‘ಮುಸ್ಲಿಂ ಹೆಣ್ಮಕ್ಳೇ ಹೆದರಬೇಡಿ, ಮುನ್ನುಗ್ಗಿ’; ಹಿಜಾಬ್ ವಿವಾದ ಕುರಿತು ಹಿಂದೂ ಸಹೋದರಿ ಹೇಳೋದೇನು ಗೊತ್ತಾ?
ಸಮಗ್ರ ನ್ಯೂಸ್ ಡೆಸ್ಕ್: ರಾಜ್ಯದಲ್ಲಿ ಹಿಜಾಬ್ ಕುರಿತ ಮೇಲಾಟಗಳು ತಾರಕಕ್ಕೆ ಏರುತ್ತಿರುವಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧಗಳ ಚರ್ಚೆ ಜೋರಾಗುತ್ತಿದೆ. ಕೆಲವು ಮಂದಿ ಹಿಜಾಬ್ ಕುರಿತು ಸಮರ್ಥನೆ ಮಾಡಿಕೊಂಡರೆ ಮತ್ತೆ ಹಲವರು ಇದರ ವಿರುದ್ದ ಮಾತನಾಡುತ್ತಿದ್ದಾರೆ. ಈ ನಡುವೆ ತರಗತಿಯಲ್ಲಿ ಹಿಜಾಬ್ ಧಾರಣೆ ವಿರೋಧಿಸಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕುತ್ತಾ ಬರುತ್ತಿದ್ದು, ಕಾಲೇಜು ಮುಖ್ಯಸ್ಥರಿಗೆ ತಲೆನೋವಾಗಿ ಪರಿಣಮಿಸಿದೆ. ಸರ್ಕಾರ ಸಮವಸ್ತ್ರ ಕುರಿತು ಕಠಿಣ ಆದೇಶ ತಂದರೂ ಅದ್ಯಾವುದಕ್ಕೂ ಕಿಮ್ಮತ್ತು ನೀಡದೆ ವಿದ್ಯಾರ್ಥಿಗಳು ಬಣ್ಣಗಳ ಹೋರಾಟದಲ್ಲಿ ತೊಡಗಿರುವುದು […]