February 2022

ನಾಳೆಯಿಂದ ಪಿಯುಸಿ ಪ್ರಾಯೋಗಿಕ ಪರೀಕ್ಷೆ

ಸಮಗ್ರ ನ್ಯೂಸ್ ಡೆಸ್ಕ್ : ನಾಳೆಯಿಂದ ರಾಜ್ಯಾದ್ಯಂತ ಪಿಯು ಕಾಲೇಜುಗಳಲ್ಲಿ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿದ್ದು, ಹಿಜಾಬ್ ವಿವಾದದಿಂದ ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರಾದರೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎನ್ನಲಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಈಗಾಗಲೇ ಪ್ರಾಯೋಗಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿದ್ದು, ವೇಳಾಪಟ್ಟಿಯಂತಯೇ ನಾಳೆಯಿಂದ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ. ಹಿಜಾಬ್ ವಿವಾದದಿಂದ ಪರೀಕ್ಷೆಗೆ ಗೈರಾದರೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಹೇಳಿದೆ. ಈ ಹಿನ್ನೆಲೆಯಲ್ಲಿ ಹಿಜಾಬ್ ವಿವಾದದಿಂದ […]

ನಾಳೆಯಿಂದ ಪಿಯುಸಿ ಪ್ರಾಯೋಗಿಕ ಪರೀಕ್ಷೆ Read More »

ಮಂಗಳೂರು: ಹಿಜಾಬ್ ಸಂಘರ್ಷ – “ತಲೆತಿರುಗಿ ಬಿದ್ದರೂ ಒಬ್ಬ ಶಿಕ್ಷಕರೂ ಬಂದಿಲ್ಲ” – “ಶಿಕ್ಷಕರು ಅಧಿಕ ಪ್ರಸಂಗ ಮಾತಾನಾಡುತ್ತಿದ್ದಾರೆ”

ಮಂಗಳೂರು: ವಿದ್ಯಾರ್ಥಿನಿಯರಿಂದ ಹಿಜಾಬ್ ಗಾಗಿ ಪಟ್ಟು ಹೆಚ್ಚಾಗುತ್ತಿದೆ. ನಾಲ್ಕು ದಿನದಿಂದ ಕಾಲೇಜು ಹೊರಗಡೆ ಇದ್ದೇವೆ. ಹಿಜಾಬ್ ಹಾಕಿದ್ದಕ್ಕೆ ಕಾಲೇಜಿಗೆ ಪ್ರವೇಶ ನೀಡಿಲ್ಲ. ವಿದ್ಯಾರ್ಥಿ‌ನಿ ತಲೆತಿರುಗಿ ಬಿದ್ದರೂ ಒಬ್ಬ ಶಿಕ್ಷಕರೂ ಬಂದಿಲ್ಲ ಎಂದು ಕಾವೂರು ಪಿಯು ಕಾಲೇಜು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿರುವ ವಿದ್ಯಾರ್ಥಿನಿಯರು, ಶಿಕ್ಷಕರು ಅಧಿಕ ಪ್ರಸಂಗ ಮಾತಾನಾಡುತ್ತಿದ್ದಾರೆ. ನಮ್ಮನ್ನು ಮನೆಗೆ ಹೋಗಿ ಎಂದು ಹೇಳುತ್ತಿದ್ದಾರೆ. ನಮಗೆ ಪ್ರತ್ಯೇಕ ಕೊಠಡಿ ಕೊಡಿ ಎಂದರು ಕೊಡಲಿಲ್ಲ. ಒಂದು ಕೊಠಡಿ ಇದ್ದರೂ ಕೂಡ ನಮಗೆ ಕೊಟ್ಟಿಲ್ಲ. ಮನೆಯಿಂದ ಕೊಠಡಿ ತಂದು

ಮಂಗಳೂರು: ಹಿಜಾಬ್ ಸಂಘರ್ಷ – “ತಲೆತಿರುಗಿ ಬಿದ್ದರೂ ಒಬ್ಬ ಶಿಕ್ಷಕರೂ ಬಂದಿಲ್ಲ” – “ಶಿಕ್ಷಕರು ಅಧಿಕ ಪ್ರಸಂಗ ಮಾತಾನಾಡುತ್ತಿದ್ದಾರೆ” Read More »

ಮಂಗಳೂರಿನ ಇಬ್ಬರು ಮುಸ್ಲಿಂಮರಿಗೆ ಗಲ್ಲು ಶಿಕ್ಷೆ

ಮಂಗಳೂರು: ಗುಜರಾತಿನ ಅಹಮದಾಬಾದ್‌ನಲ್ಲಿನ 14ವರ್ಷಗಳ ಹಿಂದಿನ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಇತ್ತೀಚೆಗೆ ಕೋರ್ಟ್ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಈ ವೇಳೆ ಶಿಕ್ಷೆಗೆ ಗುರಿಯಾದವರಲ್ಲಿ ಇಬ್ಬರು ಮಂಗಳೂರಿನವರು ಸೇರಿದ್ದಾರೆ. 56 ಮಂದಿಯನ್ನು ಬಲಿ ಪಡೆದ ಕೇಸ್ ಗೆ ಸಂಬಂಧಿಸಿ 38 ಮಂದಿಗೆ ಇತ್ತೀಚೆಗೆ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು. 38 ಮಂದಿಯ ಪೈಕಿ ಇಬ್ಬರು ಕನ್ನಡಿಗರು ಮಂಗಳೂರಿನ ಮೊಹಮದ್‌ ನೌಷಾದ್‌ ಹಾಗೂ ಅಹಮದ್‌ ಬಾವಾ ಸೇರಿದ್ದಾರೆ.. ಈ ಇಬ್ಬರೂ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ

ಮಂಗಳೂರಿನ ಇಬ್ಬರು ಮುಸ್ಲಿಂಮರಿಗೆ ಗಲ್ಲು ಶಿಕ್ಷೆ Read More »

‘ಅವರು ಊರಿಗೆ ಮನುಷ್ಯರಲ್ಲ, ಸ್ಮಶಾನಕ್ಕೆ ಹೆಣವೂ ಅಲ್ಲ’ – ಕಾಂಗ್ರೆಸ್ ವಿರುದ್ದ ಆರ್.ಅಶೋಕ್ ಲೇವಡಿ

ಸಮಗ್ರ ನ್ಯೂಸ್ ಡೆಸ್ಕ್: ‘ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಊರಿಗೆ ಮನುಷ್ಯನಲ್ಲ ಸ್ಮಶಾನಕ್ಕೆ ಹೆಣವೂ ಅಲ್ಲ ಎನ್ನುವಂತಾಗಿದೆ’ ಎಂದು ಕಂದಾಯ ಸಚಿವ ಆರ್ ಅಶೋಕ್ ಲೇವಡಿ ಮಾಡಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿಧಾನಸಭಾ ಅಧಿವೇಶನದಲ್ಲಿ ಹಿಜಾಬ್ ವಿಚಾರ ಯಾಕೆ ಚರ್ಚೆ ಮಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಹಿಜಾಬ್ ಪರವಾಗಿ ಇದೆ ಎಂದು ಹೇಳಲು ಡಿ.ಕೆ.ಶಿವಕುಮಾರ್ ಬಿಡುತ್ತಿಲ್ಲ. ನಾವು ಹಿಂದೂ ಪರವಾಗಿದ್ದೇವೆ ಎಂದು ಹೇಳಲು ಸಿದ್ದರಾಮಯ್ಯ ಬಿಡುತ್ತಿಲ್ಲ. ಇದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಫೈಟ್ ಅಷ್ಟೇ.

‘ಅವರು ಊರಿಗೆ ಮನುಷ್ಯರಲ್ಲ, ಸ್ಮಶಾನಕ್ಕೆ ಹೆಣವೂ ಅಲ್ಲ’ – ಕಾಂಗ್ರೆಸ್ ವಿರುದ್ದ ಆರ್.ಅಶೋಕ್ ಲೇವಡಿ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್ ಡೆಸ್ಕ್: ಸಮಯ ಎನ್ನುವುದು ನಮ್ಮ ಬದುಕಿನ ಪಾಠವನ್ನು ಕಲಿಸುತ್ತದೆ. ಸಮಯಕ್ಕೆ ತಕ್ಕಂತೆ ನಾವು ನಮ್ಮನ್ನು ಬದಲಿಸಿಕೊಳ್ಳುವ ಕೌಶಲ್ಯವನ್ನು ಕಲಿತಿರಬೇಕು. ಇಲ್ಲವಾದರೆ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತವೆ. ಬದಲಾವಣೆ ಎನ್ನುವುದು ನಿರಂತರವಾಗಿ ಹರಿಯುವ ನದಿಯಂತೆ, ಅದು ಹೇಗೆ ಬರುತ್ತದೆಯೋ ಹಾಗೆ ನಾವು ಸ್ವೀಕರಿಸಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಾರ ಸಾಕಷ್ಟು ಗ್ರಹಗಳ ಬದಲಾವಣೆಗಳು ಉಂಟಾಗುವುದು ಅವುಗಳ ಪ್ರಭಾವ ರಾಶಿಚಕ್ರಗಳ ಮೇಲೆ ಗಣನೀಯವಾಗಿರುತ್ತವೆ. ಆ ಬದಲಾವಣೆಗಳು ನಿಮ್ಮ ಜೀವನದಲ್ಲಿ ಹೇಗಿರುತ್ತದೆ ಎಂದು ತಿಳಿಯಲು ‌ಮುಂದೆ ಓದಿ… ಮೇಷ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಭೀಕರ ಅಪಘಾತಕ್ಕೆ ನಾಲ್ವರು ಸ್ಪಾಟೌಟ್| ಮದುವೆ ಮನೆಗೆ ಹೊರಟಿದ್ದವರ ಹೊತ್ತೊಯ್ದ ಜವರಾಯ

ಸಮಗ್ರ ನ್ಯೂಸ್ ಡೆಸ್ಕ್: ಬಸ್ಸು ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಐವರ ಪೈಕಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ನಡೆದಿದೆ. ಅಪಘಾತದಲ್ಲಿ ಮೃತಪಟ್ಟವರು ಕುಂಭಂಪತಿ ಶ್ರೀನಿವಾಸ್ (48), ಸುಜಾತ (40), ರಮೇಶ್ (45) ಹಾಗೂ ಕಾರು ಚಾಲಕ ಚಂದ್ರುಪಟ್ಲ ಗ್ರಾಮದ ಕಲ್ಯಾಣ್ (26) ಎಂದು ಗುರುತಿಸಲಾಗಿದೆ. ಮೃತಪಟ್ಟವರು ಶ್ರೀನಿವಾಸ್ ಅವರ ಅಣ್ಣನ ಮಗನ ಮದುವೆಗೆಂದು ಮಹಬೂಬಾಬಾದ್ ಜಿಲ್ಲೆಯ ನೆಕ್ಕೊಂಡ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ

ಭೀಕರ ಅಪಘಾತಕ್ಕೆ ನಾಲ್ವರು ಸ್ಪಾಟೌಟ್| ಮದುವೆ ಮನೆಗೆ ಹೊರಟಿದ್ದವರ ಹೊತ್ತೊಯ್ದ ಜವರಾಯ Read More »

ಸುಳ್ಯ: ಕಾಲೇಜು ಸಿಬ್ಬಂದಿಯಿಂದ ಪತ್ರಕರ್ತನಿಗೆ ಹಲ್ಲೆ ಯತ್ನ ಪ್ರಕರಣ| ಸ್ಪಷ್ಟನೆ ನೀಡಿದ ಕಾಲೇಜು ಮುಖ್ಯಸ್ಥರು|

ಸಮಗ್ರ ನ್ಯೂಸ್ ಡೆಸ್ಕ್: ಸುಳ್ಯದ ಖಾಸಗಿ ಕಾಲೇಜೊಂದರಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ್ದನ್ನು ವರದಿ ಮಾಡಲು ತೆರಳಿದ್ದ ಪತ್ರಕರ್ತರಿಗೆ ಹಲ್ಲೆ ಯತ್ನ ನಡೆದಿದೆ ಎನ್ನಲಾಗಿದ್ದು, ಇದು ಸತ್ಯಕ್ಕೆ ದೂರವಾಗಿದೆ ಎಂದು ಕಾಲೇಜು ಮುಖ್ಯಸ್ಥರು ಸ್ಪಷ್ಟನೆ ನೀಡಿದ್ದಾರೆ. ಸ್ಥಳೀಯ ಪತ್ರಿಕೆಯೊಂದರ ಪತ್ರಕರ್ತರು ಹಿಜಾಬ್ ಕುರಿತಂತೆ ವರದಿಗೆ ತೆರಳಿದ್ದ ಸಂದರ್ಭದಲ್ಲಿ ಕಾಲೇಜು ಸಿಬ್ಬಂದಿ ಮೊಬೈಲ್ ಕಸಿದು ಹಲ್ಲೆಗೆ ಯತ್ನ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ವರದಿ ಬಿತ್ತರವಾದ ಬೆನ್ನಲ್ಲೇ ಈ ಘಟನೆ

ಸುಳ್ಯ: ಕಾಲೇಜು ಸಿಬ್ಬಂದಿಯಿಂದ ಪತ್ರಕರ್ತನಿಗೆ ಹಲ್ಲೆ ಯತ್ನ ಪ್ರಕರಣ| ಸ್ಪಷ್ಟನೆ ನೀಡಿದ ಕಾಲೇಜು ಮುಖ್ಯಸ್ಥರು| Read More »

ಸಿಂಧೂರ, ಕುಂಕುಮ, ಬಳೆ ಧಾರ್ಮಿಕ ಸಂಕೇತವಲ್ಲ, ಅವನ್ನು ತೆಗೆಸಲು ಪ್ರಯತ್ನಿಸಿದರೆ ಕಠಿಣ ಕ್ರಮ – ಸಚಿವ ಬಿ.ಸಿ ನಾಗೇಶ್

ಸಮಗ್ರ ನ್ಯೂಸ್ ಡೆಸ್ಕ್: ಸಿಂಧೂರ, ಕುಂಕುಮ, ಬಳೆ ಬಗ್ಗೆ ಪ್ರಶ್ನೆ ಬೇಡ, ಅದು ನಮ್ಮ ಸಂಸ್ಕೃತಿಯ ಪ್ರತೀಕ, ಅದಕ್ಕೂ ಹಿಜಾಬ್‍ಗೂ ಸಂಬಂಧವಿಲ್ಲ, ಅದನ್ನು ಧರಿಸಿ ಶಾಲೆ-ಕಾಲೇಜುಗಳಿಗೆ ಬಂದವರನ್ನು ತಡೆದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಳೆ, ಬಿಂದಿ,ಸಿಂಧೂರ, ಕುಂಕುಮಗಳು ಅಲಂಕಾರಿಕ ವಸ್ತುಗಳು, ಅವುಗಳಿಗೆ ನಿರ್ಬಂಧ ಹಾಕಲು ಸಾಧ್ಯವಿಲ್ಲ. ಹಿಜಾಬ್ ಧಾರ್ಮಿಕ ಗುರುತನ್ನು ಸಂಕೇತಿಸುವ ಬಟ್ಟೆ ಹಿಜಾಬ್‍ಗೆ ಪ್ರತಿಯಾಗಿ ಬಳೆ, ಸಿಂಧೂರ, ಕುಂಕುಮವನ್ನು ಹೋಲಿಸುವುದು

ಸಿಂಧೂರ, ಕುಂಕುಮ, ಬಳೆ ಧಾರ್ಮಿಕ ಸಂಕೇತವಲ್ಲ, ಅವನ್ನು ತೆಗೆಸಲು ಪ್ರಯತ್ನಿಸಿದರೆ ಕಠಿಣ ಕ್ರಮ – ಸಚಿವ ಬಿ.ಸಿ ನಾಗೇಶ್ Read More »

ಉಡುಪಿ: ಮನೆಯಲ್ಲಿದ್ದ ಮಹಿಳೆಗೆ ಹಲ್ಲೆಗೈದು ದರೋಡೆಗೆ ಯತ್ನ|ಆರೋಪಿಗಳನ್ನು ಬೆನ್ನಟ್ಟಿ ಹಿಡಿದ ಸ್ಥಳೀಯರು

ಸಮಗ್ರ ನ್ಯೂಸ್ ಡೆಸ್ಕ್: ಆಗಂತುಕರಿಬ್ಬರು ಮನೆಯೊಂದಕ್ಕೆ ನುಗ್ಗಿ ಮನೆಯೊಡತಿಗೆ ಇರಿದು ದರೋಡೆಗೈಯಲು ಯತ್ನಿಸಿದಾಗ ಸ್ಥಳೀಯರು ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಫೆ.೧೮ ರ ರಾತ್ರಿ ಅನಂತನಗರದ ಹುಡ್ಕೋ ಕಾಲೋನಿಯಲ್ಲಿ ನಡೆದಿದೆ. ಗಾಯಗೊಂಡ ಮಹಿಳೆಯನ್ನು ಸುಮತಿ ರೈ ಎಂದು ಗುರುತಿಸಲಾಗಿದೆ. ಕಳ್ಳರೆಂದು ಶಂಕಿಸಲಾದ ಇಬ್ಬರು ವ್ಯಕ್ತಿಗಳು ಮನೆಗೆ ನುಗ್ಗಿ ಮನೆಯಲ್ಲಿದ್ದ ಸುಮತಿ ಅವರಿಗೆ ಚಾಕುವಿನಿಂದ ಇರಿದು ಬೆಲೆಬಾಳುವ ವಸ್ತು ಲೂಟಿ ಮಾಡಿದ್ದಾರೆ. ಹಲ್ಲೆಯಿಂದ ಗಾಯಗೊಂಡು ಕುಸಿದು ಬಿದ್ದ ಸುಮತಿ ರೈ ಅವರನ್ನು ಕಳ್ಳರು ಟ್ರಾವೆಲ್ ಬ್ಯಾಗ್ ನಲ್ಲಿ

ಉಡುಪಿ: ಮನೆಯಲ್ಲಿದ್ದ ಮಹಿಳೆಗೆ ಹಲ್ಲೆಗೈದು ದರೋಡೆಗೆ ಯತ್ನ|ಆರೋಪಿಗಳನ್ನು ಬೆನ್ನಟ್ಟಿ ಹಿಡಿದ ಸ್ಥಳೀಯರು Read More »

ಹಿರಿಯ ನಟ ರಾಜೇಶ್ ಇನ್ನಿಲ್ಲ

ಸಮಗ್ರ ನ್ಯೂಸ್ ಡೆಸ್ಕ್: ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಯಾಂಡಲ್​ವುಡ್ ಹಿರಿಯ ನಟ ರಾಜೇಶ್ (87) ಶನಿವಾರ ಕೊನೆಯುಸಿರೆಳೆದಿದ್ದಾರೆ. ಶನಿವಾರ ಮುಂಜಾನೆ 2.30ರ ಸುಮಾರಿಗೆ ಇಹಲೋಕವನ್ನು ತ್ಯಜಿಸಿದ್ದಾರೆ ಎಂದು ರಾಜೇಶ್ ಅವರ ಅಳಿಯ ಮತ್ತು ನಟ ಅರ್ಜುನ್ ಸರ್ಜಾ ಮಾಹಿತಿ ನೀಡಿದ್ದಾರೆ. ಬಹು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಜೇಶ್, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ವಿದ್ಯಾರಣ್ಯಪುರದ ನಿವಾಸದಲ್ಲಿ ರಾಜೇಶ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಅರ್ಜುನ್ ಸರ್ಜಾ ಹೇಳಿದ್ದಾರೆ. ಮಧ್ಯಾಹ್ನ 3:30ರ ನಂತರ

ಹಿರಿಯ ನಟ ರಾಜೇಶ್ ಇನ್ನಿಲ್ಲ Read More »