ಸಮಗ್ರ ನ್ಯೂಸ್: ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಭಾನುವಾರ ಪೋಲೆಂಡ್ ಗಡಿಯತ್ತ ತೆರಳುತ್ತಿದ್ದಾಗ ಉಕ್ರೇನ್ ಭದ್ರತಾ ಪಡೆಗಳು ದೇಶ ತೊರೆಯದಂತೆ ತಡೆದು, ಥಳಿಸಿರುವ ಘಟನೆಗಳು ವರದಿಯಾಗಿವೆ.
ಉಕ್ರೇನ್-ಪೋಲೆಂಡ್ ಗಡಿಯಲ್ಲಿರುವ ಶೆಹಿನಿಯಲ್ಲಿ ಹಲವಾರು ಭಾರತೀಯ ವಿದ್ಯಾರ್ಥಿಗಳು ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಮಲಯಾಳಿ ವಿದ್ಯಾರ್ಥಿಗಳನ್ನು ಅಲ್ಲಿನ ಭದ್ರತಾ ಪಡೆ ಸಿಬ್ಬಂದಿ ಮತ್ತು ಪೊಲೀಸರು ತಡೆದು, ಥಳಿಸಿದ್ದಾರೆ.
ಪೋಲೆಂಡ್‌ಗೆ ಹೋಗಲು ಪ್ರಯತ್ನಿಸುತ್ತಿರುವ ವಿದ್ಯಾರ್ಥಿಗಳ ಕಡೆಗೆ ಉಕ್ರೇನ್ ಸೈನಿಕರು ಮತ್ತು ಪೊಲೀಸರು ತಮ್ಮ ವಾಹನಗಳನ್ನು ನುಗ್ಗಿಸಿ, ವಿದ್ಯಾರ್ಥಿಗಳನ್ನು ಅಡ್ಡಗಟ್ಟಿ ಹಿಡಿದು ಥಳಿಸಿದ್ದಾರೆ. ಅಲ್ಲದೇ ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಸಿರುವ ವಿಡಿಯೊ ತುಣುಕನ್ನು ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ.