February 2022

ಮಂಗಳೂರು: ಪೊಲೀಸ್ ಕಸ್ಟಡಿಯಲ್ಲೇ ಮೃತಪಟ್ಟ ಆರೋಪಿ| ತನಿಖೆಗೆ ಕಮಿಷನರ್ ಆದೇಶ

ಸಮಗ್ರ ನ್ಯೂಸ್ ಡೆಸ್ಕ್: ಕಳ್ಳತನ ಪ್ರಕರಣದ ಆರೋಪಿಯೊಬ್ಬ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಮೃತಪಟ್ಟ ಘಟನೆ ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ನಡೆದಿದೆ. ಮಂಗಳೂರಿನ ಉರ್ವ ನಿವಾಸಿ ರಾಜೇಶ್ (30) ಮೃತಪಟ್ಟ ಆರೋಪಿ.‌ ಇಬ್ಬರು ಆರೋಪಿಗಳು ಇಂದು ಬೆಳಗ್ಗೆ ನಗರದ ಜ್ಯೋತಿ ಸರ್ಕಲ್ ಬಳಿಯಲ್ಲಿದ್ದ ಸ್ಮಾರ್ಟ್ ಸಿಟಿ ಕಾಮಗಾರಿಯ ಕಬ್ಬಿಣದ ಸರಳುಗಳನ್ನು ಕಳವು ಮಾಡಿ ಓಡುತ್ತಿದ್ದರು. ಈ ಸಂದರ್ಭ ಗಸ್ತಿನಲ್ಲಿದ್ದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ನಗರದ ಬಂದರು ಪೊಲೀಸ್ ಠಾಣೆಯಲ್ಲಿ ತಂದು ಕೂರಿಸಿದ್ದರು. ಆದರೆ, ಸಂಜೆ ವೇಳೆಗೆ ಆರೋಪಿಗಳಲ್ಲಿ […]

ಮಂಗಳೂರು: ಪೊಲೀಸ್ ಕಸ್ಟಡಿಯಲ್ಲೇ ಮೃತಪಟ್ಟ ಆರೋಪಿ| ತನಿಖೆಗೆ ಕಮಿಷನರ್ ಆದೇಶ Read More »

ಮಂಗಳೂರು: ಬಲೆಗೆ ಬಿದ್ದ ಹಾರುವ ಮೀನು

ಸಮಗ್ರ ನ್ಯೂಸ್ ಡೆಸ್ಕ್: ಕರಾವಳಿಯಲ್ಲಿ ದಕ್ಕೆಗೆ ಮರಳಿರುವ ಮೀನುಗಾರಿಕೆ ಬೋಟ್‌ನಲ್ಲಿ, ಎರಡು ಅಪರೂಪದ ಹಾರುವ ಮೀನುಗಳು ಬಲೆಗೆ ಬಿದ್ದಿವೆ ಎಂದು ಮೀನುಗಾರ ಲೋಕೇಶ್‌ ಬೆಂಗ್ರೆ ತಿಳಿಸಿದ್ದಾರೆ. ಇಂಗ್ಲಿಷ್‌ನಲ್ಲಿ ಫ್ಲೈಯಿಂಗ್ ಫಿಶ್ ಎನ್ನುವ ಇವು ಆಳ ಸಮುದ್ರದಲ್ಲಿರುವ ಮೀನಿನ ಪ್ರಭೇದಕ್ಕೆ ಸೇರಿದವು. ರೆಕ್ಕೆ, ದೇಹದ ಎಲುಬುಗಳ ಭಿನ್ನ ರಚನೆಯಿಂದ ನೀರಿನಿಂದ ಮೇಲೆ, ಕೆಲ ಹೊತ್ತು ಹಕ್ಕಿಗಳಂತೆಯೇ ಹಾರುವ ಸಾಮರ್ಥ್ಯ ಹೊಂದಿವೆ.

ಮಂಗಳೂರು: ಬಲೆಗೆ ಬಿದ್ದ ಹಾರುವ ಮೀನು Read More »

ವಿಪಕ್ಷ ನಾಯಕನಿಗೆ ಕೊಲೆ ಬೆದರಿಕೆ ಹಾಕಿದ ನಳಿನ್ ಕುಮಾರ್ ಕಟೀಲ್!ಬ್ರಿಟೀಷರ ಗುಂಡಿಗೆ ಹೆದರಿಲ್ಲ ಇನ್ನು ಬಿಜೆಪಿ ನಾಯಕರ ಬೆದರಿಕೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ: ಬಿ.ಕೆ.ಹರಿಪ್ರಸಾದ್

ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ವಿಪಕ್ಷ ನಾಯಕ ಬಿ.ಕೆ.ಹರಿ ಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಕೆ.ಹರಿಪ್ರಸಾದ್, ನಳೀನ್ ಕುಮಾರ್ ಕಟೀಲ್ ನೇರವಾಗಿ ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಬೆದರಿಕೆಗಳಿಗೆ ಹೆದರುವವರಲ್ಲ. ನಮ್ಮ ಪೂರ್ವಜರೇ ಬ್ರಿಟೀಷರ ಗುಂಡಿಗೆ ಹೆದರಿಲ್ಲ ಇನ್ನು ಬಿಜೆಪಿ ನಾಯಕರ ಬೆದರಿಕೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದರು. ಇನ್ನೂ ಬಿಜೆಪಿ ನಾಯಕರ ನಕಲಿ ರಾಷ್ಟ್ರ

ವಿಪಕ್ಷ ನಾಯಕನಿಗೆ ಕೊಲೆ ಬೆದರಿಕೆ ಹಾಕಿದ ನಳಿನ್ ಕುಮಾರ್ ಕಟೀಲ್!ಬ್ರಿಟೀಷರ ಗುಂಡಿಗೆ ಹೆದರಿಲ್ಲ ಇನ್ನು ಬಿಜೆಪಿ ನಾಯಕರ ಬೆದರಿಕೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ: ಬಿ.ಕೆ.ಹರಿಪ್ರಸಾದ್ Read More »

ಪುತ್ತೂರು : ಹಿಜಾಬ್ ಸಂಘರ್ಷ ,ತರಗತಿ ಬಹಿಷ್ಕರಿಸಿ ಹೊರನಡೆದ ವಿದ್ಯಾರ್ಥಿಗಳು – ಕಾಲೇಜ್ ಗೆ ಎರಡು ದಿನ ರಜೆ

ಪುತ್ತೂರು: ರಾಜ್ಯದಾದ್ಯಂತ ಭಾರೀ ಚರ್ಚೆಯಾಗುತ್ತಿರುವ ಹಿಜಾಬ್ ವಿವಾದ ಇದೀಗ ದಕ್ಷಿಣ ಕನ್ನಡ ಕೆಲವು ಕಡೆ ಆವರಿಸಿದ್ದು ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜೊಂದಕ್ಕೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರ ತಡೆದಿದ್ದಾರೆ. ಹಿಜಾಬ್ ಧರಿಸಿ ತರಗತಿಯೊಳಗೆ ಪ್ರವೇಶ ನೀಡಲು ಕಾಲೇಜು ಪ್ರಾಂಶುಪಾಲರು ನಿರಾಕರಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನೀಯರು ತರಗತಿ ಬಹಿಸ್ಕರಿಸಿ ಹೊರನಡೆದಿದ್ದಾರೆ. ಇದನ್ನು ನೋಡಿದ ಕೆಲವು ವಿದ್ಯಾರ್ಥಿಗಳು ಅವರಿಗೆ ಹಿಜಾಬ್ ಧರಿಸಿ ತರಗತಿಯಲ್ಲಿ ಕೂರಲು ಅವಕಾಶ ನೀಡಬೇಕೆಂದು ಕಾಲೇಜು ಆಡಳಿಯವರೊಂದಿಗೆ ಕೇಳಿಕೊಂಡಿದ್ದು ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಕೂಡಲೆ ಸ್ಥಳಕ್ಕೆ

ಪುತ್ತೂರು : ಹಿಜಾಬ್ ಸಂಘರ್ಷ ,ತರಗತಿ ಬಹಿಷ್ಕರಿಸಿ ಹೊರನಡೆದ ವಿದ್ಯಾರ್ಥಿಗಳು – ಕಾಲೇಜ್ ಗೆ ಎರಡು ದಿನ ರಜೆ Read More »

ಸುಳ್ಯ : ಕುಕ್ಕರ್ ಸ್ಫೋಟ

ಸುಳ್ಯ: ತಾಲೂಕಿನ ಕಳಂಜ ಗ್ರಾಮದಲ್ಲಿ ಕುಕ್ಕರ್ ಸ್ಪೋಟಗೊಂಡು ಗೃಹಣಿಯೊಬ್ಬರು ಅಪಾಯದಿಂದ ಪಾರಾದ ಘಟನೆ ನಡೆದಿದೆ. ಕಿಲಂಗೋಡಿಯ ವಾಸುದೇವ ಆಚಾರ್ಯರ ಮನೆಯಲ್ಲಿ ಕುಕ್ಕರ್ ಸ್ಪೋಟಗೊಂಡು, ಸುಮಾ ವಿ. ಆಚಾರ್ಯರು ಎಂಬವರು ಅಪಾಯದಿಂದ ಪಾರಾದ ಗೃಹಣಿ. ಇವರು ಬೆಳಗ್ಗಿನ ತಿಂಡಿಗೆ ಕುಕ್ಕರ್ ನಲ್ಲಿ ಪಲಾವ್ ಇಟ್ಟಿದ್ದರು. ಕುಕ್ಕರ್ ನಲ್ಲಿ ಒಂದು ವಿಷಲ್ ಆಗುವಷ್ಟು ಹೊತ್ತಿಗೆ ಹೊರಗಿನಿಂದ ಯಾರೋ ಕರೆದ ಧ್ವನಿ ಕೇಳಿಸಿ ಹೊರಗೆ ಬಂದಿದ್ದಾರೆ. ಈ ಹೊತ್ತಿನಲ್ಲಿ ಕುಕ್ಕರ್ ಸ್ಪೋಟಗೊಂಡು ಮೇಲ್ಛಾವಣಿಗೆ ತಾಗಿ ಹಾನಿಯಾಗಿರುವುದಲ್ಲದೆ ಅದರ ಒಳಗಿದ್ದ ಆಹಾರ ಎಲ್ಲಾ

ಸುಳ್ಯ : ಕುಕ್ಕರ್ ಸ್ಫೋಟ Read More »

ಪ್ರತಿಭಟನೆಯ ನಡುವೆಯೂ ಮಾನವೀಯತೆ – ನದಿಯಿಂದ ಶವ ಮೇಲೆತ್ತಿದ ಆಸೀಪ್ ಆಪದ್ಭಾಂದವ

ಹಳೆಯಂಗಡಿ : ಸುರತ್ಕಲ್‌ನ ಎನ್‌ಐಟಿಕೆ ಬಳಿಯ ಟೋಲ್ ಕೇಂದ್ರವನ್ನು ರದ್ದುಗೊಳಿಸಬೇಕು ಎಂದು ಕಳೆದ 10 ದಿನಗಳಿಂದ ಹಗಲು ರಾತ್ರಿ ಪ್ರತಿಭಟನೆಯನ್ನು ನಡೆಸುತ್ತಿರುವ ಆಸೀಪ್ ಆಪದ್ಭಾಂದವ ಪ್ರತಿಭಟನೆಯ ನಡುವೆಯೂ ಮಾನವೀಯತೆ ಮೆರೆದಿದ್ದಾರೆ. ಅವರು ಬುಧವಾರ ಪ್ರತಿಭಟನೆಯ ನಡುವೆಯೂ ಪಾವಂಜೆ ನಂದಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಸುಚೇಂದ್ರಕುಮಾರ್ ಅವರ ಶವವನ್ನು ಮೇಲೆತ್ತಲು ಆಗಮಿಸಿ ನದಿಗೆ ಹಾರಿ ದೋಣಿಯ ಸಹಾಯದಿಂದ ಶವವನ್ನು ಮೇಲೆತ್ತಿದ್ದಾರೆ. ನಂತರ ನೇರವಾಗಿ ಪ್ರತಿಭಟನಾ ಸ್ಥಳಕ್ಕೆ ತೆರಳಿ ಪ್ರತಿಭಟನೆಯನ್ನು ಮುಂದುವರಿಸಿದ ಘಟನೆ ನಡೆದಿದೆ. ಆಸೀಪ್ ಅವರ ಮಾನವೀಯತೆ

ಪ್ರತಿಭಟನೆಯ ನಡುವೆಯೂ ಮಾನವೀಯತೆ – ನದಿಯಿಂದ ಶವ ಮೇಲೆತ್ತಿದ ಆಸೀಪ್ ಆಪದ್ಭಾಂದವ Read More »

ವಿಜಯಪುರ: ಕುಂಕುಮ ಇಟ್ಟು ಬಂದ ವಿದ್ಯಾರ್ಥಿಗೆ ಪ್ರವೇಶ ನಿರಾಕರಿಸಿದ ಕಾಲೇಜು

ಸಮಗ್ರ ನ್ಯೂಸ್ ಡೆಸ್ಕ್: ರಾಜ್ಯದಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷ ಮುಂದುವರೆದಿದ್ದು, ಇದೀಗ ಹಣೆಗೆ ಕುಂಕುಮ ಇಟ್ಟು ಬಂದ ವಿದ್ಯಾರ್ಥಿಗೆ ಕಾಲೇಜು ಪ್ರವೇಶಕ್ಕೆ ನಿರಾಕರಿಸಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ. ಇಂಡಿ ಪಟ್ಟಣದ ಸರ್ಕಾರಿ ಮಹಾ ವಿದ್ಯಾಲಯದಲ್ಲಿ ವಿದ್ಯಾರ್ಥಿಯೊಬ್ಬ ಹಣೆಗೆ ಕುಂಕುಮ ಇಟ್ಟುಕೊಂಡು ಬಂದಿದ್ದ. ಈ ವೇಳೆ ದೈಹಿಕ ಶಿಕ್ಷಕರು ವಿದ್ಯಾರ್ಥಿಯನ್ನು ತಡೆದು ಕುಂಕುಮ ತೆಗೆದು ಕಾಲೇಜಿಗೆ ಬರುವಂತೆ ಹೇಳಿದ್ದಾರೆ. ಹೀಗಾಗಿ ವಿದ್ಯಾರ್ಥಿ ಹಾಗೂ ಶಿಕ್ಷಕರ ನಡುವೆ ವಾಗ್ವಾದ ನಡೆದಿದೆ. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ

ವಿಜಯಪುರ: ಕುಂಕುಮ ಇಟ್ಟು ಬಂದ ವಿದ್ಯಾರ್ಥಿಗೆ ಪ್ರವೇಶ ನಿರಾಕರಿಸಿದ ಕಾಲೇಜು Read More »

ಬಂಟ್ವಾಳ: ಮಹಡಿಯಿಂದ ಬಿದ್ದು‌ ಯುವಕ ಸಾವು

ಸಮಗ್ರ ನ್ಯೂಸ್ ಡೆಸ್ಕ್: ಮುಡಿಪು ಬಳಿ ಐಟಿ ಸಂಸ್ಥೆಯೊಂದರ ಪ್ಲಂಬಿಂಗ್‌ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೂಲ್ಕಿ ಕಿಲ್ಪಾಡಿ ಎಣ್ಣೆಗೇಣಿ ನಿವಾಸಿ ರಾಜೇಶ್‌ ದೇವಾಡಿಗ (32) ಅವರು ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದು ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಎಂಟು ವರ್ಷಗಳಿಂದ ಸಂಸ್ಥೆಯ ಪ್ಲಂಬಿಂಗ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್‌ ಮಂಗಳವಾರ ಸಂಜೆ ಖಾಲಿ ಇರುವ ಕಟ್ಟಡಕ್ಕೆ ತೆರಳಿದ್ದು, ವಾಪಸ್‌ ಬಂದಿರಲಿಲ್ಲ. ಬುಧವಾರ ಬೆಳಗ್ಗೆ ಕಟ್ಟಡದಿಂದ ಬಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವುದಾಗಿ

ಬಂಟ್ವಾಳ: ಮಹಡಿಯಿಂದ ಬಿದ್ದು‌ ಯುವಕ ಸಾವು Read More »

ಬೆಳಗಾವಿ: ಹಿಜಾಬ್ ತೆಗೆದಿರಿಸಿ ತರಗತಿಗೆ ಹಾಜರಾದ ವಿದ್ಯಾರ್ಥಿನಿಯರು

ಸಮಗ್ರ ನ್ಯೂಸ್ ಡೆಸ್ಕ್: ಹಿಜಾಬ್​ ವಿವಾದದ ಹಿನ್ನೆಲೆಯಲ್ಲಿ ಬೆಳಗಾವಿ ಸದಾಶಿವ ನಗರದಲ್ಲಿರುವ ವಿಜಯ ಪ್ಯಾರಾ ಮೆಡಿಕಲ್ ಸೈನ್ಸ್ ಕಾಲೇಜು ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ವಿಜಯ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ನಿನ್ನೆ ಹಿಜಾಬ್​ಗೆ ಅವಕಾಶ ಕೋರಿದ್ದರು.ಇಂದು ಕೂಡ ಪ್ರತಿಭಟನೆ ನಡೆಸುವ ಸಾಧ್ಯತೆಯಿದ್ದು, ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ. ಕಾಲೇಜಿಗೆ ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿಜಾಬ್, ಬುರ್ಖಾ ಧರಿಸಿ ಕಾಲೇಜಿಗೆ ಆಗಮಿಸುತ್ತಿರುವ ಕೆಲ ವಿದ್ಯಾರ್ಥಿನಿಯರು ಪ್ರತ್ಯೇಕ ಕೊಠಡಿಯಲ್ಲಿ ಹಿಜಾಬ್ ತಗೆದಿಟ್ಟು ತರಗತಿಗೆ ಹಾಜರಾಗಿದ್ದಾರೆ.

ಬೆಳಗಾವಿ: ಹಿಜಾಬ್ ತೆಗೆದಿರಿಸಿ ತರಗತಿಗೆ ಹಾಜರಾದ ವಿದ್ಯಾರ್ಥಿನಿಯರು Read More »

ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ‌ ಕಾಂಗ್ರೆಸ್ ನಿಂದ ಸದನದಲ್ಲಿ ಅಹೋರಾತ್ರಿ ಧರಣಿ

ಸಮಗ್ರ ನ್ಯೂಸ್ ಡೆಸ್ಕ್: ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆ ನೀಡಬೇಕು. ಸಂಪುಟದಿಂದ ಅವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ಎರಡೂ ಸದನದಲ್ಲಿ ಅಹೋರಾತ್ರಿ ಹೋರಾಟ ನಡೆಸಿದ್ದಾರೆ. ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗೃಹಸಚಿವ ಆರಗ ಜ್ಞಾನೇಂದ್ರ, ಹಿರಿಯ ನಾಯಕರು ಮನವೊಲಿಸಲು ಮುಂದಾದರೂ ಪಟ್ಟು ಸಡಿಲಿಸದ ಕಾಂಗ್ರೆಸ್ ಸದಸ್ಯರು ರಾತ್ರಿ ಧರಣಿ ನಡೆಸಿದ್ದಾರೆ. ರಾಷ್ಟ್ರಧ್ವಜದ ಕುರಿತಾಗಿ ಸಚಿವ ಈಶ್ವರಪ್ಪ ನೀಡಿದ ಹೇಳಿಕೆ ಉಭಯ

ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ‌ ಕಾಂಗ್ರೆಸ್ ನಿಂದ ಸದನದಲ್ಲಿ ಅಹೋರಾತ್ರಿ ಧರಣಿ Read More »