February 2022

ರಿಕ್ಷಾದಿಂದ ಹೊರಗೆಸೆಯಲ್ಪಟ್ಟು ಮಹಿಳೆ ಸಾವು

ಸಮಗ್ರ ಕ್ರೈಂ ಡೆಸ್ಕ್: ಕಾರು ಹಾಗೂ ಆಟೋ ರಿಕ್ಷಾ ಮಧ್ಯೆ ಢಿಕ್ಕಿ ಸಂಭವಿಸಿ ಮಹಿಳೆಯೊಬ್ಬರು ಆಟೋದಿಂದ ಹೊರಗೆ ಎಸೆಯಲ್ಪಟ್ಟು ಸಾವನ್ನಪ್ಪಿರುವ ಘಟನೆ ಬಂಟ್ವಾಳದ ಅಮ್ಟೂರು ಸಮೀಪದ ಸುಬ್ಬಕೋಡಿಯಲ್ಲಿ ನಡೆದಿದೆ. ಕಲ್ಲಡ್ಕ ಮುರಬೈಲು ನಿವಾಸಿ ದೇವಕಿ(70) ಮೃತಪಟ್ಟವರು ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಆಟೋ ಚಾಲಕ ಭೋಜ ಮೂಲ್ಯ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಎರಡೂ ವಾಹನಗಳು ಜಖಂಗೊಂಡಿವೆ. ಕಾರಿನಲ್ಲಿದ್ದವರಿಗೆ ಯಾವುದೇ ಗಾಯವಾಗಿಲ್ಲ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಿಕ್ಷಾದಿಂದ ಹೊರಗೆಸೆಯಲ್ಪಟ್ಟು ಮಹಿಳೆ ಸಾವು Read More »

ಹಿಜಾಬ್ ವಿವಾದ; ಪ್ರವೇಶಾತಿ ಸಂದರ್ಭದ‌ ತಿಳುವಳಿಕೆ ಪತ್ರ ವೈರಲ್

ಸಮಗ್ರ ನ್ಯೂಸ್ ಡೆಸ್ಕ್: ಉಡುಪಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಪ್ರವೇಶಾತಿ ಪಡೆಯುವಾಗ ಕಾಲೇಜಿನ ನಿಯಮಾವಳಿ ಪತ್ರಕ್ಕೆ ಮುಸ್ಲಿಂ ವಿದ್ಯಾರ್ಥಿನಿ ಸಹಿ ಹಾಕಿದ್ದಾರೆ ಎನ್ನಲಾದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಳೇಜು ನಿಯಮಾವಳಿ ಪಾಲನೆಯ ತಿಳಿವಳಿಕೆ ಪತ್ರದಲ್ಲಿ ಸಮವಸ್ತ್ರ ಹಾಗೂ ಗುರುತಿನ ಚೀಟಿ ಧರಿಸಿ ಬರುವುದು ಕಡ್ಡಾಯ ಸೇರಿದಂತೆ 10 ನಿಯಮಗಳು ಇವೆ. ವಿದ್ಯಾರ್ಥಿನಿ ರೇಷಮ್‌ ಎಂಬುವರು ಪತ್ರಕ್ಕೆ ಸಹಿ ಮಾಡಿದ್ದಾರೆ. ಈ ಪತ್ರ ಜಾಲತಾಣದಲ್ಲಿ ಸುದ್ದಿಯಾಗಿದ್ದು, ಪ್ರವೇಶಾತಿ ಪಡೆಯುವಾಗ ಸಮವಸ್ತ್ರ ನಿಯಮವನ್ನು ಒಪ್ಪಿ ಈಗ

ಹಿಜಾಬ್ ವಿವಾದ; ಪ್ರವೇಶಾತಿ ಸಂದರ್ಭದ‌ ತಿಳುವಳಿಕೆ ಪತ್ರ ವೈರಲ್ Read More »

ಹಿರಿಯ ನಟ ಅಶ್ವಥ್ ನಾರಾಯಣ ವಿಧಿವಶ

ಸಮಗ್ರ ನ್ಯೂಸ್ ಡೆಸ್ಕ್: ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದಂತ ಸ್ಯಾಂಡಲ್ ವುಡ್ ಹಿರಿಯ ನಟ ಅಶ್ವಥ್ ನಾರಾಯಣ ಇಂದು ಇನ್ನಿಲ್ಲವಾಗಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದ ಹಿರಿಯ ನಟ ವಿಧಿವಶರಾಗಿದ್ದಾರೆ. ಕೆಲ ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದಂತ ಅಶ್ವಥ್ ನಾರಾಯಣ್, ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಇದೀಗ ಅವರ ಬೆಂಗಳೂರಿನ ನಿವಾಸದಲ್ಲಿ ಹಿರಿಯ ನಟ ಅಶ್ವಥ್ ನಾರಾಯಣ್ ನಿಧನರಾಗಿದ್ದಾರೆ. ಈ ಮೂಲಕ ಬಾರದ ಲೋಕಕ್ಕೆ ತೆರಳಿದ್ದಾರೆ.

ಹಿರಿಯ ನಟ ಅಶ್ವಥ್ ನಾರಾಯಣ ವಿಧಿವಶ Read More »

ಪೊಲೀಸರು ಕ್ಯಾಪ್ ಹಾಕಲ್ಲ, ಟೋಪಿ ಹಾಕ್ತೇವೆ ಅಂದ್ರೆ ನಡೆಯುತ್ತಾ? ಇದೂ ಹಂಗೇನೆ… ಹಿಜಾಬ್ ವಿವಾದಕ್ಕೆ ಸಚಿವ ನಾಗೇಸ್ ತಿರುಗೇಟು

ಸಮಗ್ರ ನ್ಯೂಸ್ ಡೆಸ್ಕ್: ಶಾಲಾ -‌ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡಿ ಆದೇಶ ಹೊರಡಿಸುವ ಮೂಲಕ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಲು ಯತ್ನಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸರ್ಕಾರದ ಆದೇಶದಂತೆ ಸಮವಸ್ತ್ರ ಪಾಲಿಸಬೇಕು ಎಂದು ಖಡಕ್ ಆಗಿ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸಚಿವರು, ಈಗಾಗಲೇ ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡಿದೆ. ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ಒಂದು ವೇಳೆ ಪೊಲೀಸ್ ಇಲಾಖೆಯಲ್ಲಿ ಮುಸ್ಲಿಂರು ನಾವು

ಪೊಲೀಸರು ಕ್ಯಾಪ್ ಹಾಕಲ್ಲ, ಟೋಪಿ ಹಾಕ್ತೇವೆ ಅಂದ್ರೆ ನಡೆಯುತ್ತಾ? ಇದೂ ಹಂಗೇನೆ… ಹಿಜಾಬ್ ವಿವಾದಕ್ಕೆ ಸಚಿವ ನಾಗೇಸ್ ತಿರುಗೇಟು Read More »

ಫೆ.09 ರಿಂದ ಉದರದರ್ಶಕ ಶಸ್ತ್ರಚಿಕಿತ್ಸ ಶಿಬಿರ

ಸಮಗ್ರ ನ್ಯೂಸ್ ಡೆಸ್ಕ್: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಇದೇ ಫೆ. 09 ರಿಂದ 26 ರವರೆಗೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಉದರದರ್ಶಕ ಶಸ್ತ್ರಚಿಕಿತ್ಸ ಶಿಬಿರವನ್ನು ಆಯೋಜಿಸಲಾಗಿದೆ. ಲೇಡಿಗೋಷನ್ ಆಸ್ಪತ್ರೆಯ ವೈದ್ಯ ಡಾ. ದುರ್ಗಾಪ್ರಸಾದ್ ಹಾಗೂ ಮಡಿಕೇರಿ ಜಿಲ್ಲಾ ಆಸ್ಪತ್ರೆಯ ಡಾ. ನವೀನ್ ಅವರು ಫೆ.09ರ ಬುಧವಾರ ಮಂಗಳೂರು ಲೇಡಿಗೋಶನ್ ಆಸ್ಪತ್ರೆ, ಫೆ.19ರಂದು ತಾಲೂಕು ಆಸ್ಪತ್ರೆ ಬೆಳ್ತಂಗಡಿ, ಫೆ.22ರಂದು ಬಂಟ್ವಾಳ ತಾಲೂಕು ಆಸ್ಪತ್ರೆ, ಫೆ.23ರಂದು ಮಂಗಳೂರು ತಾಲೂಕಿನ ಮೂಡಬಿದ್ರೆ ಸಮುದಾಯ ಆರೋಗ್ಯ ಕೇಂದ್ರ,

ಫೆ.09 ರಿಂದ ಉದರದರ್ಶಕ ಶಸ್ತ್ರಚಿಕಿತ್ಸ ಶಿಬಿರ Read More »

ಗೋ ಕಳ್ಳರ ವಿರುದ್ಧ ಕಠಿಣ ಕ್ರಮ: ಸಂಸದ ನಳಿನ್ ಕುಮಾರ್ ಕಟೀಲ್

ಸಮಗ್ರ ನ್ಯೂಸ್ ಡೆಸ್ಕ್: ಗೋ ಕಳ್ಳತನ ಮತ್ತು ಗೋ ಸಾಗಾಟದ ವಿರುದ್ಧ ಪೊಲೀಸ ಇಲಾಖೆಯವರು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ಸಂಸದರಾದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಫೆ.5ರ ಶನಿವಾರ ಇಂಧನ ಮತ್ತು ಕನ್ನಡ ಹಾಗೂ ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸುನಿಲ್ ಕುಮಾರ್ ಅವರ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.ಕ್ರೀಯಾತ್ಮಕ ಯುವ ಸಚಿವರಾದ ಸುನಿಲ್ ಕುಮಾರ್ ಅವರು ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಅವರ ಉಸ್ತುವಾರಿಯಲ್ಲಿ

ಗೋ ಕಳ್ಳರ ವಿರುದ್ಧ ಕಠಿಣ ಕ್ರಮ: ಸಂಸದ ನಳಿನ್ ಕುಮಾರ್ ಕಟೀಲ್ Read More »

ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ಸಮಗ್ರ ನ್ಯೂಸ್ ಡೆಸ್ಕ್: 2022-23ನೇ ಸಾಲಿನ 6ನೇತರಗತಿ ಪ್ರವೇಶಕ್ಕೆ ನಗರದ ಕಮ್ಮಾಜೆ, ನೆಲ್ಲಿತೀರ್ಥ, ಗುರುಪುರ ಮೂಡಬಿದ್ರೆಯ ಕಲ್ಲಬೆಟ್ಟು, ಬೆಳ್ತಂಗಡಿಯ ಮಚ್ಚಿನ, ಮುಂಡಾಜೆ, ಹೊಸಂಗಡಿ ಬಂಟ್ವಾಳದ ವಗ್ಗ, ಪುತ್ತೂರಿನ ಬಲ್ನಾಡು, ಉಪ್ಪಿನಂಗಡಿ ಹಾಗೂ ಸುಳ್ಯದ ಪಂಜ ಮೊರಾರ್ಜಿ ದೇಸಾಯಿ, ಡಾ. ಬಿ. ಆರ್. ಅಂಬೇಡ್ಕರ್, ಇಂದಿರಾ ಗಾಂಧಿ ವಸತಿ ಶಾಲೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ.ಪ್ರಸ್ತುತ ಜಿಲ್ಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. 6 ರಿಂದ 10ನೇತರಗತಿಯ ವರೆಗೆ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಪ್ರತಿಭಾನ್ವಿತ

ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ Read More »

ಗಾನ ನಿಲ್ಲಿಸಿದ ಕೋಗಿಲೆ| ಲತಾ ಮಂಗೇಶ್ಕರ್ ಇನ್ನಿಲ್ಲ

ಸಮಗ್ರ ನ್ಯೂಸ್ ಡೆಸ್ಕ್: ಗಾನಕೋಗಿಲೆ ಲತಾ ಮಂಗೇಶ್ಕರ್(92) ಇಂದು( ಪೆ.6) ಬೆಳಗ್ಗೆ ನಿಧನರಾಗಿದ್ದಾರೆ. ಮುಂಬೈನ ಬ್ರಿಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ( ಫೆ.6) ಕೊನೆಯುಸಿರೆಳೆದಿದ್ದಾರೆ. ಜನವರಿ 8 ರಂದು ಕೋವಿಡ್ ಸೋಂಕಿಗೆ ತುತ್ತಾಗಿದ್ದ ಲತಾ ಮಂಗೇಶ್ಕರ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ಮಹಾರಾಷ್ಟ್ರದ ಇಂದೋರ್ ನಲ್ಲಿ 29 ಸೆಪ್ಟಂಬರ್ 1929 ಜನಿಸಿದ ಇವರು ತನ್ನ ಏಳು ದಶಕಗಳ ಸುಧೀರ್ಘ ಸಂಗೀತ ಲೋಕದಲ್ಲಿ ಹಲವು ಸುಪ್ರಸಿದ್ದ ಹಾಡುಗಳನ್ನು ಹಾಡಿದ್ದರು. ಇವರ ಕೋಗಿಲೆ

ಗಾನ ನಿಲ್ಲಿಸಿದ ಕೋಗಿಲೆ| ಲತಾ ಮಂಗೇಶ್ಕರ್ ಇನ್ನಿಲ್ಲ Read More »

ಹೆಂಡತಿಯ ತಂಗಿಗೆ ಗರ್ಭದಾನ| ಆರೋಪಿ‌ ಪೊಲೀಸ್ ವಶಕ್ಕೆ

ಸಮಗ್ರ ಕ್ರೈಂ ಡೆಸ್ಕ್: ಪತ್ನಿಯ ತಂಗಿ ಜೊತೆ ದೈಹಿಕ ಸಂಪರ್ಕ ಬೆಳೆಸಿ, ಆಕೆಯನ್ನು ಗರ್ಭಿಣಿಯನ್ನಾಗಿಸಿದ ಆರೋಪಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಶಿವಮೊಗ್ಗ ತಾಲೂಕು ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಪ್ರವೀಣ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ. ಪ್ರವೀಣ ಹೋಟೆಲ್ ನಡೆಸುತ್ತಿದ್ದನು. ಮದುವೆಯಾದ ಬಳಿಕ ತನ್ನ ಹೆಂಡತಿಯ ತಂಗಿಯನ್ನು ತನ್ನ ಮನೆಯಲ್ಲಿ ಇಟ್ಟುಕೊಂಡು ಓದಿಸುತ್ತಿದ್ದನು. ಕಳೆದ ಐದಾರು ವರ್ಷಗಳಿಂದ ಮನೆಯಲ್ಲೇ ಇದ್ದ ತನ್ನ ಪತ್ನಿ ತಂಗಿಯ ಮೇಲೆ ಕಣ್ಣಿಟ್ಟಿದ್ದ ಪ್ರವೀಣ ಬಲವಂತದಿಂದ ಕಳೆದ ಒಂದು ವರ್ಷದಿಂದ ದೈಹಿಕ‌ ಸಂಪರ್ಕ

ಹೆಂಡತಿಯ ತಂಗಿಗೆ ಗರ್ಭದಾನ| ಆರೋಪಿ‌ ಪೊಲೀಸ್ ವಶಕ್ಕೆ Read More »

ಎಬಿವಿಪಿ ಘಟಕ ಬಂಟ್ವಾಳ ವತಿಯಿಂದ ‌ತಾಲೂಕು ಅಭ್ಯಾಸ ವರ್ಗ, ಪದ್ಮಶ್ರೀ ಮಹಾಲಿಂಗ ನಾಯ್ಕರಿಗೆ ಸನ್ಮಾನ

ಸಮಗ್ರ ನ್ಯೂಸ್ ಡೆಸ್ಕ್: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ಇದರ ತಾಲೂಕು ಅಭ್ಯಾಸ ವರ್ಗವು ಪೆಬ್ರವರಿ 05 ರಂದು ಬಿ.ಸಿ ರೋಡಿನ ಗೀತಾಂಜಲಿ ಸಬಾ ಭವನದಲ್ಲಿ ಜರುಗಿತು.ಕಾರ್ಯಕ್ರಮವನ್ನು ಇಂಡಿಯಾನ ಆಸ್ಪತ್ರೆಯ ಹಿರಿಯ ವೈದ್ಯ ಹಾಗೂ ನಿವೃತ್ತ ಯೋಧರಾದ ಡಾ. ವೆಂಕಟೇಶ್ ಕುಂಪಲ ಇವರು ಉದ್ಘಾಟಿಸಿ ಮಾತನಾಡಿದರು. ವೇದಿಕೆಯಲ್ಲಿ ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಮಣಿಕಂಠ ಕಳಸ, ವಿಭಾಗ ಸಂಚಾಲಕರಾದ ಹರ್ಷಿತ್ ಕೊಯಿಲ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಶ್ರೀ ಲಕ್ಷ್ಮೀ ಮಠದಮೂಲೆ, ಬಂಟ್ವಾಳ ನಗರ ಕಾರ್ಯದರ್ಶಿ ನಾಗರಾಜ್

ಎಬಿವಿಪಿ ಘಟಕ ಬಂಟ್ವಾಳ ವತಿಯಿಂದ ‌ತಾಲೂಕು ಅಭ್ಯಾಸ ವರ್ಗ, ಪದ್ಮಶ್ರೀ ಮಹಾಲಿಂಗ ನಾಯ್ಕರಿಗೆ ಸನ್ಮಾನ Read More »