Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಮಗು ಜನಿಸಿದಾಗ ಅದು ಹುಟ್ಟಿದ ನಕ್ಷತ್ರ, ಸಮಯ ನೋಡಿಕೊಂಡು ಜ್ಯೋತಿಷಿಗಳು ಯಾವ ಅಕ್ಷರದ ಹೆಸರಿಟ್ಟರೆ ಮಗುವಿಗೆ ಒಳಿತಾಗುತ್ತದೆ ಎಂಬುದನ್ನು ಹೇಳುತ್ತಾರೆ. ಅಂದರೆ ವ್ಯಕ್ತಿಯ ಹೆಸರು ಆ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಅದೇ ರೀತಿ ರಾಶಿಗಳ ಕೂಡಾ ನಮ್ಮ ದಿನನಿತ್ಯದ ಕೆಲಸಗಳಲ್ಲಿ ಪ್ರಭಾವ ಬೀರುತ್ತವೆ. ಪ್ರತಿದಿನದ ಆಗುಹೋಗುಗಳಿಗೆ ರಾಶಿಗಳ ಮೇಲಿನ ಪ್ರಭಾವಗಳೇ ಕಾರಣವಾಗುತ್ತವೆ. ಅದಕ್ಕಾಗಿ ರಾಶಿಭವಿಷ್ಯ‌ ತಿಳಿದುಕೊಳ್ಳುವುದು ಅವಶ್ಯಕ. ಈ ವಾರ ಯಾವ ರಾಶಿಗೆ ಶುಭ, ಯಾವ ರಾಶಿಗೆ ಸಮಸ್ಯೆ ಮತ್ತು ಅದರ ಪರಿಹಾರ ಕ್ರಮಗಳನ್ನು ಇಲ್ಲಿ ನೀಡಲಾಗಿದೆ.

Ad Widget . Ad Widget .

ಮೇಷ ರಾಶಿ:
ಕೆಲವೊಂದು ವೈಯಕ್ತಿಕ ತೊಂದರೆಗಳಿಂದ ಮುಕ್ತಿ ಪಡೆಯುವಿರಿ. ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ನಿಮಗೆ ಅನಿವಾರ್ಯವಲ್ಲದ ಕೆಲಸ ಕಾರ್ಯಗಳನ್ನು ಮುಂದೂಡುವುದು ಉತ್ತಮ. ಮಕ್ಕಳಿಗಾಗಿ ಬಂಡವಾಳ ಹೂಡಲು ಸಿದ್ಧರಾಗುವಿರಿ. ಬೇರೆಯವರ ತಳುಕಿನ ಮಾತಿಗೆ ಮನ್ನಣೆ ಬೇಡ. ವೈಯಕ್ತಿಕ ಆರೋಗ್ಯದ ಕಡೆಗೆ ಹೆಚ್ಚಿನ ಗಮನವಿರಲಿ. ಸಣ್ಣ ಕೈಗಾರಿಕೋದ್ಯಮಿಗಳಿಗೆ ವಸ್ತುಗಳನ್ನು ಪೂರೈಸಲು ಆದೇಶಗಳು ದೊರೆಯುತ್ತವೆ. ಹಿತಶತ್ರುಗಳ ಭರವಸೆಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ಇರಲಿ. ಉನ್ನತ ವ್ಯಾಸಂಗ ಮಾಡುತ್ತಿರುವವರಿಗೆ ಅಧ್ಯಯನದಲ್ಲಿ ಮುನ್ನಡೆ ಇರುತ್ತದೆ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಸಾಕಷ್ಟು ಯಶಸ್ಸು ದೊರೆಯುತ್ತದೆ.

Ad Widget . Ad Widget .

ವೃಷಭರಾಶಿ:
ಹಿರಿಯರ ಮನೋಭಿಲಾಷೆಗಳು ಈಗ ಈಡೇರುವ ಕಾಲ. ಯಾವುದೋ ಒಂದು ಸತ್ಯವನ್ನು ಅನ್ವೇಷಣೆ ಮಾಡಲು ಹೋಗಿ ಜಯ ಸಾಧಿಸುವಿರಿ. ಬಂಧುಗಳಿಂದ ಸಾಕಷ್ಟು ಸಹಕಾರ ದೊರೆತು ಮನೆಯ ನಿರ್ಮಾಣ ಕಾರ್ಯದಲ್ಲಿ ಕೆಲಸ ಸುಗಮವಾಗುತ್ತದೆ. ಕೆಲವೊಮ್ಮೆ ಅನಿರೀಕ್ಷಿತ ಖರ್ಚುಗಳು ಎದುರಾಗುವ ಸಾಧ್ಯತೆ ಇದೆ. ಉಪಾಧ್ಯಾಯರುಗಳಿಗೆ ಉತ್ತಮ ಗೌರವ ದೊರೆಯುತ್ತದೆ. ಭೂ ವ್ಯವಹಾರ ಮಾಡುವವರಿಗೆ ಹೆಚ್ಚು ಲಾಭವಿರುತ್ತದೆ. ಆಡಳಿತಾತ್ಮಕ ಹುದ್ದೆಯಲ್ಲಿರುವವರಿಗೆ ಬಡ್ತಿ ದೊರೆಯುವ ಸಾಧ್ಯತೆಯಿದೆ. ಸೌಂದರ್ಯವರ್ಧಕಗಳನ್ನು ತಯಾರು ಮಾಡುವವರಿಗೆ ಮಾರುಕಟ್ಟೆ ವಿಸ್ತರಿಸುತ್ತದೆ. ಹಣದ ಒಳಹರಿವು ಸಾಮಾನ್ಯ ಮಟ್ಟದಲ್ಲಿರುತ್ತದೆ.

ಮಿಥುನ ರಾಶಿ:
ಪರಸ್ಪರ ಭಿನ್ನಾಭಿಪ್ರಾಯಗಳು ಮಾಯವಾಗಿ ದಾಂಪತ್ಯದಲ್ಲಿ ಸುಖ ಜೀವನಕ್ಕೆ ನಾಂದಿಯಾಗುತ್ತದೆ. ಸಹೋದ್ಯೋಗಿಗಳಿಂದ ಉದ್ಯೋಗದಲ್ಲಿ ಪಿತೂರಿ ಬಗ್ಗೆ ಹೇಗೋ ಅದರ ಸುಳಿವು ನಿಮಗೆ ತಿಳಿದು ಅದರಿಂದ ಪಾರಾಗುವಿರಿ. ಪ್ರಾಪ್ತ ವಯಸ್ಕರಿಗೆ ಸಂಬಂಧ ಕೂಡಿ ಬರುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿಯು ಸ್ವಲ್ಪ ಉನ್ನತಿಯತ್ತ ಸಾಗುತ್ತದೆ. ಶತ್ರುಗಳ ವಿರುದ್ಧ ಸವಾರಿ ಮಾಡುವ ಅವಕಾಶ ದೊರೆಯುತ್ತದೆ. ಸಮಾರಂಭಗಳಲ್ಲಿ ಭಾಗವಹಿಸಿ ಬಂಧು ಬಾಂಧವರೊಡನೆ ಸಂತಸದ ಕಾಲವನ್ನು ಕಳೆಯುವಿರಿ. ಸಂಗಾತಿಯೊಡನೆ ವಿಹಾರಕ್ಕಾಗಿ ಹೋಗಿ ಬರುವ ಸಾಧ್ಯತೆಗಳಿವೆ. ಉದರಶೂಲೆ ಈ ವಾರ ನಿಮ್ಮನ್ನು ಭಾದಿಸಬಹುದು. ಹೊಸ ವ್ಯಕ್ತಿಗಳ ಪರಿಚಯದಿಂದ ಸಂತಸವಾಗುತ್ತದೆ.

ಕಟಕ ರಾಶಿ:
ಓದಿನಲ್ಲಿ ವಿದ್ಯಾರ್ಥಿಗಳಿಗೆ ಪ್ರಗತಿ ಇರುತ್ತದೆ. ಸರ್ಕಾರಿ ಮಟ್ಟದ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಆಗುತ್ತವೆ. ದೃಢ ನಿರ್ಧಾರಗಳಿಂದ ವ್ಯವಹಾರದಲ್ಲಿ ಪಾಲ್ಗೊಳ್ಳದಿದ್ದರೆ ಸ್ವಲ್ಪ ನಷ್ಟವಾಗುವ ಸಂದರ್ಭವಿದೆ. ಕಳೆದುಹೋದ ವಿದ್ಯಮಾನಗಳಿಗೆ ಚಿಂತಿಸದೆ ಮುಂಬರುವ ಕೆಲಸ-ಕಾರ್ಯಗಳ ಬಗ್ಗೆ ಹೆಚ್ಚು ಚಿಂತನೆಯನ್ನು ಮಾಡಿರಿ. ನಿಮ್ಮ ಕಾರ್ಯಕ್ಷೇತ್ರಗಳನ್ನು ವಿಸ್ತರಿಸಲು ನಿಮಗೆ ಅನುಮತಿ ದೊರೆಯುತ್ತದೆ. ಇಲಾಖಾವಾರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಮ್ಮ ಸಾಧನೆಯನ್ನು ಮಾಡುವ ಯೋಗವಿದೆ. ತಲೆನೋವು ನಿಮ್ಮನ್ನು ಕಾಡಬಹುದು. ಮಹಿಳೆಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಯಶಸ್ಸು ಇರುತ್ತದೆ. ಹಣದ ಒಳಹರಿವು ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ನಿಮ್ಮ ಬುದ್ಧಿವಂತಿಕೆಯ ಪ್ರದರ್ಶನಕ್ಕೆ ಉತ್ತಮ ಅವಕಾಶ ದೊರೆಯುತ್ತದೆ

ಸಿಂಹ ರಾಶಿ:
ಅನವಶ್ಯಕ ಪ್ರಯಾಣದಿಂದ ಧನನಷ್ಟ. ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಹೆಚ್ಚು ಗಮನಕೊಡುವಿರಿ. ನಿಮ್ಮ ಉದ್ಯೋಗದಲ್ಲಿನ ಪ್ರಮುಖರನ್ನು ಭೇಟಿ ಮಾಡಿ ಉದ್ಯೋಗದಲ್ಲಿ ಮೇಲೇರುವ ಬಗ್ಗೆ ಚರ್ಚೆ ಮಾಡುವಿರಿ. ಹಣದ ಒಳಹರಿವು ಸಾಮಾನ್ಯ. ವಿದ್ಯಾರ್ಥಿಗಳಿಗೆ ಇದ್ದ ಸಮಸ್ಯೆಗಳು ಬಗೆಹರಿದು ವಿದ್ಯೆಗೆ ಬೇಕಾದಂತಹ ಅನುಕೂಲ ಒದಗಿಬರುತ್ತದೆ. ಗುಂಪುಗಾರಿಕೆ ಮಾಡುವವರಿಗೆ ತಿರುಗೇಟನ್ನು ಕೊಟ್ಟು ಎಚ್ಚರಿಸುವಿರಿ. ರಾಜತಾಂತ್ರಿಕ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಸ್ಥಾನಮಾನ ದೊರೆಯುವ ಅವಕಾಶವಿದೆ. ಕಚೇರಿ ಕೆಲಸದ ಮೇಲೆ ವಿದೇಶಕ್ಕೆ ಹೋಗಿ ಬರುವ ಸಾಧ್ಯತೆಗಳಿವೆ.

ಕನ್ಯಾ ರಾಶಿ:
ರಾಸಾಯನಿಕ ವಸ್ತುಗಳನ್ನು ಆಮದು ರಫ್ತು ಮಾಡುವವರಿಗೆ ಉತ್ತಮ ವ್ಯವಹಾರವಿರುತ್ತದೆ. ನಿಮ್ಮ ಅನುಕೂಲವನ್ನು ಅನುಸರಿಸಿ ಸಮಯಕ್ಕೆ ತಕ್ಕಂತೆ ಜನಗಳ ಓಲೈಕೆ ಮಾಡುವಿರಿ. ಸಾಲ ಕೊಟ್ಟವರು ಎಡೆಬಿಡದೆ ಮರುಪಾವತಿಗಾಗಿ ತಗಾದೆ ಮಾಡುವರು. ನಿರ್ಮಾಣ ಕಾರ್ಯಗಳನ್ನು ಮಾಡುವವರಿಗೆ ಹೆಚ್ಚಿನ ಕೆಲಸಗಳು ದೊರೆಯುತ್ತವೆ. ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಕೆಲಸದ ಒತ್ತಡ ಹೆಚ್ಚುತ್ತದೆ. ವಿವಾಹದ ವಿಷಯದಲ್ಲಿ ಮಧ್ಯವರ್ತಿಗಳನ್ನು ದೂರವಿಟ್ಟು ನೇರ ಮಾತುಕತೆ ನಡೆಸುವುದು ಬಹಳ ಒಳ್ಳೆಯದು. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಕಣ್ಣಿನ ತೊಂದರೆ ಸ್ವಲ್ಪ ಭಾದಿಸಬಹುದು. ಹಿರಿಯರ ಆಸ್ತಿಯನ್ನು ಕೊಳ್ಳುವ ಪ್ರಯತ್ನ ಮಾಡುವಿರಿ.

ತುಲಾ ರಾಶಿ:
ವ್ಯವಹಾರದಲ್ಲಿ ಪಾಲುದಾರರಿಂದ ವ್ಯವಹಾರಕ್ಕೆ ಪ್ರೋತ್ಸಾಹ ಇರುವುದು. ಮಕ್ಕಳಿಂದ ಮನಸ್ಸಿಗೆ ಚಿಂತೆ ಮೂಡುತ್ತದೆ. ಸಾಮಾಜಿಕ ಕಾರ್ಯಗಳನ್ನು ಮಾಡುವವರಿಗೆ ಅಪವಾದ ಬರುವ ಸಾಧ್ಯತೆಗಳಿವೆ ಎಚ್ಚರ ವಹಿಸಿರಿ. ಹಿರಿಯ ಕಲಾವಿದರುಗಳಿಗೆ ಗೌರವಧನ ದೊರೆಯುವ ಸಾಧ್ಯತೆ ಇದೆ. ಸಂಗಾತಿಯಿಂದ ನಿಮ್ಮ ಚಿಂತೆಗೆ ಪರಿಹಾರ ದೊರೆಯುತ್ತದೆ. ಧಾರ್ಮಿಕ ಚರ್ಚೆಗಳಲ್ಲಿ ಭಾಗವಹಿಸಿ ನಿಮ್ಮ ವಾದವನ್ನು ಮಂಡಿಸುವ ಸಾಧ್ಯತೆ ಇದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕುವುದು ಬಹಳ ಒಳ್ಳೆಯದು. ನಿಮ್ಮ ಮಕ್ಕಳಿಂದ ನಿಮಗೆ ಧನ ಸಹಾಯ ದೊರೆಯುತ್ತದೆ. ನಂಬಿಕೊಂಡಿರುವ ಧುರೀಣರು ಸಮಯದಲ್ಲಿ ಕೈಕೊಡುವ ಸಾಧ್ಯತೆಗಳಿವೆ, ಎಚ್ಚರ ವಹಿಸಿರಿ.

ವೃಶ್ಚಿಕ ರಾಶಿ:
ನಡವಳಿಕೆಯಿಂದ ನಿಮ್ಮ ವೈಯಕ್ತಿಕ ಜೀವನವನ್ನು ಉತ್ತಮಗೊಳ್ಳುವುದು. ಸಾಮಾಜಿಕ ಚಿಂತನೆಗಳಿಂದ ಗೌರವಾದರಗಳನ್ನು ಪಡೆಯುವಿರಿ. ಮನಸ್ಸಿಗೆ ನೆಮ್ಮದಿಕೊಡುವ ಮಾರ್ಗವೊಂದು ನಿಮಗೆ ಗೋಚರವಾಗುತ್ತದೆ. ಕೈಗೊಂಡ ಕೆಲಸಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವಿರಿ. ದಿನಸಿ ವ್ಯಾಪಾರಿಗಳಿಗೆ ಹೆಚ್ಚು ವ್ಯಾಪಾರವಾಗಿ ಲಾಭವೂ ಹೆಚ್ಚುತ್ತದೆ. ಕಲ್ಲು ಗಣಿಗಾರಿಕೆಯನ್ನು ಮಾಡುವವರಿಗೆ ಬೇಕಾದ ಪರವಾನಗಿ ದೊರೆಯುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಸಾಧನೆಯಲ್ಲಿ ಯಶಸ್ಸು ಇರುತ್ತದೆ. ಮಾತೃ ವರ್ಗದವರಿಂದ ನಿಮ್ಮ ಕೆಲಸಗಳಲ್ಲಿ ವೈಯಕ್ತಿಕ ಸಹಾಯ ದೊರೆಯುತ್ತದೆ. ಭೂ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಇರುತ್ತದೆ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ ಬರಬಹುದು.

ಧನಸ್ಸು ರಾಶಿ:
ಹಿರಿಯರು, ಸಂಬಂಧವಿಲ್ಲದ ವಿಷಯಗಳಲ್ಲಿ ಮೂಗು ತೂರಿಸಲು ಹೋಗಿ ಮುಜುಗರಕ್ಕೆ ಒಳಗಾಗುವ ಸಂದರ್ಭಗಳಿವೆ. ನೆರೆಹೊರೆಯವರ ಜೊತೆ ಉತ್ತಮ ಬಾಂಧವ್ಯವನ್ನು ಉಳಿಸಿಕೊಳ್ಳುವುದು ಬಹಳ ಒಳ್ಳೆಯದು. ಮಕ್ಕಳಿಂದ ಸಾಕಷ್ಟು ಅನುಕೂಲ ಒದಗಿಬರುತ್ತದೆ. ವಿವಿಧ ಮೂಲಗಳಿಂದ ಹೆಚ್ಚಿನ ಆದಾಯ ಬರುವ ಸಾಧ್ಯತೆ ಇದೆ. ನಿವೇಶನ ಅಥವಾ ಜಮೀನು ಖರೀದಿ ಸಾಧ್ಯತೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರಕುವ ಸಾಧ್ಯತೆ. ಸಿಗಲಾರದು ಎಂದುಕೊಂಡಿದ್ದ ವಸ್ತುವೊಂದು ದೊರೆತು ಸಂತಸವಾಗುತ್ತದೆ. ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಧನ ಸಂಗ್ರಹ ಮಾಡುವಿರಿ. ಕೃಷಿಕರಿಗೆ ಸರ್ಕಾರದಿಂದ ಬರಬೇಕಾಗಿದ್ದ ಧನ ಸಹಾಯ ಬರುತ್ತದೆ.

ಮಕರ ರಾಶಿ:
ಕೈಗೆತ್ತಿಕೊಂಡ ಕಾರ್ಯಗಳಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ. ಕೆಲವು ಸರ್ಕಾರಿ ಅಧಿಕಾರಿಗಳಿಗೆ ಯೋಜನೆಯನ್ನು ರೂಪಿಸುವ ಹೊಸ ಜವಾಬ್ದಾರಿ ದೊರೆಯುತ್ತದೆ. ಹೆಣ್ಣುಮಕ್ಕಳು ಪ್ರೀತಿ-ಪ್ರೇಮದ ಹುಚ್ಚುಹೊಳೆಯಲ್ಲಿ ಸಿಕ್ಕಿ ಬೀಳುವ ಸಾಧ್ಯತೆ ಇದೆ, ಎಚ್ಚರ ವಹಿಸಿರಿ. ಹತ್ತಿ, ನಾರು ಇವುಗಳಿಂದ ವಿವಿಧ ಬಗೆಯ ವಸ್ತ್ರಗಳನ್ನು ತಯಾರಿಸಿ ಮಾರುವವರ ವ್ಯವಹಾರದಲ್ಲಿ ಹೆಚ್ಚಳವಾಗಲಿದೆ. ಜನರ ಜೊತೆ ವ್ಯವಹರಿಸುವಾಗ ಗಂಭೀರ ನಡವಳಿಕೆ ಅತಿ ಅಗತ್ಯ. ಹಣದ ಒಳಹರಿವು ನಿಮ್ಮ ಅಗತ್ಯಕ್ಕಿಂತ ಹೆಚ್ಚಿಗೆ ಇರುತ್ತದೆ. ಹಾಸ್ಯ ಕಲಾವಿದರುಗಳಿಗೆ ಉತ್ತಮ ವೇದಿಕೆ ದೊರೆತು ಗೌರವದ ಜೊತೆ ಧನ ಸಂಪಾದನೆಯಾಗುತ್ತದೆ. ವಿದೇಶದಲ್ಲಿರುವ ಮಕ್ಕಳ ಬಗ್ಗೆ ಶುಭ ಸಮಾಚಾರಗಳನ್ನು ಕೇಳಬಹುದು.

ಕುಂಭ ರಾಶಿ:
ನಿಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಕ್ರಮಕೈ‌ಗೊಳ್ಳಿರಿ. ಬಾಲಬಡುಕರನ್ನು ಸ್ವಲ್ಪಮಟ್ಟಿಗೆ ದೂರವಿಡಿ. ವಿದೇಶಕ್ಕೆ ರಫ್ತು ವ್ಯಾಪಾರ ಮಾಡುವವರಿಗೆ ವ್ಯವಹಾರದಲ್ಲಿ ಹೆಚ್ಚಿನ ಲಾಭವಿರುತ್ತದೆ. ಧನಾದಾಯವಿದ್ದರೂ ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು. ಬಟ್ಟೆ ವ್ಯಾಪಾರಿಗಳಿಗೆ ಅವರ ವ್ಯವಹಾರ ವಿಸ್ತರಿಸಿ ಹೆಚ್ಚು ಲಾಭವಾಗುತ್ತದೆ. ಯುವಕರ ನಿರ್ಲಕ್ಷ್ಯತನ ಅವರ ಉದ್ಯೋಗಕ್ಕೆ ಪೆಟ್ಟು ಕೊಡುವ ಸಾಧ್ಯತೆ ಇದೆ. ಹೈನುಗಾರಿಕೆಯ ವ್ಯವಹಾರದಲ್ಲಿ ಇರುವವರೆಗೆ ಆದಾಯ ಹೆಚ್ಚುತ್ತದೆ. ಸಿಹಿ ತಿಂಡಿತಿನಿಸುಗಳನ್ನು ತಯಾರು ಮಾಡುವವರ ಮಾರುಕಟ್ಟೆ ವಿಸ್ತರಿಸುತ್ತದೆ. ಸಂಗಾತಿಯ ಕಡೆಯಿಂದ ಹೆಚ್ಚಿನ ಸಹಕಾರ ದೊರೆಯುತ್ತದೆ. ದ್ರವರೂಪದ ಆಹಾರ ವಸ್ತುಗಳನ್ನು ಮಾರಾಟ ಮಾಡುವವರ ಆದಾಯ ಹೆಚ್ಚುತ್ತದೆ.

ಮೀನ ರಾಶಿ:
ಆರ್ಥಿಕ ಚೇತರಿಕೆ ಕಂಡರೂ ಖರ್ಚಿನ ವಿಷಯದಲ್ಲಿ ಎಚ್ಚರಿಕೆ ವಹಿಸಿರಿ. ಕೆಲವರೊಂದಿಗೆ ಅತಿಯಾದ ಸ್ನೇಹ ಸಂಬಂಧಗಳು ವೃದ್ಧಿಸುವ ಸಾಧ್ಯತೆ ಇದೆ. ಗೃಹಿಣಿಯರು ಹರಿತವಾದ ಆಯುಧಗಳನ್ನು ಉಪಯೋಗಿಸುವಾಗ ಎಚ್ಚರ ಇರಲಿ. ರೇಷ್ಮೆ ನೂಲು ತೆಗೆಯುವವರಿಗೆ ಬೇಡಿಕೆ ಬರುತ್ತದೆ. ಔಷಧಿ ತಯಾರಿಕಾ ಸಂಸ್ಥೆಗಳನ್ನು ನಡೆಸುತ್ತಿರುವವರ ಆದಾಯ ಹೆಚ್ಚುತ್ತದೆ. ಹಣ ಉಳಿತಾಯ ಮಾಡುವಲ್ಲಿ ಸ್ವಲ್ಪ ಪ್ರಗತಿ ಸಾಧಿಸುವಿರಿ. ನಿಂತುಹೋಗಿದ್ದ ಕೆಲಸವೊಂದು ಈಗ ಆರಂಭಗೊಂಡು ಪ್ರಗತಿಯನ್ನು ಕಾಣಬಹುದು. ರಾಜಕೀಯ ಸೇರಬೇಕೆನ್ನುವವರಿಗೆ ಸೂಕ್ತ ಮಾರ್ಗದರ್ಶಕರು ದೊರೆಯುತ್ತಾರೆ. ಗಣಿಗಾರಿಕೆ ನಡೆಸುವವರ ವ್ಯವಹಾರಗಳು ವಿಸ್ತರಣೆಯಾಗುತ್ತದೆ. ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಇಡಿ.

Leave a Comment

Your email address will not be published. Required fields are marked *