February 2022

ಮಡಿಕೇರಿ: ಕೇಸರಿ ಶಾಲು ಹಾಕುವ ವಿಚಾರದಲ್ಲಿ ಒಂದೇ ಗುಂಪಿನೊಳಗೆ ಘರ್ಷಣೆ; ವಿದ್ಯಾರ್ಥಿಗೆ ಚೂರಿ ಇರಿತ

ಸಮಗ್ರ ನ್ಯೂಸ್ ಡೆಸ್ಕ್: ಕಾಲೇಜು ಒಳಗೆ ಕೇಸರಿ ಶಾಲು ಹಾಕುವ ವಿಚಾರದಲ್ಲಿ ಒಂದೇ ಗುಂಪಿನ ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆದು ವಿದ್ಯಾರ್ಥಿ ಮೇಲೆ ಚಾಕು ದಾಳಿ ನಡೆದಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರದ ಸುಂದರನಗರ ಕಾಲೇಜಿನ ಆವರಣದಲ್ಲಿ ಸಂಭವಿಸಿದೆ. ಸುಂದರನಗರ ಕಾಲೇಜು ಸೀನಿಯರ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಾಕುವಂತೆ ಅಂತಿಮ ವರ್ಷದ ವಿದ್ಯಾರ್ಥಿಗಳು ಒತ್ತಾಯ ಮಾಡಿದಾಗ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅಂತಿಮ ವರ್ಷದ ವಿದ್ಯಾರ್ಥಿ ಸಂದೀಪ್ ಎಂಬಾತನ ಹೆಗಲು ಹಾಗೂ […]

ಮಡಿಕೇರಿ: ಕೇಸರಿ ಶಾಲು ಹಾಕುವ ವಿಚಾರದಲ್ಲಿ ಒಂದೇ ಗುಂಪಿನೊಳಗೆ ಘರ್ಷಣೆ; ವಿದ್ಯಾರ್ಥಿಗೆ ಚೂರಿ ಇರಿತ Read More »

ಬಂಟ್ವಾಳ: ವಾಮದಪದವು ಸರ್ಕಾರಿ ಕಾಲೇಜಿನಲ್ಲೂ‌ ಕೇಸರಿ ಶಾಲು ಧರಿಸಿ ಆಗಮಿಸಿದ ವಿದ್ಯಾರ್ಥಿಗಳು

ಸಮಗ್ರ ನ್ಯೂಸ್ ಡೆಸ್ಕ್: ಹಿಜಾಬ್ ಪ್ರಕರಣ ತಲೆ ಎತ್ತಿದ ಬೆನ್ನಲ್ಲೇ ಇದೀಗ ದಕ್ಷಿಣ ಕನ್ನಡ ಜಿಲ್ಲೆಗೂ ಹಿಜಾಬ್ ಪ್ರಕರಣ ಹಬ್ಬಿಕೊಂಡಿದೆ. ಬಂಟ್ವಾಳ ತಾಲೂಕಿನ ಕಾಲೇಜಿನಲ್ಲೂ ಕೇಸರಿ ಶಾಲು ತೊಟ್ಟು ವಿದ್ಯಾರ್ಥಿಗಳು ಆಗಮಿಸಲು ಶುರು ಮಾಡಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಧರಣಿ ವಿದ್ಯಾರ್ಥಿಗಳು ಧರಣಿ ನಡೆಸುತ್ತಿದ್ದಾರೆ. ಹಿಜಾಬ್ ವಿರುದ್ಧ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ಬಂಟ್ವಾಳ: ವಾಮದಪದವು ಸರ್ಕಾರಿ ಕಾಲೇಜಿನಲ್ಲೂ‌ ಕೇಸರಿ ಶಾಲು ಧರಿಸಿ ಆಗಮಿಸಿದ ವಿದ್ಯಾರ್ಥಿಗಳು Read More »

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ

ಸಮಗ್ರ ನ್ಯೂಸ್ ಡೆಸ್ಕ್: 2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಗಳವಾರ ಪ್ರಕಟಿಸಿದೆ. ಏಪ್ರಿಲ್ 16 ರಿಂದ ಮೇ 6ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ. ಪರೀಕ್ಷಾ ವೇಳಾಪಟ್ಟಿ16-4-2022- ಗಣಿತಶಾಸ್ತ್ರ, ಶಿಕ್ಷಣ ಶಾಸ್ತ್ರ, ಮೂಲ ಗಣಿತ 18-4-2022- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ 19-4-2022 ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ Read More »

ರಾಜ್ಯದಲ್ಲಿ 3 ದಿನ ಹೈಸ್ಕೂಲ್ ಮತ್ತು ಪದವಿ ಕಾಲೇಜಿಗೆ ರಜೆ – ಸಿಎಂ ಬೊಮ್ಮಾಯಿ

ಸಮಗ್ರ ನ್ಯೂಸ್ ಡೆಸ್ಕ್: ಹಿಜಾಬ್ ಮತ್ತು ಕೇಸರಿ ಶಾಲಿನ ವಿಷಯದಲ್ಲಿ ಸಂಘರ್ಷ ಕಂಡುಬಂದಿರುವ ಹಿನ್ನಲೆಯಲ್ಲಿ 3 ದಿನ ಹೈಸ್ಕೂಲ್ ಹಾಗೂ ಪದವಿ ಕಾಲೇಜುಗಳಿಗೆ‌ ರಜೆ‌ ಘೋಷಿಸಿದ್ದಾರೆ. ಹಿಜಾಬ್‌ ವಿವಾದ ರಾಜ್ಯದಲ್ಲಿ ಹೆಚ್ಚಿದ್ದು, ಈ ವಿವಾದ ಹೈ ಸ್ಕೂಲ್‌, ಪ.ಪೂರ್ವ, ಪದವಿ ಎಂಜಿನಿಯರ್‌ ಕಾಲೇಜುಗಳಿಗೆ ಗಳಿಗೆ ವಿಸ್ತರಣೆಯಾಗಬಾರದು ಎನ್ನುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಇತರೆ ಕಡೆ ಈ ಪ್ರತಿಭಟನೆ ನಡೆದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲಿದೆ ಹೀಗಾಗಿ ಮುಂಜಾಗ್ರತ ಕ್ರಮವಾಗಿ ಈ ನಿರ್ಧಾರವನ್ನು

ರಾಜ್ಯದಲ್ಲಿ 3 ದಿನ ಹೈಸ್ಕೂಲ್ ಮತ್ತು ಪದವಿ ಕಾಲೇಜಿಗೆ ರಜೆ – ಸಿಎಂ ಬೊಮ್ಮಾಯಿ Read More »

ಸುಳ್ಯ: ಪಲ್ಟಿಯಾದ ಕಾರೊಳಗೆ ಭಿನ್ನ ಕೋಮಿನ ಜೋಡಿ..!

ಸಮಗ್ರ‌ ನ್ಯೂಸ್ ಡೆಸ್ಕ್: ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರೊಳಗೆ ಅನ್ಯಕೋಮಿನ ಯುವ ಜೋಡಿಯೊಂದು ಪತ್ತೆಯಾದ ಘಟನೆ ಸುಳ್ಯ ಸಮೀಪದ ನಾಗಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಆಲೆಟ್ಟಿ ರಸ್ತೆಯಲ್ಲಿ ಕೇರಳದ ಬಂದಡ್ಕ ಕಡೆಯಿಂದ ಬಂದ ಬ್ಯಾಲೆನೊ ಕಾರು ಅತೀ ವೇಗದಿಂದ ಬಂದು ನಾಗಪಟ್ಟಣ ವಿಶ್ರಾಂತಿ ಗೃಹದ ಬಳಿಯ ತಿರುವಿನಲ್ಲಿ ಪಲ್ಟಿಯಾಗಿದೆ. ಈ ಕಾರಿನಲ್ಲಿ ಮಡಿಕೇರಿ ಮೂಲದ ಅನ್ಯಕೋಮಿನ ಯುವಕ ಮತ್ತು ಯುವತಿ ಪತ್ತೆಯಾಗಿದ್ದು, ಇವರಿಬ್ಬರು ಕೇರಳದ ಬಂದಡ್ಕ ಕಡೆಯಿಂದ ಕೋಲ್ಚಾರು ಮಾರ್ಗವಾಗಿ ಹಿಂತಿರುಗಿ ಬರುತ್ತಿದ್ದರು. ಕಾರಲ್ಲಿದ್ದ ಇಬ್ಬರು ಸಣ್ಣ ಪುಟ್ಟ

ಸುಳ್ಯ: ಪಲ್ಟಿಯಾದ ಕಾರೊಳಗೆ ಭಿನ್ನ ಕೋಮಿನ ಜೋಡಿ..! Read More »

ಹಿಜಾಬ್ ವಿವಾದ: ಉದ್ವಿಗ್ನಗೊಂಡ ಶಿಕ್ಷಣ ಸಂಸ್ಥೆಗಳು| ಹಲವೆಡೆ ಬಿಗು ವಾತಾವರಣ

ಸಮಗ್ರ ನ್ಯೂಸ್ ಡೆಸ್ಕ್: ಹಿಜಾಬ್​ ಪರ-ವಿರೋಧ ಜಟಾಪಟಿ ರಾಜ್ಯದ ಹಲವು ಜಿಲ್ಲೆಗಳಿಗೆ ವ್ಯಾಪಿಸಿದೆ. ಸರ್ಕಾರದ ನಿರ್ದೇಶನದ ಹೊರತಾಗಿಯೂ ಹಲವು ವಿದ್ಯಾರ್ಥಿನಿಯರು ಇಂದು(ಮಂಗಳವಾರ) ಕೂಡ ಹಿಜಾಬ್​ ಧರಿಸಿ ಕಾಲೇಜಿಗೆ ಬಂದರೆ, ಇದಕ್ಕೆ ಪ್ರತಿಯಾಗಿ ಕೇಸರಿ ಶಾಲು ಧರಿಸಿ ಹಲವರು ಕಾಲೇಜು ಪ್ರವೇಶಿಸಿದ್ದಾರೆ. ಇದರಿಂದ ಹಲವು ಕಾಲೇಜುಗಳ ಬಳಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಉಡುಪಿ, ಮಂಡ್ಯ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಕಲಬುರಗಿ, ರಾಯಚೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹಿಜಾಬ್​ ವಿವಾದ ಭುಗಿಲೆದ್ದಿದೆ. ಹಿಜಾಬ್​ ಧರಿಸಿ ಮುಸ್ಲಿಂ ಯುವತಿಯರು

ಹಿಜಾಬ್ ವಿವಾದ: ಉದ್ವಿಗ್ನಗೊಂಡ ಶಿಕ್ಷಣ ಸಂಸ್ಥೆಗಳು| ಹಲವೆಡೆ ಬಿಗು ವಾತಾವರಣ Read More »

ಕುಂದಾಪುರ: ಹಿಜಾಬ್‌ ಹೋರಾಟಕ್ಕಾಗಿ ಬರ್ತಿದ್ದಾರೆ ಹೈದ್ರಾಬಾದ್ ಮುಸ್ಲಿಂಮರು!!

ಸಮಗ್ರ ನ್ಯೂಸ್ ಡೆಸ್ಕ್: ಹಿಜಾಬ್ ವಿವಾದ ದಿನೇ ದಿನೇ ಹೊಸ ರೂಪ ಪಡೆಯುತ್ತಿದೆ. ಸಣ್ಣ ಮಟ್ಟದಲ್ಲಿಯೇ ಇದ್ದ ಹಿಜಾಬ್ ವಿವಾದ ಈಗ ದೊಡ್ಡಮಟ್ಟದಲ್ಲಿಯೇ ಬದಲಾಗುತ್ತಿದೆ. ದೂರದ ಹೈದ್ರಾಬಾದ್ ನಿಂದಲೇ ಕುಂದಾಪುರಕ್ಕೆ ಮುಸ್ಲಿಂರು ಬರುತಿದ್ದಾರೆ. ಕುಂದಾಪುರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ವಿಚಾರವಾಗಿಯೇ ಹೋರಾಟ ನಡೆಯುತ್ತಿದೆ. ಈ ಒಂದು ಹೋರಾಟಕ್ಕೆ ಹೈದ್ರಾಬಾದ್ ಮುಸ್ಲಿಂರೂ ಬಂದು ಬೆಂಬಲ ಸೂಚಿಸಿದ್ದಾರೆ. ಸಲ್ಮಾನ್ ಹೆಸರಿನ ವ್ಯಕ್ತಿಯ ನೇತೃತ್ವದಲ್ಲಿ ಒಂದಷ್ಟು ಮುಸ್ಲಿಂರು ಇಲ್ಲಿಗೆ ಬಂದಿದ್ದಾರೆ. ಹಿಜಾಬ್ ಧರಿಸಲು ಅವಕಾಶ ಮಾಡಿಕೊಡದೇ ಇದ್ದರೇ ಸುಪ್ರಿಂ ಕೋರ್ಟ್ ಗೂ ಹೋಗುತ್ತೇವೆ

ಕುಂದಾಪುರ: ಹಿಜಾಬ್‌ ಹೋರಾಟಕ್ಕಾಗಿ ಬರ್ತಿದ್ದಾರೆ ಹೈದ್ರಾಬಾದ್ ಮುಸ್ಲಿಂಮರು!! Read More »

ಕೋವಿಡ್ ಲಸಿಕೆ ಪಡೆಯಲು ಆಧಾರ್ ಕಡ್ಡಾಯವಲ್ಲ

ನವದೆಹಲಿ: ಕೋವಿಡ್ ಲಸಿಕೆಗಾಗಿ ಕೋವಿನ್ ಪೋರ್ಟಲ್‍ನಲ್ಲಿ ನೋಂದಣಿಗಾಗಿ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸುಪ್ರಿಂ ಕೋರ್ಟ್ ಗೆ ತಿಳಿಸಿದೆ. ಪುಣೆ ಮೂಲದ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಸಿದ್ಧಾರ್ಥ್ ಶಂಕರ್ ಶರ್ಮಾ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಕೊವಿಡ್-19 ಲಸಿಕೆಯನ್ನು ನೀಡುವ ಉದ್ದೇಶಕ್ಕಾಗಿ ಗುರುತಿನ ಏಕೈಕ ಪುರಾವೆಯಾಗಿ ಆಧಾರ್ ಕಾರ್ಡ್ ನೀಡಲು ಕೇಳಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಾಯೋಗಿಕ ಕ್ರಮಗಳಿಗೆ ವಿರುದ್ಧವಾಗಿ, ಇತ್ತೀಚೆಗೆ ಮತ್ತೊಂದು

ಕೋವಿಡ್ ಲಸಿಕೆ ಪಡೆಯಲು ಆಧಾರ್ ಕಡ್ಡಾಯವಲ್ಲ Read More »

ಪೊಲೀಸ್ ನೇಮಕಾತಿಯಲ್ಲಿ ಅಕ್ರಮ – 545 ಸಬ್ ಇನ್ಸ್ ಪೆಕ್ಟರ್ ಹುದ್ದೆ‌ ನೇಮಕಾತಿಗೆ ತಡೆ

ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯ 545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಸಂಬಂಧ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಮ್ರಿತ್ ಪಾಲ್ ಅವರು ರಾಜ್ಯದ ಹಿರಿಯ ಅಧಿಕಾರಿಗಳಿಗೆ ತುರ್ತು ಸಂದೇಶ ಕಳುಹಿಸಿದ್ದಾರೆ. 545 ಪಿಎಸ್ ಐ ಹುದ್ದೆಗಳ ನೇಮಕಕ್ಕೆ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ 371 (ಜೆ) ಮೀಸಲಾತಿಯಲ್ಲಿ ಅನ್ಯಾಯ ಮತ್ತು ಪರೀಕ್ಷೆಯಲ್ಲಿ

ಪೊಲೀಸ್ ನೇಮಕಾತಿಯಲ್ಲಿ ಅಕ್ರಮ – 545 ಸಬ್ ಇನ್ಸ್ ಪೆಕ್ಟರ್ ಹುದ್ದೆ‌ ನೇಮಕಾತಿಗೆ ತಡೆ Read More »

ಹೈಕೋರ್ಟ್ ಅಂಗಳದಲ್ಲಿ ಹಿಜಾಬ್| ಇಂದು(ಫೆ.8)ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ

ಸಮಗ್ರ ನ್ಯೂಸ್ ಡೆಸ್ಕ್: ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿರ್ಬಂಧಿಸಿರುವ ವಿಚಾರದಲ್ಲಿ ಉಂಟಾಗಿರುವ ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ರಾಷ್ಟ್ರಮಟ್ಟದಲ್ಲೂ ಈ ಬಗ್ಗೆ ಚರ್ಚೆಯಾಗುತ್ತಿದ್ದು, ಇಂದು ರಾಜ್ಯ ಹೈಕೋರ್ಟ್​ನಲ್ಲಿ ಈ ಕುರಿತ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಯಲಿದೆ. ಹಿಜಾಬ್ ಧರಿಸುವುದನ್ನು ನಿರ್ಬಂಧಿಸಿದ ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಕ್ರಮ ಪ್ರಶ್ನಿಸಿ ವಿದ್ಯಾರ್ಥಿನಿಯರು, ಪಾಲಕರು ಸಲ್ಲಿಸಿರುವ ಎರಡು ಪ್ರತ್ಯೇಕ ಅರ್ಜಿಗಳನ್ನು ಹೈಕೋರ್ಟ್ ವಿಚಾರಣೆ ನಡೆಸಲಿದೆ. ಈ ಮಧ್ಯೆ, ಹಿಜಾಬ್ ಧರಿಸಿದವರಿಗೆ

ಹೈಕೋರ್ಟ್ ಅಂಗಳದಲ್ಲಿ ಹಿಜಾಬ್| ಇಂದು(ಫೆ.8)ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ Read More »