February 2022

ಪ್ರಚೋದಿತರಾಗಬೇಡಿ, ಓದಿಗೆ ಗಮನವಿರಲಿ – ಕೇರಳ ರಾಜ್ಯಪಾಲ ಮೊಹಮ್ಮದ್ ಖಾನ್

ಸಮಗ್ರ ನ್ಯೂಸ್ ಡೆಸ್ಕ್: ರಾಜ್ಯದಲ್ಲಿ ತಲೆ ಎತ್ತಿದ ಹಿಜಾಬ್ ವಿವಾದ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಸಂಬಂಧ ವಿದ್ಯಾರ್ಥಿಗಳಿಗೆ ಕೇರಳ ಗವರ್ನರ್ ಬುದ್ದಿ ಮಾತು ಹೇಳಿದ್ದಾರೆ. ಹೊರಗಿನವರ ಪ್ರಚೋದನೆಗೆ ಒಳಗಾಗಬೇಡಿ. ಓದಿನ ಕಡೆ ಮೊದಲು ಗಮನ ಕೊಡಿ. ಕೆಲವು ಮುಸ್ಲಿಂ ಮಹಿಳೆಯರನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ. ಮುಸ್ಲಿಂ ಮಹಿಳೆಯರನ್ನು ಅಂಧಕಾರದ ಯುಗಕ್ಕೆ ತಳ್ಳಲು ಬಯಸುತ್ತಿದೆ ಎಂದು ಗವರ್ನರ್ ಮೊಹಮ್ಮದ್ ಖಾನ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಹಿಜಾಬ್ ಅನಿವಾರ್ಯವಲ್ಲ. ಕುರಾನ್ ನಲ್ಲಿ ಕೂಡ ಹಿಜಾಬ್ ಕುರಿತು […]

ಪ್ರಚೋದಿತರಾಗಬೇಡಿ, ಓದಿಗೆ ಗಮನವಿರಲಿ – ಕೇರಳ ರಾಜ್ಯಪಾಲ ಮೊಹಮ್ಮದ್ ಖಾನ್ Read More »

‘ಹಿಜಾಬ್ ಧರ್ಮಾಚರಣೆಯ ಹಕ್ಕಲ್ಲ, ಅದು ಮಹಿಳೆಯನ್ನು ಭೋಗದ ವಸ್ತುವಾಗಿ ಭಾವಿಸಿರುವ ಸಂಕೇತ, ಈ ಸಂಕೋಲೆಯಿಂದ ಆಕೆ ಹೊರಬರಬೇಕು’ – ತಸ್ಲೀಮಾ ನಸ್ರೀನ್

ಸಮಗ್ರ ನ್ಯೂಸ್ ಡೆಸ್ನ್: ಹಿಜಾಬ್‌ ವಿವಾದಕ್ಕೆ ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಶಿಕ್ಷಣ ಸಂಸ್ಥೆ ಸಮವಸ್ತ್ರ ಕಡ್ಡಾಯಗೊಳಿಸುವುದು ತಪ್ಪಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಎಲ್ಲೆಡೆ ಸುದ್ದಿಯಾಗುತ್ತಿರುವ ಈ ಹಿಜಾಬ್‌ ವಿವಾದದ ಕುರಿತು ಸಿಡಿದೆದ್ದ ಲೇಖಕಿ ತಸ್ಲೀಮಾ, “ಜಾತ್ಯತೀತ ದೇಶದಲ್ಲಿ ಧಾರ್ಮಿಕತೆಗೆ ಅನುಗುಣವಾದ ಬಟ್ಟೆಗಳನ್ನು ಮನೆಗಳಲ್ಲಿ ಧರಿಸಬೇಕೇ ಹೊರತು ಶಾಲೆಗಳಿಗಲ್ಲ. ಶಿಕ್ಷಣ ಸಂಸ್ಥೆಗಳು ಕಡ್ಡಾಯ ಸಮವಸ್ತ್ರ ಮಾಡಿರುವುದು ಸರಿಯಾಗಿದೆ. ಶಿಕ್ಷಣ ಸಂಸ್ಥೆಗಳು ಇರುವುದು ಜ್ಞಾನಾರ್ಜನೆಗಾಗಿಯೇ ಹೊರತು, ತಮ್ಮ ಧರ್ಮದ ನಿಲುವನ್ನು ಪ್ರತಿಪಾದಿಸಲು ಅಲ್ಲ” ಎಂದಿದ್ದಾರೆ. “ಶಿಕ್ಷಣದಿಂದ

‘ಹಿಜಾಬ್ ಧರ್ಮಾಚರಣೆಯ ಹಕ್ಕಲ್ಲ, ಅದು ಮಹಿಳೆಯನ್ನು ಭೋಗದ ವಸ್ತುವಾಗಿ ಭಾವಿಸಿರುವ ಸಂಕೇತ, ಈ ಸಂಕೋಲೆಯಿಂದ ಆಕೆ ಹೊರಬರಬೇಕು’ – ತಸ್ಲೀಮಾ ನಸ್ರೀನ್ Read More »

ಹಿಜಾಬ್ ವಿವಾದ ಕುರಿತ ಪ್ರತಿಕ್ರಿಯೆಗೆ ಶೋಭಾ ನಿರಾಕರಣೆ

ಸಮಗ್ರ ನ್ಯೂಸ್ ಡೆಸ್ಕ್: ಬೆಂಗಳೂರಿನಿಂದ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರು ತಮ್ಮದೇ ಕ್ಷೇತ್ರದಲ್ಲಿ ಹಿಜಾಬ್ ವಿವಾದ ಬುಗಿಲೆದ್ದಿದ್ದರೂ ಮಾಧ್ಯಮದವರು ಹಿಜಾಬ್ ವಿವಾದದ ಬಗ್ಗೆ ಕೇಳಿರುವ ಪ್ರಶ್ನೆಗೆ ಮಾತ್ರ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಉತ್ತರಪ್ರದೇಶದ ಚುನಾವಣೆ ಬಗ್ಗೆ ಮಾತನಾಡಿದ ಶೋಭಾ ಕರಂದ್ಲಾಜೆಯವರು, ಉತ್ತರಪ್ರದೇಶದಲ್ಲಿ ಮೊದಲನೆಯ ಹಂತದ ಚುನಾವಣೆ ಇಂದು ನಡೆದಿದೆ. ಯುಪಿಯಲ್ಲಿ ಬಿಜೆಪಿಗೆ ದೊಡ್ಡ ಪ್ರಮಾಣದ ಬೆಂಬಲ ಕಂಡುಬರುತ್ತಿದೆ. ಉತ್ತರ ಪ್ರದೇಶದಲ್ಲಿ ಮೋದಿ ಹಾಗೂ ಯೋಗಿಯವರ ಹೆಸರು ಮೊಳಗುತ್ತಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಹಿಜಾಬ್ ವಿವಾದ ಕುರಿತ ಪ್ರತಿಕ್ರಿಯೆಗೆ ಶೋಭಾ ನಿರಾಕರಣೆ Read More »

ಎಸ್ಎಸ್ಎಲ್ ಸಿ, ಪಿಯುಸಿ ಪೂರ್ಣಗೊಂಡ ವಿದ್ಯಾರ್ಥಿಗಳ ಗಮನಕ್ಕೆ| ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಮಗ್ರ ನ್ಯೂಸ್ ಡೆಸ್ಕ್ : ಭಾರತ ಸರ್ಕಾರದ ಸ್ಟಾಫ್ ಸೆಲೆಕ್ಷನ್ ಕಮಿಷನ್ ವ್ಯಾಪ್ತಿಗೆ ಒಳಪಡುವ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಕೆಳ ವಿಭಾಗದ ಕ್ಲರ್ಕ್, ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ, ಅಂಚೆ ಸಹಾಯಕ/ ವಿಂಗಡಣೆ ಸಹಾಯಕ, ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳನ್ನು ಭರ್ತಿ ಮಾಡಲು ಸಂಯೋಜಿತ ಉನ್ನತ ಮಾಧ್ಯಮಿಕ ಹಂತದ (10+2) ಪರೀಕ್ಷೆ-2021 ನೇಮಕಾತಿ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಸಕ್ತ ಅರ್ಹ ಅಭ್ಯರ್ಥಿಗಳು ಆನ್‍ಲೈನ್ https://ssc.nic.in ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 7 ಕೊನೆಯ ದಿನವಾಗಿದೆ. ಡಾಟಾ ಎಂಟ್ರಿ ಆಪರೇಟರ್

ಎಸ್ಎಸ್ಎಲ್ ಸಿ, ಪಿಯುಸಿ ಪೂರ್ಣಗೊಂಡ ವಿದ್ಯಾರ್ಥಿಗಳ ಗಮನಕ್ಕೆ| ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ Read More »

ತಾ.ಪಂ, ಜಿ.ಪಂ ಚುನಾವಣೆ‌ ಇನ್ನೊಂದು ವರ್ಷ ಮುಂದೂಡುವ ಸಾಧ್ಯತೆ – ಸಚಿವ ಕೆ.ಎಸ್. ಈಶ್ವರಪ್ಪ

ಸಮಗ್ರ ನ್ಯೂಸ್ ಡೆಸ್ಕ್: ಕೋವಿಡ್ ಕಾರಣದಿಂದಾಗಿ ವಿವಿಧ ಚುನಾವಣೆಗಳನ್ನು ಮುಂದೂಡಿಕೆ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳು ಇನ್ನೊಂದು ವರ್ಷ ನಡೆಯೋದು ಅನುಮಾನ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸಂಬಂಧ ಸುಪ್ರೀಂ ಕೋರ್ಟ್ ಇತ್ತೀಚಿಗೆ ಆದೇಶವೊಂದನ್ನು ನೀಡಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಸದ್ಯಕ್ಕೆ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ

ತಾ.ಪಂ, ಜಿ.ಪಂ ಚುನಾವಣೆ‌ ಇನ್ನೊಂದು ವರ್ಷ ಮುಂದೂಡುವ ಸಾಧ್ಯತೆ – ಸಚಿವ ಕೆ.ಎಸ್. ಈಶ್ವರಪ್ಪ Read More »

ಹಿಜಾಬ್ ವಿವಾದ ಹಿನ್ನೆಲೆ| ಕಾಲೇಜುಗಳಿಗೆ ಫೆ.16ರ ವರೆಗೂ ರಜೆ ಮುಂದುವರಿಕೆ|

ಸಮಗ್ರ ನ್ಯೂಸ್ ಡೆಸ್ಕ್: ರಾಜ್ಯದಲ್ಲಿ ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಫೆಬ್ರವರಿ 16ವರೆಗೂ ಕಾಲೇಜುಗಳಿಗೆ ರಜೆಯನ್ನ ವಿಸ್ತರಣೆ ಮಾಡಲಾಗಿದೆ. ಬುಧವಾರದವರೆಗೆ ಕಾಲೇಜುಗಳು ರಜೆ ಘೋಷಣೆ ಮಾಡಲಾಗುತ್ತಿದ್ದು, ಮುಂದಿನ ಪರಿಸ್ಥಿತಿ ನೋಡಿಕೊಂಡು ಮತ್ತೆ ನಿರ್ಧಾರ ಮಾಡಲಾಗುವುದು. ಅದರಂತೆ ಪಿಯುಸಿ, ಡಿಗ್ರಿ ಹಾಗೂ ಸ್ನಾತಕೋತ್ತರ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಉನ್ನತ ಶಿಕ್ಷಣ ಇಲಾಖೆ ಆದೇಶ ನೀಡಿದೆ.

ಹಿಜಾಬ್ ವಿವಾದ ಹಿನ್ನೆಲೆ| ಕಾಲೇಜುಗಳಿಗೆ ಫೆ.16ರ ವರೆಗೂ ರಜೆ ಮುಂದುವರಿಕೆ| Read More »

ಮಂಗಳೂರು: ರಾತ್ರೋರಾತ್ರಿ ನಾಪತ್ತೆಯಾದ ಸಹೋದರಿಯರು ಪ್ರಕರಣ ಸುಖಾಂತ್ಯ| ಚಿಕ್ಕಮಗಳೂರಲ್ಲಿ ಪತ್ತೆಯಾದ ಯುವತಿಯರು

ಸಮಗ್ರ ನ್ಯೂಸ್ ಡೆಸ್ಕ್: ಮೊಬೈಲ್ ಬಳಸದಂತೆ ಬುದ್ಧಿವಾದ ಹೇಳಿದ್ದಕ್ಕೆ ಮನೆ ಬಿಟ್ಟು ಹೋಗಿದ್ದ ಇಬ್ಬರು ಸಹೋದರಿಯರನ್ನ ಚಿಕ್ಕಮಗಳೂರಿನಲ್ಲಿ ಮಂಗಳೂರಿನ ಬಜಪೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಬಜಪೆ ಗ್ರಾಮದ ಕೊಂಚಾರು ನಿವಾಸಿ ಮಾಮು ಎಂಬುವರ ಇಬ್ಬರು ಪುತ್ರಿಯರಾದ ಮುಬೀನಾ (22) ಮತ್ತು ಬುಶ್ರಾ (21) ಎಂಬುವರು ನಾಪತ್ತೆಯಾಗಿದ್ದರು. ಫೆಬ್ರವರಿ 7ರಂದು ರಾತ್ರಿ ಊಟ ಮಾಡಿ ಮಲಗಿದ್ದವರು, ಬೆಳಗ್ಗೆ ನೋಡಿದಾಗ ಮನೆಯಲ್ಲಿ ಇರಲಿಲ್ಲ. ಈ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಬ್ಬರು ಯುವತಿಯರನ್ನು ನಾಪತ್ತೆಯಾದ ಎರಡು‌ ದಿನದಲ್ಲಿ ಬಜಪೆ

ಮಂಗಳೂರು: ರಾತ್ರೋರಾತ್ರಿ ನಾಪತ್ತೆಯಾದ ಸಹೋದರಿಯರು ಪ್ರಕರಣ ಸುಖಾಂತ್ಯ| ಚಿಕ್ಕಮಗಳೂರಲ್ಲಿ ಪತ್ತೆಯಾದ ಯುವತಿಯರು Read More »

ಪರಿಷತ್ ಸಭಾ ನಾಯಕರಾಗಿ ಕೋಟ‌ ನಾಮನಿರ್ದೇಶನ

ಸಮಗ್ರ ನ್ಯೂಸ್ ಡೆಸ್ಕ್: ವಿಧಾನ ಪರಿಷತ್​ ಸಭಾ ನಾಯಕನಾಗಿ ಕೋಟ ಶ್ರೀನಿವಾಸ ಪೂಜಾರಿಯವರನ್ನು ನಾಮ ನಿರ್ದೇಶನ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಈ ಹಿಂದೆಯೂ ಸಭಾನಾಯಕನಾಗಿ ನೇಮಕಗೊಂಡಿದ್ದರು. ಈ ಬಾರಿಯೂ ಸಭಾ ನಾಯಕರಾಗಿ ನಾಮನಿರ್ದೇಶನ ಮಾಡಿ ಸಭಾಪತಿಗೆ ಪತ್ರ ಬರೆಯಲಾಗಿದೆ. ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರ ಬರೆದಿದ್ದಾರೆ. ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಪರಿಷತ್​ನ ಸಭಾ ನಾಯಕರನ್ನಾಗಿ ನಾಮ‌ನಿರ್ದೇಶನ‌ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ

ಪರಿಷತ್ ಸಭಾ ನಾಯಕರಾಗಿ ಕೋಟ‌ ನಾಮನಿರ್ದೇಶನ Read More »

ಪುತ್ತೂರು: ಶಾಲಾ ಕೊಠಡಿಯೊಳಗೆ ವಿದ್ಯಾರ್ಥಿಗಳಿಂದ ನಮಾಝ್!, ವಿಡಿಯೋ ವೈರಲ್ ಬೆನ್ನಲ್ಲೇ ಶಾಲೆಗೆ ಅಧಿಕಾರಿಗಳು ದೌಡು

ಸಮಗ್ರ ನ್ಯೂಸ್ ಡೆಸ್ಕ್: ಇಲ್ಲಿನ ಸವಣೂರು ಗ್ರಾ.ಪಂ ವ್ಯಾಪ್ತಿಯ ಶಾಲೆಯೊಂದರ ಕೊಠಡಿಯೊಂದರಲ್ಲಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ನಮಾಝ್ ಮಾಡಲು ಅವಕಾಶ ನೀಡಿರುವುದಕ್ಕೆ ವಿರೋಧ ವ್ಯಕ್ತವಾಗಿದ್ದು ,ಇದಕ್ಕೆ ಸಂಬಂಧಿಸಿದ ವೀಡಿಯೋ ಒಂದು ಹರಿದಾಡುತ್ತಿದೆ. ಸವಣೂರು ಗ್ರಾ.ಪಂ ವ್ಯಾಪ್ತಿಯ ಪಾಲ್ತಾಡಿ ಅಂಕತ್ತಡ ಶಾಲೆಯಲ್ಲಿ ಸಾಮೂಹಿಕವಾಗಿ ನಮಾಝ್ ಮಾಡಿದ್ದು ಈ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ. ಶಾಲಾ ಮುಖ್ಯಸ್ಥರಿಗೆ ಈ ವಿಚಾರವನ್ನು ಈ ಹಿಂದೆಯೂ ಗಮನಕ್ಕೂ ತರಲಾಗಿದ್ದರೂ ಮತ್ತೆ ಮುಂದುವರಿಕೆಯಾಗಿದೆ ಎನ್ನಲಾಗಿದೆ. ಪ್ರತಿ ಶುಕ್ರವಾರ ಮಕ್ಕಳನ್ನು ಮಸೀದಿಗೆ ಕಳುಹಿಸಿಕೊಡುವಂತೆ ಹೆತ್ತರವರು ಪೋಷಕರ ಸಭೆಯಲ್ಲಿ ಪ್ರಸ್ತಾಪ

ಪುತ್ತೂರು: ಶಾಲಾ ಕೊಠಡಿಯೊಳಗೆ ವಿದ್ಯಾರ್ಥಿಗಳಿಂದ ನಮಾಝ್!, ವಿಡಿಯೋ ವೈರಲ್ ಬೆನ್ನಲ್ಲೇ ಶಾಲೆಗೆ ಅಧಿಕಾರಿಗಳು ದೌಡು Read More »

ಅಪ್ಪು ‘ಜೇಮ್ಸ್’ ಹವಾ ಶುರು| ಟೀಸರ್ ಬಿಡುಗಡೆ, ಭರ್ಜರಿ ರೆಸ್ಪಾನ್ಸ್

ಸಮಗ್ರ ಪಿಲಂ ಡೆಸ್ಕ್: ಪುನೀತ್​ ರಾಜ್​ಕುಮಾರ್​ ಅಭಿನಯದ ಕೊನೇ ಸಿನಿಮಾ ಜೇಮ್ಸ್​ ಚಿತ್ರದ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡು ಕಾಯ್ತಿದ್ದಾರೆ. ಈಗಾಗಲೇ ಸಿನಿಮಾದ ಎರಡು ಪೋಸ್ಟರ್​ಗಳು ಬಿಡುಗಡೆಯಾಗಿದ್ದು ಅದಕ್ಕೆ ಅಭಿಮಾನಿಗಳು ಸಾಕಷ್ಟು ಸಂಭ್ರಮ ಪಟ್ಟಿದ್ದರು. ಈಗ ಸಿನಿಮಾ ತಂಡ ಚಿತ್ರದ ಟೀಸರ್​ ಬಿಡುಗಡೆ ಮಾಡಿದೆ. ಒಂದು ನಿಮಿಷ ಇರುವ ಟೀಸರ್​ನಲ್ಲಿ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಬ್ಬರಿಸಿದ್ದಾರೆ. ಮಾಫಿಯಾ, ರೌಡಿಸಂ ನೇತೃತ್ವದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಸಾಕಷ್ಟು ಲಾವಿಶ್​ಗೆ ಮೂಡಿ ಬಂದಿದೆ. ಅದ್ಬುತ ಲೊಕೇಶ್​

ಅಪ್ಪು ‘ಜೇಮ್ಸ್’ ಹವಾ ಶುರು| ಟೀಸರ್ ಬಿಡುಗಡೆ, ಭರ್ಜರಿ ರೆಸ್ಪಾನ್ಸ್ Read More »