February 2022

“ಜೈ ಶ್ರೀರಾಮ್” ಎದುರು “ಅಲ್ಲಾಹು ಅಕ್ಬರ್‌” ಘೋಷಣೆ ಹಾಕಿದ ವಿದ್ಯಾರ್ಥಿನಿಗೆ ಕಾಂಗ್ರೆಸ್ ನಾಯಕನಿಂದ ಐಫೋನ್ ಗಿಫ್ಟ್!

ಸಮಗ್ರ ನ್ಯೂಸ್ ಡೆಸ್ಕ್ : ರಾಜ್ಯದಲ್ಲಿ ನಡೆಯುತ್ತಿರುವ ವಿವಾದದ ಮಧ್ಯೆ “ಜೈ ಶ್ರೀರಾಮ್” ಎಂದು ಕೂಗುತ್ತಿದ್ದ ವಿದ್ಯಾರ್ಥಿಗಳ ಎದುರು “ಅಲ್ಲಾಹು ಅಕ್ಬರ್” ಎಂದು ಕೂಗಿದ ವಿದ್ಯಾರ್ಥಿನಿಗೆ ಕಾಂಗ್ರೆಸ್ ನಾಯಕನಿಂದ ಐಫೋನ್ ಗಿಫ್ಟ್ ಸಿಕ್ಕಿದೆ. ಮಂಡ್ಯ ಜಿಲ್ಲೆಯಲ್ಲಿ ಸೋಮವಾರ ಹಿಜಾಬ್ ಕುರಿತಂತೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ವಿದ್ಯಾರ್ಥಿನಿಯೊಬ್ಬಳು ಹಿಜಾಬ್ ಧರಿಸಿಕೊಂಡು ಕಾಲೇಜಿಗೆ ಬಂದಿದ್ದಳು. ಇದನ್ನು ಕಂಡ ಹಿಂದೂ ವಿದ್ಯಾರ್ಥಿಗಳು ಆಕೆಯ ಎದುರು ಹೋಗಿ “ಜೈ ಶ್ರೀರಾಮ್, ಜೈ ಶ್ರೀರಾಮ್” ಎಂದು ಘೋಷಣೆ ಕೂಗಿದ್ದರು. ಈ ವೇಳೆ ಆಕೆ “ಅಲ್ಲಾಹು […]

“ಜೈ ಶ್ರೀರಾಮ್” ಎದುರು “ಅಲ್ಲಾಹು ಅಕ್ಬರ್‌” ಘೋಷಣೆ ಹಾಕಿದ ವಿದ್ಯಾರ್ಥಿನಿಗೆ ಕಾಂಗ್ರೆಸ್ ನಾಯಕನಿಂದ ಐಫೋನ್ ಗಿಫ್ಟ್! Read More »

‘ ಹಿಜಾಬ್ ಕುರಿತು ಮಧ್ಯಪ್ರವೇಶ ಮಾಡಲ್ಲ’ – ಸುಪ್ರೀಂ ಮೆಟ್ಟಿಲೇರಿದ ಅರ್ಜಿದಾರರಿಗೆ ಖಡಕ್ ಉತ್ತರ ನೀಡಿದ ಕೋರ್ಟ್| ಅರ್ಜಿದಾರರಿಗೆ ಹಿನ್ನಡೆ

ಸಮಗ್ರ ನ್ಯೂಸ್ ಡೆಸ್ಕ್ : ಹಿಜಾಬ್ ವಿವಾದದಲ್ಲಿ ಸದ್ಯಕ್ಕೆ ತನ್ನ ಮಧ್ಯಪ್ರವೇಶ ಇಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ಇಂದು ಸ್ಪಷ್ಟಪಡಿಸಿದೆ. ಶಾಲಾ – ಕಾಲೇಜುಗಳಲ್ಲಿ ಹಿಜಾಬ್ ಅನುಮತಿ ನೀಡುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಿನ್ನೆ ನಡೆಸಿದ್ದ ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ತ್ರಿ ಸದಸ್ಯ ಪೀಠವು, ಮುಂದಿನ ಆದೇಶದವರೆಗೆ ಧಾರ್ಮಿಕ ಗುರುತುಗಳ ಉಡುಪು ಧರಿಸಿ ಶಾಲೆಗಳಿಗೆ ತೆರಳದಂತೆ ಮಧ್ಯಂತರ ಆದೇಶ ಹೊರಡಿಸಿತ್ತು. ಇದೀಗ ಈ ಆದೇಶವನ್ನು ಪ್ರಶ್ನಿಸಿ, ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈ

‘ ಹಿಜಾಬ್ ಕುರಿತು ಮಧ್ಯಪ್ರವೇಶ ಮಾಡಲ್ಲ’ – ಸುಪ್ರೀಂ ಮೆಟ್ಟಿಲೇರಿದ ಅರ್ಜಿದಾರರಿಗೆ ಖಡಕ್ ಉತ್ತರ ನೀಡಿದ ಕೋರ್ಟ್| ಅರ್ಜಿದಾರರಿಗೆ ಹಿನ್ನಡೆ Read More »

ದೇಶಾದ್ಯಂತ ಏರ್ ಟೆಲ್ ಸರ್ವರ್‌ ಡೌನ್| ಹಲವು ಸೇವೆಗಳು ಸ್ಥಗಿತ

ಸಮಗ್ರ ನ್ಯೂಸ್ ಡೆಸ್ಕ್: ಏರ್‌ಟೆಲ್‌ನ ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ಸೇವೆಗಳು ಸ್ಥಗಿತಗೊಂಡಿವೆ. ಏರ್‌ಟೆಲ್‌ನ ನೆಟ್‌ವರ್ಕ್‌ನಲ್ಲಿನ ಸ್ಥಗಿತವನ್ನು ವರದಿ ಮಾಡಲು ಭಾರತದ ವಿವಿಧ ಸ್ಥಳಗಳಿಂದ ಅನೇಕ ಬಳಕೆದಾರರು Twitter ನಲ್ಲಿ ಪೋಸ್ಟ್ ಮಾಡಿದ್ದಾರೆ. ಕಂಪನಿಯು ಸದ್ಯಕ್ಕೆ ಸಮಸ್ಯೆಯನ್ನು ಒಪ್ಪಿಕೊಂಡಿಲ್ಲ, ಆದರೆ ಆನ್‌ಲೈನ್ ವರದಿಗಳು ಈ ಸಮಸ್ಯೆಯು ವ್ಯಾಪಕವಾಗಿರಬಹುದು ಮತ್ತು ಏರ್‌ಟೆಲ್ ಮೊಬೈಲ್ ಇಂಟರ್ನೆಟ್ ಮತ್ತು ಕಂಪನಿಯ ಬ್ರಾಡ್‌ಬ್ಯಾಂಡ್ ಮತ್ತು ವೈ-ಫೈ ಸೇವೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸೂಚಿಸುತ್ತದೆ. ಈ ಕ್ಷಣದಲ್ಲಿ Airtel ನ ಅಪ್ಲಿಕೇಶನ್ ಸಹ ಕಾರ್ಯನಿರ್ವಹಿಸುತ್ತಿಲ್ಲ

ದೇಶಾದ್ಯಂತ ಏರ್ ಟೆಲ್ ಸರ್ವರ್‌ ಡೌನ್| ಹಲವು ಸೇವೆಗಳು ಸ್ಥಗಿತ Read More »

ಸುಪ್ರಿಕೋರ್ಟ್ ಮೆಟ್ಟಿಲೇರಿದ ಹಿಜಾಬ್ ವಿವಾದ| ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕದ ತಟ್ಟಿದ ಅರ್ಜಿದಾರರು

ಸಮಗ್ರ ನ್ಯೂಸ್ ಡೆಸ್ಕ್: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಅನುಮತಿ ನೀಡುವಂತೆ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆಯನ್ನು ನಿನ್ನೆ ನಡೆಸಿದ್ದ ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ತ್ರಿ ಸದಸ್ಯ ಪೀಠವು, ಮುಂದಿನ ಆದೇಶದವರೆಗೆ ಧಾರ್ಮಿಕ ಗುರುತುಗಳ ಉಡುಪು ಧರಿಸಿ ಶಾಲೆಗಳಿಗೆ ತೆರಳದಂತೆ ಮಧ್ಯಂತರ ಆದೇಶ ಹೊರಡಿಸಿತ್ತು. ಇದೀಗ ಈ ಆದೇಶವನ್ನು ಪ್ರಶ್ನಿಸಿ, ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಮೂಲಕ ಈಗ ಕರ್ನಾಟಕದ ಹಿಜಾಬ್, ಕೇಸರಿ ಶಾಲು ಸಂಘರ್ಷ ಸುಪ್ರೀಂ ಕೋರ್ಟ್ ಅಂಗಳಕ್ಕೆ ತಲುಪಿದಂತೆ ಆಗಿದೆ. ಹಿಜಾಬ್ ನಿಷೇಧವನ್ನು

ಸುಪ್ರಿಕೋರ್ಟ್ ಮೆಟ್ಟಿಲೇರಿದ ಹಿಜಾಬ್ ವಿವಾದ| ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕದ ತಟ್ಟಿದ ಅರ್ಜಿದಾರರು Read More »

ಮಂಗಳೂರು: ರಾತ್ರಿ ಜೊತೆಗೆ ಮಲಗಿದ್ದ ಸಹೋದರಿಯರು ನಾಪತ್ತೆ!

ಮಂಗಳೂರು: ರಾತ್ರಿ ಮಲಗಿದ್ದ ಜಾಗದಿಂದಲೇ ಸಹೋದರಿಯರಿಬ್ಬರು ನಾಪತ್ತೆಯಾಗಿರುವ ಘಟನೆ‌ ನಗರದ ಬಜ್ಪೆಯ ಕೊಂಚಾರ್ ಎಂಬಲ್ಲಿ ನಡೆದಿದೆ. ಈ ಬಗ್ಗೆ ಬಜ್ಪೆ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಾಗಿದೆ. ಬಜ್ಪೆಯ ಕೊಂಚಾರ್ ಎಂಬಲ್ಲಿನ ಬಾಡಿಗೆ ಮನೆ ನಿವಾಸಿಗಳಾದ ಮುಬೀನಾ(22) ಹಾಗೂ ಬುಶ್ರಾ (21) ನಾಪತ್ತೆಯಾದ ಸಹೋದರಿಯರು. ಮುಬೀನಾ ಹಾಗೂ ಬುಶ್ರಾ ಫೆ.7ರಂದು ರಾತ್ರಿ ಸುಮಾರು 12.30ಕ್ಕೆ ಊಟ ಮಾಡಿ ಮನೆಯಲ್ಲಿ ಮಲಗಿದ್ದರು. ತಡರಾತ್ರಿ 2 ಗಂಟೆಗೆ ಅವರ ತಂದೆ ಎದ್ದು ನೋಡಿದಾಗ ಕಿರಿಯ ಪುತ್ರಿ ಬುಶ್ರಾ ಮನೆಯಲ್ಲಿ ಕಂಡಿರಲಿಲ್ಲ. ಇದರಿಂದ

ಮಂಗಳೂರು: ರಾತ್ರಿ ಜೊತೆಗೆ ಮಲಗಿದ್ದ ಸಹೋದರಿಯರು ನಾಪತ್ತೆ! Read More »

ನಾಗಕ್ಷೇತ್ರ ಕುಕ್ಕೆಯಲ್ಲಿ ನಿರ್ಮಾಣಗೊಳ್ಳಲಿದೆ ದ.ಭಾರತದ ಎರಡನೇ ವಿಷ ಚಿಕಿತ್ಸಾಲಯ| ಹಾವು ಕಡಿತಕ್ಕೆ ಆಯುರ್ವೇದ ಪದ್ದತಿಯಲ್ಲಿ ಚಿಕಿತ್ಸೆ

ಸಮಗ್ರ ನ್ಯೂಸ್ ಡೆಸ್ಕ್: ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಷದ ಹಾವುಗಳ ಕಡಿತಕ್ಕೆ ಒಳಗಾದವರಿಗೆ ಆಯುರ್ವೇದ ಚಿಕಿತ್ಸೆ ನೀಡುವ ಆಸ್ಪತ್ರೆ ತೆರೆಯಲು ಸರಕಾರ ಚಿಂತನೆ ನಡೆಸಿದೆ. ಮುಜರಾಯಿ ಇಲಾಖೆ 300 ಕೋ.ರೂ. ವೆಚ್ಚದಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದು, ಇಂಜಾಡಿ ಬಳಿ 50 ಎಕರೆ ಪ್ರದೇಶದಲ್ಲಿ 100 ಕೋ.ರೂ. ವೆಚ್ಚದಲ್ಲಿ ಪರಿಸರ ಸ್ನೇಹಿ ಕುಟೀರಗಳನ್ನು ಸ್ಥಾಪಿಸಲಾಗುತ್ತಿದೆ. ಅಲ್ಲಿ ಮನಃ ಶಾಂತಿ ದೊರಕಿಸುವ ಯೋಗ, ಥೆರಪಿ, ಧ್ಯಾನ, ಆಯು ರ್ವೇದ ಚಿಕಿತ್ಸೆ ಇತ್ಯಾದಿ ಸೌಲಭ್ಯ ಗಳಿರಲಿವೆ. ವಿಷ ಚಿಕಿತ್ಸೆಯ ಆಸ್ಪತ್ರೆಯೂ ಅದರಲ್ಲೊಂದು.

ನಾಗಕ್ಷೇತ್ರ ಕುಕ್ಕೆಯಲ್ಲಿ ನಿರ್ಮಾಣಗೊಳ್ಳಲಿದೆ ದ.ಭಾರತದ ಎರಡನೇ ವಿಷ ಚಿಕಿತ್ಸಾಲಯ| ಹಾವು ಕಡಿತಕ್ಕೆ ಆಯುರ್ವೇದ ಪದ್ದತಿಯಲ್ಲಿ ಚಿಕಿತ್ಸೆ Read More »

ಮಕ್ಕಳನ್ನು ಸಮವಸ್ತ್ರದಲ್ಲೇ ಶಾಲೆಗೆ ಕಳುಹಿಸಿ – ಸಚಿವ ಬಿ.ಸಿ ನಾಗೇಶ್

ಸಮಗ್ರ ನ್ಯೂಸ್ ಡೆಸ್ಕ್ : ಕೋರ್ಟ್‌ ಆದೇಶದಂತೆ ಫೆಬ್ರವರಿ 14ರಿಂದ 10ನೇ ತರಗತಿವರೆಗೆ ಶಾಲೆ ಮತ್ತೆ ಆರಂಭ ಮಾಡುತ್ತಿದ್ದೇವೆ. ದಯವಿಟ್ಟು ಮಕ್ಕಳನ್ನ ಸಮವಸ್ತ್ರದಲ್ಲಿಯೇ ಕಳುಹಿಸಿ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಶಿಕ್ಷಣ ಸಚಿವರು, ‘ವಿದ್ಯಾರ್ಥಿಗಳು ಸಮವಸ್ತ್ರದಲ್ಲೇ ಶಾಲೆಗೆ ಬರಬೇಕು. ಇನ್ನು ಇಂದು ಮತ್ತು ಸೋಮವಾರ ಮತ್ತೊಂದು ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಕಾಲೇಜು ಪುನಾರಂಭ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದರು. ರಾಜ್ಯದಲ್ಲಿ ಭುಗಿಲೆದ್ದ ಹಿಜಾಬ್‌-ಕೇಸರಿ ಶಾಲು ವಿವಾದದ ಕುರಿತಾಗಿ ಹೈಕೋರ್ಟ್ ತ್ರಿ

ಮಕ್ಕಳನ್ನು ಸಮವಸ್ತ್ರದಲ್ಲೇ ಶಾಲೆಗೆ ಕಳುಹಿಸಿ – ಸಚಿವ ಬಿ.ಸಿ ನಾಗೇಶ್ Read More »

ಸೋಮವಾರ ಹೈಸ್ಕೂಲ್ ವರೆಗೆ ತರಗತಿಗಳು ರೀಓಪನ್| ಕಾಲೇಜು ಭವಿಷ್ಯ ತೂಗುಯ್ಯಾಲೆಯಲ್ಲಿ

ಸಮಗ್ರ ನ್ಯೂಸ್ ಡೆಸ್ಕ್: ಕಾಲೇಜಿನ ತರಗತಿಯೊಳಗೆ ಹಿಜಾಬ್​​ ಧರಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್​​ ಪ್ರಕರಣದ ಮುಂದಿನ ವಿಚಾರಣೆಯನ್ನು ಫೆ.14ಕ್ಕೆ ಮುಂದೂಡಿದೆ. ಅಲ್ಲಿಯವರೆಗೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ಗುರುತುಗಳನ್ನು ಬಳಸಬಾರದು ಎಂದು ಸೂಚಿಸಿದೆ. ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೆ ಹಿಜಾಬ್​, ಕೇಸರಿ ಶಾಲು ಎರಡೂ ಬೇಡ ಎಂದು ಹೈಕೋರ್ಟ್​ ಹೇಳಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಚಿವರೊಂದಿಗೆ ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಸಿಎಂ, ಸೋಮವಾರದಿಂದ ಶಾಲೆಗಳು ಸಂಪೂರ್ಣವಾಗಿ ಆರಂಭವಾಗಲಿದೆ

ಸೋಮವಾರ ಹೈಸ್ಕೂಲ್ ವರೆಗೆ ತರಗತಿಗಳು ರೀಓಪನ್| ಕಾಲೇಜು ಭವಿಷ್ಯ ತೂಗುಯ್ಯಾಲೆಯಲ್ಲಿ Read More »

ಹಿಜಾಬ್, ಶಾಲು ಧರಿಸಿ ಶಾಲೆಗೆ ಹೋಗುವಂತಿಲ್ಲ- ಹೈಕೋರ್ಟ್ ಮಧ್ಯಂತರ ಆದೇಶ

ಸಮಗ್ರ ನ್ಯೂಸ್ ಡೆಸ್ಕ್: ಶಾಲು, ಹಿಜಾಬ್ ಧರಿಸಿ ಶಾಲಾ ಕಾಲೇಜುಗಳಿಗೆ ಹೋಗುವಂತಿಲ್ಲ ಎಂದು ಹೈಕೋರ್ಟ್ ‌ಮದ್ಯಂತರ ಆದೇಶ ನೀಡಿದೆ. ಇಂದು ಹಿಜಾಬ್ ಕುರಿತ ಅರ್ಜಿ ವಿಚಾರಣೆ ಕುರಿತು ಹೈಕೋರ್ಟ್ ನಲ್ಲಿ ವಿಚಾರಣೆ ನಡೆದಿದ್ದು, ತ್ರಿ ಸದಸ್ಯ ಪೀಠ ಈ ಮಧ್ಯಂತರ ಆದೇಶ ನೀಡಿ, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ. ಕಾಲೇಜುಗಳಲ್ಲಿ ಹಿಜಬ್‌ ಧರಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಮುಖ್ಯ ನ್ಯಾ. ರಿತುರಾಜ್ ಅವಸ್ಥಿ, ನ್ಯಾ.ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಒಳಗೊಂಡ ತ್ರಿಸದ್ಯ ಪೀಠದಲ್ಲಿ ನಡೆಯಿತು. ಮುಂದಿನ

ಹಿಜಾಬ್, ಶಾಲು ಧರಿಸಿ ಶಾಲೆಗೆ ಹೋಗುವಂತಿಲ್ಲ- ಹೈಕೋರ್ಟ್ ಮಧ್ಯಂತರ ಆದೇಶ Read More »

ಹಿಜಾಬ್ ವಿವಾದ| ಶೈಕ್ಷಣಿಕ ಸಂಸ್ಥೆಗಳಿಗೆ ಮತ್ತೆ ರಜೆ ವಿಸ್ತರಣೆ ಸಾಧ್ಯತೆ|

ಸಮಗ್ರ ನ್ಯೂಸ್ ಡೆಸ್ಕ್: ರಾಜ್ಯದಲ್ಲಿ ಹಿಜಾಬ್ ವಿವಾದವು ಬೂದಿ ಮುಚ್ಚಿದ ಕೆಂಡದಂತೆ ಇರುವ ಕಾರಣ ಈಗಾಗಲೇ ಶಾಲಾಕಾಲೇಜುಗಳಿಗೆ ಘೋಷಣೆ ಮಾಡಿರುವ ರಜೆಯನ್ನು ಇನ್ನಷ್ಟು ದಿನಗಳ ಕಾಲ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ಎರಡು ದಿನಗಳ ಹಿಂದೆ ರಾಜ್ಯ ಸರ್ಕಾರ ಮೂರು ದಿನ ರಜೆ ಘೋಷಣೆ ಮಾಡಿತ್ತು. ನಾಳೆ ಈ ಅವಧಿ ಮುಗಿಯಲಿದ್ದು, ಇನ್ನು ಮೂರ್ನಾಲ್ಕು ದಿನಗಳ ಕಾಲ ವಿಸ್ತರಣೆ ಮಾಡಲು ಸರ್ಕಾರ ಒಲವು ತೋರಿದೆ. ಇಂದು ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು

ಹಿಜಾಬ್ ವಿವಾದ| ಶೈಕ್ಷಣಿಕ ಸಂಸ್ಥೆಗಳಿಗೆ ಮತ್ತೆ ರಜೆ ವಿಸ್ತರಣೆ ಸಾಧ್ಯತೆ| Read More »