಿದ್ಯಾರ್ಥಿಗಳ ರಕ್ಷಣೆ ಹೇಗೆ? ಮತ್ತು ಯಾವಾಗ?: ಸಿಎಂ ಬಸವರಾಜ ಬೊಮ್ಮಾಯಿಗೆ ನಟಿ ರಮ್ಯಾ ಪ್ರಶ್ನೆ Read More »

ಹಿಜಾಬ್ ವಿವಾದ ವಿಚಾರಣೆ ಅಂತ್ಯ| ತೀರ್ಪು ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್|

ಸಮಗ್ರ ನ್ಯೂಸ್: ಕರ್ನಾಟಕ ಹೈಕೋರ್ಟ್ ನಲ್ಲಿ ಇಂದು 11ನೇ ದಿನದ ಹಿಜಾಬ್ ಅನುಮತಿ ಕೋರಿದ ಅರ್ಜಿಯ ವಿಚಾರಣೆ ನಡೆಸಲಾಯಿತು. ಹಿಜಾಬ್ ವಿವಾದ ವಾದ ಮಂಡನೆ ಮುಕ್ತಾಯಗೊಂಡಿದ್ದು, ಹೈಕೋರ್ಟ್ ತ್ರಿಸದಸ್ಯ ಪೂರ್ಣಪೀಠವು, ತನ್ನ ತೀರ್ಪನ್ನು ಕಾಯ್ದಿರಿಸಿದೆ. ಹಿಜಾಬ್ ಧರಿಸಿದ್ದಕ್ಕಾಗಿ ಸರ್ಕಾರಿ ಪಿಯು ಕಾಲೇಜಿನ ಪ್ರವೇಶವನ್ನು ನಿರಾಕರಿಸಿದ ಕ್ರಮವನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ ಅರ್ಜಿಗಳಲ್ಲಿ ಕರ್ನಾಟಕ ಹೈಕೋರ್ಟ್ ನ ಪೂರ್ಣ ಪೀಠವು ಇಂದು ತನ್ನ ತೀರ್ಪನ್ನು ಕಾಯ್ದಿರಿಸಿದೆ. ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್

ಹಿಜಾಬ್ ವಿವಾದ ವಿಚಾರಣೆ ಅಂತ್ಯ| ತೀರ್ಪು ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್| Read More »

ಬೆಳ್ತಂಗಡಿ: ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿಯ ‌ವಿವಾಹ ಮಾಡಿಸಿದ ಅರ್ಚಕ| ಪ್ರಕರಣದ ಹಿಂದೆ ಪ್ರಭಾವಿ ಹಿಂದೂ ಮುಖಂಡನ ಕೈವಾಡ!?

ಸಮಗ್ರ ನ್ಯೂಸ್: ಬೆಳ್ತಂಗಡಿ ಗ್ರಾಮೀಣ ಭಾಗದ ದೇವಾಲಯವೊಂದರಲ್ಲಿ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕನ ವಿವಾಹ ನಡೆಸಿದ ಬಗ್ಗೆ ಹಿಂದೂ ಸಂಘಟನೆಗಳು ಒಟ್ಟಾಗಿ ನ್ಯಾಯಕ್ಕೆ ಪೊಲೀಸರ ಮೊರೆ ಹೋದ ಬಳಿಕ ಪ್ರಕರಣ ತಿರುವು‌ ಪಡೆದುಕೊಳ್ಳುತ್ತಿದೆ. ತಾಲೂಕಿನ ನಡ ಎಂಬ ಗ್ರಾಮೀಣ ಭಾಗದಲ್ಲಿನ ಸತ್ಯನಾರಾಯಣ ದೇವಸ್ಥಾನದಲ್ಲಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿ ವಿವಾಹವಾಗಿದ್ದರು. ಈ ವಿವಾಹ ಕಾರ್ಯ ನೆರವೇರಿಸಿ ಸಾಮರಸ್ಯ ಕದಡಿದ್ದಾರೆ ಎಂದು ದೇವಾಲಯದ ಅರ್ಚಕ ರಾಧಾಕೃಷ್ಣ ಹೊಳ್ಳ ಅವರ ಮೇಲೆ

ಬೆಳ್ತಂಗಡಿ: ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿಯ ‌ವಿವಾಹ ಮಾಡಿಸಿದ ಅರ್ಚಕ| ಪ್ರಕರಣದ ಹಿಂದೆ ಪ್ರಭಾವಿ ಹಿಂದೂ ಮುಖಂಡನ ಕೈವಾಡ!? Read More »

ಮಂಗಳೂರು: ಹಿಜಾಬ್ ವಿರುದ್ದ ಹೇಳಿಕೆ ನೀಡಿದ ಸುರಯ್ಯಗೆ ಬೆದರಿಕೆ

ಸಮಗ್ರ ನ್ಯೂಸ್: ಹಿಜಾಬ್‌ ಸಂಬಂಧಿಸಿ ಹೇಳಿಕೆ ನೀಡಿದ ಕಾಂಗ್ರೆಸ್‌ ಮುಖಂಡರಾದ ಸುರಯ್ಯ ಅಂಜುಮ್‌ ಅವರಿಗೆ ಅಪರಿಚಿತರು ಜೀವ ಬೆದರಿಕೆಯೊಡ್ಡಿದ ಬಗ್ಗೆ ಮಂಗಳೂರಿನ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುರಯ್ಯ ಅಂಜುಮ್‌ ಅವರು ಇತ್ತೀಚೆಗೆ ಹಿಜಾಬ್‌ ಧರಿಸುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ “ಧರ್ಮಕ್ಕಿಂತ ದೇಶ ಮೊದಲು, ಶಿಕ್ಷಣಕ್ಕಿಂತ ದೊಡ್ಡ ಧರ್ಮವಿದೆಯಾ?ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಧರಿಸಿ ಸಮಾನತೆ ಕಾಪಾಡ ಬೇಕು ಎಂದು ಲೈವ್‌ ವೀಡಿಯೋ ಪ್ರಸಾರ ಮಾಡಿದ್ದರು. ಇದಾದ ಕೆಲವು ದಿನಗಳ ಬಳಿಕ ಅಪರಿಚಿತರ ಫೋನ್‌, ವೀಡಿಯೋ ಮುಖಾಂತರ ಮಾನಕ್ಕೆ

ಮಂಗಳೂರು: ಹಿಜಾಬ್ ವಿರುದ್ದ ಹೇಳಿಕೆ ನೀಡಿದ ಸುರಯ್ಯಗೆ ಬೆದರಿಕೆ Read More »

ಧ್ರುವ ಸರ್ಜಾ ಅಂಡರ್ ವರ್ಲ್ಡ್ ಡಾನ್| ಅಭಿಮಾನಿಗಳಿಗೆ ಭರ್ಜರಿ ಸುದ್ದಿ

ಸಮಗ್ರ ಫಿಲಂ ಡೆಸ್ಕ್ : ಇದೇ ಮೊದಲ ಬಾರಿಗೆ ಧ್ರುವ ಹೊಸ ರೂಪದ ಕಥೆಯನ್ನು ಒಪ್ಪಿಕೊಂಡಿದ್ದಾರಂತೆ. ಅಲ್ಲದೇ, ಈ ಸಿನಿಮಾದಲ್ಲಿ ಅವರು ಅಂಡರ್ ವರ್ಲ್ಡ್ ಡಾನ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಇದು ನೈಜ ಘಟನೆ ಮತ್ತು ವ್ಯಕ್ತಿಗಳನ್ನು ಆಧರಿಸಿದ ಸಿನಿಮಾವಾಗಿದೆ ಎನ್ನುವುದು ವಿಶೇಷ. ಎಪ್ಪತ್ತರ ದಶಕದ ಕಥೆ:ಮದ್ರಾಸ್ ಪ್ರಾಂತ್ಯದ 70ರ ದಶಕದಲ್ಲಿ ನಡೆದ ಘಟನೆಯನ್ನು ಈ ಸಿನಿಮಾಗೆ ಆಯ್ಕೆ ಮಾಡಿಕೊಂಡಿದ್ದಾರಂತೆ ನಿರ್ದೇಶಕರು. ಈ ದಶಕವನ್ನು ಕಟ್ಟಿಕೊಡುವುದಕ್ಕಾಗಿ ಈಗಾಗಲೇ ಸೆಟ್‍ಗಳು ಕೂಡ ನಿರ್ಮಾಣವಾಗುತ್ತಿವೆಯಂತೆ. ಸೀಗೆಹಳ್ಳಿ ಸಮೀಪದಲ್ಲಿ ಈ ಬೃಹತ್ ಸೆಟ್

ಧ್ರುವ ಸರ್ಜಾ ಅಂಡರ್ ವರ್ಲ್ಡ್ ಡಾನ್| ಅಭಿಮಾನಿಗಳಿಗೆ ಭರ್ಜರಿ ಸುದ್ದಿ Read More »

ಉಕ್ರೇನ್ ನಲ್ಲಿ ಸಿಲುಕಿದ ಉಡುಪಿ ಮೂಲದ ವಿದ್ಯಾರ್ಥಿ

ಸಮಗ್ರ ನ್ಯೂಸ್: ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿದ್ದು, ಅನೇಕ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿಕೊಂಡಿದ್ದಾರೆ. ಇದೀಗ ಉಡುಪಿ ಜಿಲ್ಲೆಯ ವಿದ್ಯಾರ್ಥಿಯೋರ್ವ ಸಿಲುಕಿಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ. ಉಕ್ರೇನ್ ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಉಡುಪಿಯ ರೋಹನ್ ಧನಂಜಯ್ ಬಗ್ಲಿ ಅವರು ಸದ್ಯ ಉಕ್ರೇನ್ ನಲ್ಲಿ ಸಿಲುಕಿಕೊಂಡಿದ್ದಾರೆ. ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಧನಂಜಯ್ ಬಗ್ಲಿ ಅವರ ಹಿರಿಯ ಮಗನಾಗಿದ್ದಾರೆ. ಉಕ್ರೇನ್ ನ ಕಾರ್ಕಿವ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ 5ನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದರು.

ಉಕ್ರೇನ್ ನಲ್ಲಿ ಸಿಲುಕಿದ ಉಡುಪಿ ಮೂಲದ ವಿದ್ಯಾರ್ಥಿ Read More »

ಮಂಗಳೂರು: ಹೆರಿಗೆ ವೇಳೆ ತಾಯಿ – ಮಗು ಸಾವು

ಸಮಗ್ರ ನ್ಯೂಸ್: ಚೊಚ್ಚಲ ಹೆರಿಗೆ ಸಂದರ್ಭ ಗರ್ಭದಲ್ಲಿದ್ದ ಮಗು ಸಹಿತ ತಾಯಿ ಮೃತಪಟ್ಟ ಘಟನೆ ಫೆ. 24 ರಂದು ನಡೆದಿದೆ. ಮಾಣಿ ಸಮೀಪದ ಕಡೆಶಿವಾಲಯ ಬುಡೋಳಿ ನಿವಾಸಿಯಾಗಿದ್ದ ವಕೀಲೆ ಗಾಯತ್ರಿ (38) ಎಂಬವರುಮೃತರು. ಅವರು ಪುತ್ತೂರಿನಲ್ಲಿ ಸುಮಾರು 8 ವರ್ಷ ವಕೀಲ ವೃತ್ತಿ ಮಾಡಿದ್ದ ಗಾಯತ್ರಿಗೆ 2010ರಲ್ಲಿ ಪೆರ್ಲದ ಆನಡ್ಕ ಕಾಡಮನೆ ಸುಧಾಕರ್ ಅವರೊಂದಿಗೆ ವಿವಾಹವಾಗಿತ್ತು. 2017ರಿಂದ ನಗರದ ಲೇಡಿಹಿಲ್ ಸಮೀಪ ವಾಸ್ತವ್ಯ ಹೊಂದಿದ್ದರು. ಅಲ್ಲದೆ ವಕೀಲ ವೃತ್ತಿ ಪುನರಾರಂಭಿಸಿದ್ದರು. ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು

ಮಂಗಳೂರು: ಹೆರಿಗೆ ವೇಳೆ ತಾಯಿ – ಮಗು ಸಾವು Read More »

‘ಹರ್ಷ ತಾಯಿಗೆ ಎಂಎಲ್ಎ ಟಿಕೆಟ್ ನೀಡಿ’ – ಪೋಸ್ಟರ್ ಅಭಿಯಾನದಿಂದ ಇಕ್ಕಟ್ಟಿಗೆ ಸಿಲುಕಿದ ಬಿಜೆಪಿ

ಸಮಗ್ರ ನ್ಯೂಸ್: ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆಯಾದ ಬೆನ್ನಲ್ಲೇ ‘ದೇಶಭಕ್ತರ ಕುಟುಂಬದ ಸದಸ್ಯರಿಗೆ ಎಂಎಲ್‌ಎ ಟಿಕೆಟ್‌ ನೀಡಬೇಕು’ ಎಂಬ ಹೊಸ ಅಭಿಯಾನವನ್ನು ದೇಶಭಕ್ತ ಹಿಂದೂ ಕಾರ್ಯಕರ್ತರ ಹೆಸರಿನಲ್ಲಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಆರಂಭಿಸಿದ್ದು, ಬಿಜೆಪಿಗೆ ಮುಜುಗರ ತಂದಿದೆ. ‘ಹರ್ಷ ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟಿದ್ದಾನೆ. ಅವರ ಕುಟುಂಬದವರಿಗೆ ಸಾಂತ್ವನ, ಭಾಷಣ, ಆರ್ಥಿಕ ನೆರವು ನೀಡಿದರಷ್ಟೇ ಸಾಲದು. ಅವರ ತಾಯಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡಬೇಕು. ದೇಶಭಕ್ತನ ಮನೆಯಿಂದ ಒಬ್ಬರು ಎಂಎಲ್‌ಎ ಹುಟ್ಟಿಬರಲಿ. ಇಂತಹ ಸ್ಥಾನಗಳು ಈಶ್ವರಪ್ಪ, ಯಡಿಯೂರಪ್ಪ

‘ಹರ್ಷ ತಾಯಿಗೆ ಎಂಎಲ್ಎ ಟಿಕೆಟ್ ನೀಡಿ’ – ಪೋಸ್ಟರ್ ಅಭಿಯಾನದಿಂದ ಇಕ್ಕಟ್ಟಿಗೆ ಸಿಲುಕಿದ ಬಿಜೆಪಿ Read More »