February 2022

ಮಂಗಳೂರು : ಓಮಸತ್ವ ಮಾರುವ ನೆಪದಲ್ಲಿ ಮಹಿಳೆಯ ಅತ್ಯಾಚಾರಕ್ಕೆ ಯತ್ನ| ಮುಸ್ಲಿಂ ಯುವಕ ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್ ಡೆಸ್ಕ್: ಓಮಸತ್ವ ಮಾರುವ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆಸಿದ ಘಟನೆ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಜೆಪದವು ಎಂಬಲ್ಲಿ ನಡೆದಿದೆ. ಆರೋಪಿಯನ್ನು ಮೊಹಮ್ಮದ್ ಇಕ್ಬಾಲ್ ಕೆಂಚನಕೆರೆ ಎಂದು ಗುರುತಿಸಲಾಗಿದೆ. ಈತ ಓಮಸತ್ವ ಮಾರುವ ನೆಪದಲ್ಲಿ ಮನೆಯಲ್ಲಿ ಒಂಟಿ ಮಹಿಳೆಯ ಮೇಲೆ ಅತ್ಯಾಚಾರ ಯತ್ನ ಮಾಡಿದ್ದಾನೆ. ಈ ವೇಳೆ ಸ್ಥಳೀಯರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದು ಪೊಲೀಸರಿಗೆ ಒಪ್ಪಿಸಿದ್ದಾನೆ. ಈ ಬಗ್ಗೆ ಬಜಪೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೂಚನೆ […]

ಮಂಗಳೂರು : ಓಮಸತ್ವ ಮಾರುವ ನೆಪದಲ್ಲಿ ಮಹಿಳೆಯ ಅತ್ಯಾಚಾರಕ್ಕೆ ಯತ್ನ| ಮುಸ್ಲಿಂ ಯುವಕ ಪೊಲೀಸ್ ವಶಕ್ಕೆ Read More »

ವಿಟ್ಲ: ಕೊರಗಜ್ಜನ ವೇಷ ಧರಿಸಿ ಅವಮಾನಿಸಿದ ಮದುಮಗ ಕೊನೆಗೂ ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್ ಡೆಸ್ಕ್: ವಿಟ್ಲದ ಸಾಲೆತ್ತೂರಿನಲ್ಲಿ ಕೊರಗಜ್ಜ ದೈವಕ್ಕೆ ಅಪಮಾನ ಮಾಡಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಕೊಳ್ನಾಡು ಗ್ರಾಮದ ಅಝೀಝ್ ಎಂಬವರ ಮಗಳ ಮದುವೆ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಉಪ್ಪಳ ಸೋಂಕಲ್ ಅಗರ್ತಿಮೂಲೆ ಸಮೀಪದ ಉಮರುಲ್ ಭಾಷಿತ್ ಎಂಬಾತನ ಜೊತೆ ಜ.6 ರಂದು ನಡೆದಿತ್ತು. ಅದೇ ದಿನ ರಾತ್ರಿ ಸಾಲೆತ್ತೂರಿನ ಮದುಮಗಳ ಮನೆಯಲ್ಲಿ ನಡೆದ ಔತಣ ಕೂಟದಲ್ಲಿ ಮದುಮಗ ಭಾಷಿತ್ ಕೊರಗಜ್ಜನ ಮಾದರಿಯ ವೇಷ ಧರಿಸಿ ಕುಣಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ

ವಿಟ್ಲ: ಕೊರಗಜ್ಜನ ವೇಷ ಧರಿಸಿ ಅವಮಾನಿಸಿದ ಮದುಮಗ ಕೊನೆಗೂ ಪೊಲೀಸ್ ವಶಕ್ಕೆ Read More »

ಕುಸಿದ ಪೇಸ್ ಬುಕ್ ಷೇರು ಮೌಲ್ಯ| ಅಂಬಾನಿ, ಅದಾನಿಯ ನಂತರಕ್ಕೆ ಜುಕರ್ ಬರ್ಗ್!

ಸಮಗ್ರ ಡಿಜಿಟಲ್ ಡೆಸ್ಕ್: ಸಾಮಾಜಿಕ ಮಾಧ್ಯಮದ ದೈತ್ಯ ಸಂಸ್ಥೆ ಫೇಸ್‌ಬುಕ್‌ಗೆ ಭಾರಿ ಹೊಡೆತ ಬಿದ್ದಿದ್ದು, ಎರಡು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಫೇಸ್‌ಬುಕ್‌ ತನ್ನ ಸಕ್ರಿಯ ಬಳಕೆದಾರರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಇದರಿಂದಾಗಿ ಆದಾಯ‌ ಕುಸಿತ ಕಂಡಿದ್ದು, 2021ರ ಡಿಸೆಂಬರ್‌ನ 3ನೇ ತ್ರೈಮಾಸಿಕಕ್ಕೆ ಫೇಸ್‌ಬುಕ್‌ ಬಳಕೆದಾರರ ಸಂಖ್ಯೆ 192.3 ಕೋಟಿಗೆ ಕುಸಿದಿದೆ. ಈ ಹಿಂದಿನ ತ್ರೈಮಾಸಿಕದಲ್ಲಿ 193 ಕೋಟಿ ಬಳ​ಕೆ​ದಾ​ರ​ರಿ​ದ್ದರು ಎಂದು ​ಫೇ​ಸ್‌​ಬುಕ್‌ ಸಂಸ್ಥೆಯ ಮಾತೃ​ಸಂಸ್ಥೆ ಮೆಟಾ ನೆಟ್‌​ವ​ರ್ಕ್ಸ್‌ ಮಾಹಿತಿ ಬಹಿರಂಗಪಡಿಸಿದೆ. ಮೆಟಾ ನೆಟ್‌ವರ್ಕ್ಸ್‌ನ ಈ ಮಾಹಿತಿ ಷೇರುಪೇಟೆಯಲ್ಲಿ

ಕುಸಿದ ಪೇಸ್ ಬುಕ್ ಷೇರು ಮೌಲ್ಯ| ಅಂಬಾನಿ, ಅದಾನಿಯ ನಂತರಕ್ಕೆ ಜುಕರ್ ಬರ್ಗ್! Read More »

ಹಿಜಾಬ್ ವಿವಾದ; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿಂದ ‌ನೋಟೀಸ್ ಜಾರಿ

ಸಮಗ್ರ ನ್ಯೂಸ್ ಡೆಸ್ಕ್: ಉಡುಪಿಯ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಮುಸ್ಲಿಮ್ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಹಾಜರಾಗುವುದಕ್ಕೆ ಅಡ್ಡಿಪಡಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಗುರುವಾರ ನೋಟಿಸ್ ಜಾರಿ ಮಾಡಿದೆ. ವಿದ್ಯಾರ್ಥಿನಿಯರಾದ ಆಯೇಷಾ ಹಜೀರಾ ಅಲ್ಮಾಸ್ ಮತ್ತಿತರರು ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು. ಮನವಿಯಲ್ಲಿ ಪ್ರತಿವಾದಿಗಳಾಗಿ ಹೆಸರಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಪದವಿ ಪೂರ್ವ

ಹಿಜಾಬ್ ವಿವಾದ; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿಂದ ‌ನೋಟೀಸ್ ಜಾರಿ Read More »

ಉಪನ್ಯಾಸಕ ಹುದ್ದೆ ಕೊಡಿಸುವ ಆಮಿಷವೊಡ್ಡಿ‌ ಯುವಕನ ಬೆತ್ತಲೆಗೊಳಿಸಿದ ದುರುಳರು| ಲೈಂಗಿಕ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ ಮೇಲ್

ಸಮಗ್ರ ನ್ಯೂಸ್ ಡೆಸ್ಕ್: ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ ಮೂವರನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪೊಲೀಸರು ಬಂಧಿಸಿದ್ದಾರೆ. ಅಜಿತ್ ಶ್ರೀಕಾಂತ ನಾಡಿಗ್ (25), ಧನುಷ್ಯ ದಿಲೀಪ್ ಕುಮಾರ ಶೆಟ್ಟಿ ಶಿರಸಿ (25) ಹಾಗೂ ಪದ್ಮಜಾ ಡಿ.ಎನ್.ಶಿವಮೊಗ್ಗ (50) ಬಂಧಿತರು. ಖಾಯಂ ಉಪನ್ಯಾಸಕ ಹುದ್ದೆ ಕೊಡಿಸೋದಾಗಿ ಯುವಕನ್ನು ಶಿವಮೊಗ್ಗಕ್ಕೆ ಕರೆಸಿಕೊಂಡಿದ್ದ ಇವರು, ಕೋಣೆಯೊಂದರಲ್ಲಿ ನಗ್ನಗೊಳಿಸಿ ಮಹಿಳೆಯ ಜೊತೆ ಲೈಂಗಿಕ ಕ್ರಿಯೆ ನಡೆಸುವ ವಿಡಿಯೋ ಚಿತ್ರಿಕರಿಸಿ ಬ್ಲ್ಯಾಕ್ ಮೇಲ್ ಮಾಡಿದ್ದರು. ನಂತರ ವಿಡಿಯೋ ತೋರಿಸಿ 15 ಲಕ್ಷ ನೀಡುವಂತೆ

ಉಪನ್ಯಾಸಕ ಹುದ್ದೆ ಕೊಡಿಸುವ ಆಮಿಷವೊಡ್ಡಿ‌ ಯುವಕನ ಬೆತ್ತಲೆಗೊಳಿಸಿದ ದುರುಳರು| ಲೈಂಗಿಕ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ ಮೇಲ್ Read More »

ಮಂಗಳೂರು: ವಿದ್ಯಾರ್ಥಿನಿಯರನ್ನು ಇಟ್ಟುಕೊಂಡು ಹೈಟೆಕ್ ವೇಶ್ಯಾವಾಟಿಕೆ| ನಾಲ್ವರು ಅಪ್ರಾಪ್ತರ ರಕ್ಷಣೆ| ಮೂವರು ಕಿಡಿಗೇಡಿಗಳ ಬಂಧನ

ಮಂಗಳೂರು: ನಗರದ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿನಿಯರನ್ನು ಇಟ್ಟುಕೊಂಡು ಪೆಂಟ್ ಹೌಸ್ ಒಂದರಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸಲಾಗುತ್ತಿರುವ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಓರ್ವ ಪುರುಷ, ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ. ಬಂಧಿತರನ್ನು ಶಮೀನಾ, ಆಯಿಷಮ್ಮ ಮತ್ತು ಸಿದ್ಧಿಕ್​ ಎಂದು ಗುರುತಿಸಲಾಗಿದೆ. ಸಿಸಿಟಿವಿ ಕ್ಯಾಮೆರಾ ಅಳವಡಿಸಿ ವಿಡಿಯೋ ರೆಕಾರ್ಡ್​ ಮಾಡಿ ಯುವತಿಯರು ಮತ್ತು ಬಾಲಕಿಯರನ್ನು ಬೆದರಿಸಲಾಗುತ್ತಿತ್ತು. ದಾಳಿ ನಡೆಸಿದ ಪೊಲೀಸರು, ಪಿಯುಸಿ ಓದುತ್ತಿದ್ದ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು ನಾಲ್ವರನ್ನು ರಕ್ಷಿಸಿದ್ದಾರೆ. ಮಂಗಳೂರು ಮಹಿಳಾ ಪೊಲೀಸ್

ಮಂಗಳೂರು: ವಿದ್ಯಾರ್ಥಿನಿಯರನ್ನು ಇಟ್ಟುಕೊಂಡು ಹೈಟೆಕ್ ವೇಶ್ಯಾವಾಟಿಕೆ| ನಾಲ್ವರು ಅಪ್ರಾಪ್ತರ ರಕ್ಷಣೆ| ಮೂವರು ಕಿಡಿಗೇಡಿಗಳ ಬಂಧನ Read More »

ಉಡುಗೆ-ತೊಡುಗೆ ಹೆಸರಲ್ಲಿ ಮುಸ್ಲಿಂ ವಿಧ್ಯಾರ್ಥಿನಿಯರ ಶಿಕ್ಷಣ ಹತ್ತಿಕ್ಕಲಾಗುತ್ತಿದೆ| ಹಿಜಾಬ್ ಪ್ರಕರಣ ಕುರಿತು ಸರ್ಕಾರವನ್ನು ತರಾಟೆಗೆತ್ತಿದ ಮೆಹಬೂಬಾ ಮುಫ್ತಿ

ಸಮಗ್ರ ಸುದ್ದಿ ವಿಭಾಗ: ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್ ಕಾರಣ ಮುಂದಿಟ್ಟು ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಬೇಟಿ ಬಚಾವೋ ಬೇಟಿ ಪಡಾವೋ’ ಎಂಬುದು ಮತ್ತೊಂದು ಸುಳ್ಳು ಘೋಷಣೆ. ಮುಸಲ್ಮಾನ ಹೆಣ್ಣುಮಕ್ಕಳಿಗೆ ತಮ್ಮ ಉಡುಗೆ ತೊಡುಗೆಗಳಿಂದಾಗಿ ಶಿಕ್ಷಣದ ಹಕ್ಕನ್ನು ನಿರಾಕರಿಸುತ್ತಿದ್ದಾರೆ. ಮುಸ್ಲಿಮರನ್ನು ಕಡೆಗಣಿಸುವುದನ್ನು ಕಾನೂನುಬದ್ಧಗೊಳಿಸುವುದು ಗಾಂಧಿಯವರ ಭಾರತವನ್ನು ಗೋಡ್ಸೆಯ ಭಾರತವನ್ನಾಗಿ ಪರಿವರ್ತಿಸುವ ಇನ್ನೊಂದು ಹೆಜ್ಜೆಯಾಗಿದೆ ಎಂದು ಮುಫ್ತಿ ಟ್ವೀಟ್ ಮಾಡಿದ್ದಾರೆ. ಬಿಜೆಪಿಯು ದೇಶದ

ಉಡುಗೆ-ತೊಡುಗೆ ಹೆಸರಲ್ಲಿ ಮುಸ್ಲಿಂ ವಿಧ್ಯಾರ್ಥಿನಿಯರ ಶಿಕ್ಷಣ ಹತ್ತಿಕ್ಕಲಾಗುತ್ತಿದೆ| ಹಿಜಾಬ್ ಪ್ರಕರಣ ಕುರಿತು ಸರ್ಕಾರವನ್ನು ತರಾಟೆಗೆತ್ತಿದ ಮೆಹಬೂಬಾ ಮುಫ್ತಿ Read More »

ಸಂಸದ ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ

ಸಮಗ್ರ ನ್ಯೂಸ್ ಡೆಸ್ಕ್: ಸಂಸದ ಅಸಾದುದ್ದೀನ್ ಓವೈಸಿ ತೆರಳುತ್ತಿದ್ದ ಕಾರಿನ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಉತ್ತರ ಪ್ರದೇಶದ ಮೀರತ್‌ನಿಂದ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಈ ಕುರಿತು ಅಸಾದುದ್ದೀನ್ ಓವೈಸಿ ಟ್ವೀಟ್ ಮಾಡಿದ್ದು, ‘ಮೀರತ್ ನಿಂದ ಹಿಂದಿರುಗುವಾಗ ತನ್ನ ಕಾರಿನ ಮೇಲೆ ಗುಂಡು ಹಾರಿಸಲಾಗಿದೆ’ ಎಂದು ಹೇಳಿದ್ದಾರೆ. ‘ಕೆಲವು ಸಮಯದ ಹಿಂದೆ, ನನ್ನ ಕಾರಿನ ಮೇಲೆ ಚಿಜಾರ್ಸಿ ಟೋಲ್ ಗೇಟ್ ಮೇಲೆ ಗುಂಡು ಹಾರಿಸಲಾಯಿತು. 4 ಸುತ್ತು ಗುಂಡು ಹಾರಿಸಲಾಗಿದೆ. ಅಲ್ಲಿ 3-4 ಜನರಿದ್ದರು, ಅವರೆಲ್ಲರೂ

ಸಂಸದ ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ Read More »

ಚಿತ್ರದುರ್ಗ: ನಿಂತಿದ್ದ ಲಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಕಾರು| ಮೂವರು ಸ್ಥಳದಲ್ಲೇ ಸ್ಪಾಟ್ ಔಟ್

ಸಮಗ್ರ ಕ್ರೈಂ ಡೆಸ್ಕ್: ನಿಂತಿದ್ದ ಲಾರಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಹಿರಿಯೂರು ಬಳಿ ಸಂಭವಿಸಿದೆ. ಇಲ್ಲಿನ ಗುಯಿಲಾಳು ಟೋಲ್ ಗೇಟ್ ಬಳಿ ಈ ದುರ್ಘಟನೆ ಸಂಭವಿಸಿದ್ದು, ಕಾರಿನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ. ಮೃತರ ಗುರುತು ಪತ್ತೆಯಾಗಿಲ್ಲ. ಐಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಹಿರಿಯೂರು ಪಿಐ ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಿತ್ರದುರ್ಗ: ನಿಂತಿದ್ದ ಲಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಕಾರು| ಮೂವರು ಸ್ಥಳದಲ್ಲೇ ಸ್ಪಾಟ್ ಔಟ್ Read More »

ಮಂಗಳೂರು: 1.6 ಕ್ವಿಂಟಾಲ್ ಅಕ್ರಮ ಗೋಮಾಂಸ ಸಾಗಾಟ| ನಾಲ್ಕು ಮಂದಿಯ ಬಂಧನ

ಸಮಗ್ರ ನ್ಯೂಸ್ ಡೆಸ್ಕ್: ಕೇರಳದ ಕಾಸರಗೋಡಿನಿಂದ ಮಂಗಳೂರಿನ ಉಳ್ಳಾಲಕ್ಕೆ ಒಂದು ಕ್ವಿಂಟಾಲ್ 60ಕೆಜಿ ಗೋ ಮಾಂಸವನ್ನು ಕಾರಿನಲ್ಲಿ ತುಂಬಿಸಿ ಸಾಗಾಟ ಮಾಡುತ್ತಿದ್ದ ಪ್ರಕರಣ ಪತ್ತೆ ಹಚ್ವಿದ ಪೊಲೀಸರು ಈ ಸಂಬಂಧ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಮಂಗಳೂರು ಪೆರ್ಮನ್ನೂರು ಚೆಂಬುಗುಡ್ಡೆ ನಿವಾಸಿ ಹುಸೇನ್ (24), ಉಳ್ಳಾಲ ರಿಜ್ವಾ ಮಂಜಿಲ್ ಕೋಡಿಯ ಮಹಮ್ಮದ್ ಮುಜಾಂಬಿಲ್ (25), ಉಳ್ಳಾಲದ ಫಾತಿಮಾ ಮಂಜಿಲ್ ಕೋಡಿಯ ಮಹಮ್ಮದ್ ಅಮೀನ್ (21) ಮತ್ತು ಉಳ್ಳಾಲ ಅಲ್ ಅದಿ ಹೌಸ್ ಕೋಡಿಯ ಸೊಹೈಬ್ ಅಕ್ತರ್ (22)

ಮಂಗಳೂರು: 1.6 ಕ್ವಿಂಟಾಲ್ ಅಕ್ರಮ ಗೋಮಾಂಸ ಸಾಗಾಟ| ನಾಲ್ಕು ಮಂದಿಯ ಬಂಧನ Read More »