February 2022

ದ್ವಾದಶ ರಾಶಿಗಳ ವಾರಭವಿಷ್ಯ

ಫೆ.6 ರಿಂದ 12ರವರೆಗಿನ ನಿಮ್ಮ ದ್ವಾದಶ ರಾಶಿಗಳ ವಾರ ಭವಿಷ್ಯ ಮತ್ತು ಗೋಚಾರಫಲ ಇಲ್ಲಿದೆ. ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಮುನ್ನಡೆಯನ್ನು ಕಾಣಬಹುದು. ಮರಮುಟ್ಟುಗಳ ವ್ಯಾಪಾರಸ್ಥರಿಗೆ ಹೆಚ್ಚಿನ ವ್ಯಾಪಾರವಾಗಿ ಉತ್ತಮ ಲಾಭವಿರುತ್ತದೆ. ನಿಮ್ಮ ಸತತ ಪ್ರಯತ್ನಗಳಿಗೆ ನಿಧಾನವಾದರೂ ಪ್ರತಿಫಲ ಸಿಗುತ್ತದೆ. ಮಾತನಾಡುವಾಗ ಒರಟುತನ ಖಂಡಿತ ಬೇಡ. ಆಶ್ಚರ್ಯಕರ ರೀತಿಯಲ್ಲಿ ಅನಿರೀಕ್ಷಿತ ಮೂಲದಿಂದ ಧನ ಸಹಾಯ ಒದಗುತ್ತದೆ. ಸಂವಹನ ಕ್ಷೇತ್ರಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಗೌರವ ದೊರೆಯುತ್ತದೆ. ಕೃಷಿಕರ ಆದಾಯದಲ್ಲಿ ಸ್ವಲ್ಪಮಟ್ಟಿನ ಹೆಚ್ಚಳವನ್ನು […]

ದ್ವಾದಶ ರಾಶಿಗಳ ವಾರಭವಿಷ್ಯ Read More »

ಹಿಜಾಬ್ V/s ಕೇಸರಿ ಫೈಟ್ ಗೆ ಸರ್ಕಾರದಿಂದ ಬ್ರೇಕ್ ಯತ್ನ| ಸಮವಸ್ತ್ರ ಸಂಹಿತೆ ಜಾರಿಗೊಳಿಸಿ ಆದೇಶ

ಸಮಗ್ರ ನ್ಯೂಸ್ ಡೆಸ್ಕ್: ರಾಜ್ಯದ ವಿವಿಧ ಕಾಲೇಜುಗಳಲ್ಲಿ ಹಿಜಾಬ್- ಕೇಸರಿ ಶಾಲಿನ ವಿವಾದ ಭುಗಿಲೆದ್ದ ಬೆನ್ನಲ್ಲೇ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಸಮವಸ್ತ್ರವನ್ನೇ ಕಡ್ಡಾಯವಾಗಿ ಧರಿಸಬೇಕು ಎಂದು ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಖಾಸಗಿ ಶಾಲೆಗಳಲ್ಲಿ ಆಯಾ ಆಡಳಿತ ಮಂಡಳಿ ನಿರ್ಧರಿಸಿರುವ ಸಮವಸ್ತ್ರವನ್ನು ಧರಿಸಬೇಕಾದುದು ಕಡ್ಡಾಯವಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿನ ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಅಥವಾ ಆಡಳಿತ ಮಂಡಳಿ ಮೇಲ್ವಿಚಾರಣಾ ಸಮಿತಿ ನಿರ್ಧರಿಸುವ ಸಮವಸ್ತ್ರ ಧರಿಸಬೇಕು. ಒಂದುವೇಳೆ ಆಡಳಿತ ಮಂಡಳಿ ಸಮವಸ್ತ್ರ

ಹಿಜಾಬ್ V/s ಕೇಸರಿ ಫೈಟ್ ಗೆ ಸರ್ಕಾರದಿಂದ ಬ್ರೇಕ್ ಯತ್ನ| ಸಮವಸ್ತ್ರ ಸಂಹಿತೆ ಜಾರಿಗೊಳಿಸಿ ಆದೇಶ Read More »

ಪರಪುರುಷರೊಂದಿಗೆ ಸ್ವಂತ ಪತ್ನಿಯ ಮಲಗಿಸಿ ಹಣ ಗಳಿಸುತ್ತಿದ್ದ ವಿಕೃತ ಪತಿ| ‘ವೈಪ್ ಸ್ವಾಪಿಂಗ್’ ದಂಧೆಗೆ ಪತ್ನಿಯೂ ಸಾಥ್

ಸಮಗ್ರ ಡಿಜಿಟಲ್ ಡೆಸ್ಕ್: ಸ್ವಂತ ಪತ್ನಿಯನ್ನು ಬೇರೆಯವರ ಜೊತೆ ಲೈಂಗಿಕ ಕ್ರಿಯೆ ಮಾಡುವುದನ್ನು ನೋಡುತ್ತಾ ಹಣ ಸಂಪಾದನೆ ಮಾಡುವ ದಾರಿ ಹಿಡಿದಿದ್ದ ಪತಿಗೆ ಪತ್ನಿಯೂ ಸಾಥ್ ನೀಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಇದೀಗ ಈ ವಿಕೃತ ದಂಪತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವೈಫ್ ಸ್ವಾಫಿಂಗ್ ದಂಧೆ ನಡೆಸುತ್ತಿದ್ದ ದಂಪತಿ ಹಣ ಸಂಪಾದನೆ ಮಾರ್ಗ ನೋಡಿ ಸ್ವತಃ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಎಲೆಕ್ಟ್ರಾನಿಕ್ ಶಾಪ್ ಸೇಲ್ಸ್ ಮನ್ ಆಗಿರುವ ವಿನಯ್ ಕುಮಾರ್ ಈ ದಂಧೆ

ಪರಪುರುಷರೊಂದಿಗೆ ಸ್ವಂತ ಪತ್ನಿಯ ಮಲಗಿಸಿ ಹಣ ಗಳಿಸುತ್ತಿದ್ದ ವಿಕೃತ ಪತಿ| ‘ವೈಪ್ ಸ್ವಾಪಿಂಗ್’ ದಂಧೆಗೆ ಪತ್ನಿಯೂ ಸಾಥ್ Read More »

ಚಿಕ್ಕಮಗಳೂರಲ್ಲಿ ಮತ್ತೆ ಹಿಜಾಬ್ ವಿವಾದ ಶುರು| ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳು

ಸಮಗ್ರ ನ್ಯೂಸ್ ಡೆಸ್ಕ್: ಕರಾವಳಿ ಬಳಿಕ ಮಲೆನಾಡಲ್ಲಿ ಹಿಜಾಬ್ ವಿವಾದ ಮತ್ತೆ ಕಾಣಿಸಿಕೊಂಡಿದೆ. ಕಾಫಿನಾಡು ಚಿಕ್ಕಮಗಳೂರಿನ ಕೊಪ್ಪ ಕಾಲೇಜಿನಲ್ಲಿ ಹಿಜಾಬ್ ಗಲಾಟೆ ಸುಖಾಂತ್ಯವಾಗಿತ್ತು. ಆದರೆ, ಈ ಗೊಂದಲ ಈಗ ಮತ್ತೆ ಚಿಕ್ಕಮಗಳೂರು ಜಿಲ್ಲೆಯಲ್ಲೂ ಪ್ರಾರಂಭವಾಗಿದೆ. ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥಿನಿಯ ವಿರುದ್ಧ ಯುವಕರು ಕೇಸರಿ ಶಾಲು ಧರಿಸಿ ಬಂದು ಪ್ರತಿಭಟನೆ ನಡೆಸುತ್ತಿದ್ದು, ಚಿಕ್ಕಮಗಳೂರು ನಗರದ ಇಂದಾವರ ದೊಡ್ದಸಿದ್ದಲಿಂಗೇಗೌಡ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಧರಣಿ ಮಾಡುತ್ತಿದ್ದಾರೆ. ಯಾರಿಗೂ ಹಿಜಾಬ್ ಧರಿಸಲು ಅವಕಾಶ ಕೊಡದಂತೆ ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದು, ಸಮಸ್ಯೆ ಬಗೆಹರಿಸದಿದ್ದರೆ,

ಚಿಕ್ಕಮಗಳೂರಲ್ಲಿ ಮತ್ತೆ ಹಿಜಾಬ್ ವಿವಾದ ಶುರು| ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳು Read More »

ಹಿಜಾಬ್ ಹೆಸರಲ್ಲಿ ಧರ್ಮಾಂಧತೆ ಬೇಡ – ಸಚಿವ ಕೋಟ

ಸಮಗ್ರ ನ್ಯೂಸ್ ಡೆಸ್ಕ್ : ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಶಿಕ್ಷಣ ವ್ಯವಸ್ಥೆಯಲ್ಲಿ ಅನಗತ್ಯ ಗೊಂದಲಗಳು ಬೇಡ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ಒಂದೂವರೆ ವರ್ಷದ ಹಿಂದೆ ಯಾವ ಸಮಸ್ಯೆಗಳೂ ಇರಲಿಲ್ಲ. ಹಿಜಾಬ್ ಹೆಸರಲ್ಲಿ ಧರ್ಮಾಂಧತೆಯನ್ನು ನಾವು ವಿರೋಧಿಸುತ್ತೇವೆ. ಹೊರಗಿನ ಮತಾಂಧ ಶಕ್ತಿಗಳು ಇದನ್ನು ಮಾಡುತ್ತಿವೆ ಎಂದು ಹೇಳಿದರು. ಇದು ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂಬಂತಾಗಿ ಕೇಸರಿ ಶಾಲು ಧರಿಸಿದ್ದಾರೆ. ಒಂದು ತಪ್ಪಾದರೆ ಇನ್ನೊಂದೂ ತಪ್ಪಲ್ಲವೇ

ಹಿಜಾಬ್ ಹೆಸರಲ್ಲಿ ಧರ್ಮಾಂಧತೆ ಬೇಡ – ಸಚಿವ ಕೋಟ Read More »

ಸದನಕ್ಕೂ ಹಿಜಾಬ್ ಧರಿಸಿ‌ ಬರ್ತೇನೆ, ತಾಕತ್ತಿದ್ರೆ ತಡೆಯಿರಿ- ಶಾಸಕಿ ಖನೀಜ್ ಫಾತಿಮಾ ಸವಾಲು

ಸಮಗ್ರ ನ್ಯೂಸ್ ಡೆಸ್ಕ್: ‘ಹಿಜಾಬ್ ಅನ್ನು ಸರ್ಕಾರ ಹೇಗೆ ಬ್ಯಾನ್ ಮಾಡುತ್ತೆ? ಎಂದು ನಾವು ನೋಡೇ ಬಿಡ್ತೀವಿ. ವಿಧಾನಸೌಧಕ್ಕೂ ಹಿಜಾಬ್ ಧರಿಸಿಯೇ ಹೋಗುವೆ. ಸದನಕ್ಕೂ ಹಿಜಾಬ್​ ಹಾಕಿಕೊಂಡೇ ಹೋಗುವೆ. ಧೈರ್ಯವಿದ್ದರೆ ನನ್ನನ್ನು ತಡೆಯಲಿ’ ಎಂದು ಕಲಬುರಗಿ ಉತ್ತರ ಕ್ಷೇತ್ರದ ಕಾಂಗ್ರೆಸ್​ ಶಾಸಕಿ ಖನೀಜ್ ಫಾತೀಮಾ ಸವಾಲು ಹಾಕಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಿಜಾಬ್ ನಮ್ಮ ಧರ್ಮದ ಸಾಂಪ್ರದಾಯಿಕ ಉಡುಪು. ಧರಿಸುವುದು ನಮ್ಮ ಹಕ್ಕು. ಹಿಜಾಬ್ ಬ್ಯಾನ್ ಮಾಡಿದ್ರೆ ಉಗ್ರ ಹೋರಾಟ ಮಾಡ್ತೀವಿ. ಈ‌ ಕುರಿತು

ಸದನಕ್ಕೂ ಹಿಜಾಬ್ ಧರಿಸಿ‌ ಬರ್ತೇನೆ, ತಾಕತ್ತಿದ್ರೆ ತಡೆಯಿರಿ- ಶಾಸಕಿ ಖನೀಜ್ ಫಾತಿಮಾ ಸವಾಲು Read More »

ಗಾಯಕಿ ಲತಾ ಮಂಗೇಶ್ಕರ್ ಗೆ ಮತ್ತೆ ಬಿಗಡಾಯಿಸಿದ ಆರೋಗ್ಯ ಸಮಸ್ಯೆ| ಐಸಿಯು‌ಗೆ ದಾಖಲು

ಸಮಗ್ರ‌ ನ್ಯೂಸ್ ಡೆಸ್ಕ್: ಕೊರೊನಾದಿಂದ ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ಅವರ ಆರೋಗ್ಯ ಸ್ಥಿತಿ ಮತ್ತೆ ಬಿಗಡಾಯಿಸಿದೆ ಎನ್ನಲಾಗಿದೆ. 92 ವರ್ಷದ ಲತಾ ಮಂಗೇಶ್ಕರ್‌ ಅವರು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆಂದು ಕೆಲ ದಿನಗಳ ಹಿಂದಷ್ಟೇ ಹೇಳಲಾಗಿತ್ತಾದರೂ ಮತ್ತೆ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನಲೆಯಲ್ಲಿ ಐಸಿಯು ನಲ್ಲಿರಿಸಿ ವೈದ್ಯರ ತಂಡ ತೀವ್ರ ನಿಗಾ ವಹಿಸಿದೆ ಎಂದು ತಿಳಿದುಬಂದಿದೆ. ಜನವರಿ ಅಂತ್ಯದ ಸುಮಾರಿಗೆ ಲತಾ ಮಂಗೇಶ್ಕರ್‌ ಕೋವಿಡ್‌ ಸೋಂಕಿಗೊಳಗಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗಾಯಕಿ ಲತಾ ಮಂಗೇಶ್ಕರ್ ಗೆ ಮತ್ತೆ ಬಿಗಡಾಯಿಸಿದ ಆರೋಗ್ಯ ಸಮಸ್ಯೆ| ಐಸಿಯು‌ಗೆ ದಾಖಲು Read More »

ಸೆಕ್ಸ್ ಸಿಡಿ ಪ್ರಕರಣ| ಮಾಜಿ‌ ಸಚಿವ ಜಾರಕಿಹೋಳಿ ನಿರಾಳ

ಸಮಗ್ರ ನ್ಯೂಸ್ ಡೆಸ್ಕ್: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಅಶ್ಲೀಲ ಸಿ.ಡಿ. ಬಹಿರಂಗ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ)ವು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರಿಗೆ ಕ್ಲೀನ್‌ಚಿಟ್‌ ನೀಡಿದೆ. ಅಶ್ಲೀಲ ಸಿಡಿ ಪ್ರಕರಣದ ತನಿಖೆ ಮುಕ್ತಾಯಗೊಳಿಸಿರುವ ಎಸ್‌ಐಟಿ ಶುಕ್ರವಾರ ನಗರದ ಮೊದಲನೇ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಅಂತಿಮ ವರದಿ ಸಲ್ಲಿಸಿದೆ. ತಂಡದ ತನಿಖಾಧಿಕಾರಿ ಎಂ.ಸಿ. ಕವಿತಾ ಅವರು ಎಸ್‌ಐಟಿ ಸರಕಾರಿ ವಿಶೇಷ ಅಭಿಯೋಜಕ ಪಿ.ಪ್ರಸನ್ನಕುಮಾರ್‌ ಅವರ ಮೂಲಕ ಕೋರ್ಟ್‌ಗೆ ಸುಮಾರು 300 ಪುಟಗಳ

ಸೆಕ್ಸ್ ಸಿಡಿ ಪ್ರಕರಣ| ಮಾಜಿ‌ ಸಚಿವ ಜಾರಕಿಹೋಳಿ ನಿರಾಳ Read More »

“ಭಾರತ ಧರ್ಮಾಧಾರಿತ ದೇಶವಲ್ಲ, ಪ್ರಜಾಪ್ರಭುತ್ವ ದೇಶ” – ಪತ್ರಕರ್ತ ಹೆಚ್.ಆರ್ ರಂಗನಾಥ್ ಹೇಳಿಕೆಗೆ ಶಾಸಕ ಯತೀಂದ್ರ ಸಿಡಿಮಿಡಿ

ಬೆಂಗಳೂರು: ಈ ದೇಶದ ಭದ್ರ ಬುನಾದಿಯೇ ಹಿಂದೂ ಧರ್ಮ, ಭಾರತ ಸೃಷ್ಟಿಯಾಗಿರುವುದೇ ಹಿಂದೂ ಧರ್ಮದ ಆಧಾರದಲ್ಲಿ ಎಂಬ ಹಿರಿಯ ಪತ್ರಕರ್ತ ಎಚ್.ಆರ್.ರಂಗನಾಥ್ ಅವರ ಹೇಳಿಕೆಗೆ ಕಾಂಗ್ರೆಸ್ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಡಾ.ಯತೀಂದ್ರ “ ಹೌದು ಇದು ಭಾರತ, ಪಾಕಿಸ್ತಾನವಲ್ಲ. ಪಾಕಿಸ್ತಾನದಂತೆ ನಮ್ಮದು ಧರ್ಮಾಧಾರಿತ ದೇಶವಲ್ಲ. ಎಲ್ಲ ಧರ್ಮ, ಜಾತಿ, ಜನಾಂಗ, ಲಿಂಗ, ಭಾಷೆ, ಸಂಸ್ಕೃತಿಯವರಿಗೂ ಸಮಾನ ಹಕ್ಕು ಹಾಗು ಸ್ವಾತಂತ್ರ್ಯ ನೀಡುವ ಉನ್ನತ ಆಶಯದೊಂದಿಗೆ ನಿರ್ಮಾಣಗೊಂಡ ರಾಷ್ಟ್ರ ನಮ್ಮದು.

“ಭಾರತ ಧರ್ಮಾಧಾರಿತ ದೇಶವಲ್ಲ, ಪ್ರಜಾಪ್ರಭುತ್ವ ದೇಶ” – ಪತ್ರಕರ್ತ ಹೆಚ್.ಆರ್ ರಂಗನಾಥ್ ಹೇಳಿಕೆಗೆ ಶಾಸಕ ಯತೀಂದ್ರ ಸಿಡಿಮಿಡಿ Read More »

ರಸ್ತೆ ನಿಯಮ ಉಲ್ಲಂಘಿಸುವ ಪ್ರಯಾಣಿಕರ ಗಮನಕ್ಕೆ

ಇನ್ನುಮುಂದೆ ಪೊಲೀಸರು ರಸ್ತೆಯಲ್ಲಿ ವಾಹನಗಳಿಗೆ ಅಡ್ಡ ಹಾಕಲ್ಲ ! ಆದರೇ…? ಮುಂದೆ ಓದಿ ಸಮಗ್ರ ನ್ಯೂಸ್ ಡೆಸ್ಕ್: ಇನ್ಮುಂದೆ ಪೊಲೀಸರು ರಸ್ತೆಯಲ್ಲಿ ಸಾರ್ವಜನಿಕರ ವಾಹನಗಳಿಗೆ ಅಡ್ಡ ಹಾಕುವುದಿಲ್ಲ. ಸಂಚಾರ ನಿಯಮ ಉಲ್ಲಂಘಿಸಿರುವ ವಾಹನ ಚಾಲಕ ಮತ್ತು ಸವಾರರಿಂದ ದಂಡ ವಸೂಲಿ ಮಾಡಲು ಸಂಚಾರ ಪೊಲೀಸರು ರಸ್ತೆಗಳ ಬದಲು ಇನ್ಮುಂದೆ ಆರ್​ಟಿಒ ಕಚೇರಿ ಮುಂದೆ ಕಾರ್ಯಾಚರಣೆ ನಡೆಸಲಿದ್ದಾರೆ. ರಸ್ತೆಗಳಲ್ಲಿ ವಾಹನಗಳನ್ನು ತಡೆದು ಹಳೇ ಪ್ರಕರಣಗಳ ಪರಿಶೀಲನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದರಿಂದ ಈ ಹೊಸ ಮಾದರಿ

ರಸ್ತೆ ನಿಯಮ ಉಲ್ಲಂಘಿಸುವ ಪ್ರಯಾಣಿಕರ ಗಮನಕ್ಕೆ Read More »