Ad Widget .

ಆಂಟಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡ 17ರ ಬಾಲಕ| ವಿಷಯ ತಿಳಿದ ಸಂಬಂಧಿಕರಿಂದ ಶಿಶ್ನಕ್ಕೇ ಕತ್ತರಿ!!

Ad Widget . Ad Widget .

ಸಮಗ್ರ ನ್ಯೂಸ್ : ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಎನ್ನುವ ಕಾರಣಕ್ಕೆ 17 ವರ್ಷದ ಬಾಲಕನನ್ನು ಆಕೆಯ ಮನೆಯವರು ಮನಬಂದಂತೆ ಥಳಿಸಿ, ಶಿಶ್ನ ಕತ್ತರಿಸಿ ಕೊಂದು ಹಾಕಿರುವ ಭೀಕರ ಘಟನೆ ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ನಡೆದಿದೆ.

Ad Widget . Ad Widget .

ಘಟನೆಯಿಂದ ಸಂತ್ರಸ್ತ ಬಾಲಕನ ಕುಟುಂಬ ಸದಸ್ಯರು ಆರೋಪಿಗಳ ಮನೆಯ ಮುಂದೆ ಶವ ಸಂಸ್ಕಾರ ಮಾಡಿ ಪ್ರತಿಭಟನೆ ಮಾಡಿದ್ದಾರೆ. ಕಾಂತಿ ಪೊಲೀಸ್‌ ಠಾಣಾ ವ್ಯಾಪ್ತಿಯ ರೆಪುರಾ ರಾಮ್‌ಪುರ್‌ಶಾ ಗ್ರಾಮದಲ್ಲಿ ರಾತ್ರಿ ಈ ಘಟನೆ ನಡೆದಿದೆ. ಅದೇ ಗ್ರಾಮದ ಬಾಲಕ ಸೌರಭ್‌ ಕುಮಾರ್‌ ಆ ದಿನ ರಾತ್ರಿ ಆಂಟಿಯ ಮನೆಗೆ ಹೋಗಿ ಸಿಕ್ಕಿಬಿದ್ದಿದ್ದ.

ತಮ್ಮ ಆಂಟಿಯ ಜತೆ ಇರಿಸಿಕೊಂಡಿರುವ ಅಕ್ರಮ ಸಂಬಂಧ ತೊರೆಯುವಂತೆ ಹಿಂದೆ ಹಲವು ಬಾರಿ ಆಂಟಿಯ ಮನೆಯವರು ಎಚ್ಚರಿಕೆ ನೀಡಿದ್ದರು. ಸೌರಭ್‌ ಅದಕ್ಕೆ ಕಿವಿಗೊಟ್ಟಿರಲಿಲ್ಲ ‘ನೇರ ಮನೆಗೆ ನುಗ್ಗಿ ಸಲ್ಲಾಪಕ್ಕಿಳಿದ ಹುಡುಗನ ವರ್ತನೆಯಿಂದ ಕೆಂಡಾಮಂಡಲವಾದ ಆಕೆಯ ಮನೆಯವರು ಬಾಗಿಲು ಚಿಲಕ ಹಾಕಿ ಥಳಿಸಿದ್ದರು. ಸೌರಭ್‌ನ ಬಟ್ಟೆ ಕಳಚಿ ಶಿಶ್ನ ಕತ್ತರಿಸಿ ದಂಡಿಸಿದ್ದರು. ನಂತರ ನಿತ್ರಾಣಗೊಂಡ ಆತನನ್ನು ನೆರೆಯರು ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ಗಾಯಗಳಿಂದ ಕುಸಿದಿದ್ದ ಬಾಲಕ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾನೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠರು ತಿಳಿಸಿದ್ದಾರೆ.

ಮೃತ ಬಾಲಕನ ಕುಟುಂಬಸ್ಥರು ಆರೋಪಿಗಳ ಮನೆ ಮೇಲೆ ದಾಳಿ ಮಾಡಿ ಕೈಗೆ ಸಿಕ್ಕವರನ್ನೆಲ್ಲ ಥಳಿಸಿದರು. ನಂತರ ಬಾಲಕನ ಶವವನ್ನು ಹುಡುಗಿಯ ಮನೆ ಮುಂದೆ ಹೂತು ಪ್ರತಿಭಟನೆ ನಡೆಸಿದರು. ಪೊಲೀಸರು ಸಕಾಲಿಕ ಮಧ್ಯಪ್ರವೇಶ ಮಾಡಿ, ಹೆಚ್ಚಿನ ಅನಾಹುತ ತಪ್ಪಿಸಿದರು. ಪ್ರಮುಖ ಆರೋಪಿ ಸುಶಾಂತ್‌ ಪಾಂಡ್ಯೆ ಎಂಬಾತನನ್ನು ಬಂಧಿಸಲಾಗಿದೆ. ಉಳಿದವರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *