Ad Widget .

ವಿವಿಧ ಬೇಡಿಕೆಗಳಿಗೆ ಒತ್ತಾಯ| ಮಾರ್ಚ್ 4ರಂದು ರಾಜ್ಯಾದ್ಯಂತ ಅನುದಾನಿತ ಶಾಲಾ-ಕಾಲೇಜುಗಳು ಬಂದ್

Ad Widget . Ad Widget .

ಸಮಗ್ರ ನ್ಯೂಸ್: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇದೀಗ ರಾಜ್ಯ ಅನುದಾನಿತ ಶಾಲಾ- ಕಾಲೇಜುಗಳ ನೌಕರರ ಸಂಘ ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ.

Ad Widget . Ad Widget .

ಮಾರ್ಚ್ 4ರಂದು ರಾಜ್ಯಾದ್ಯಂತ ಶಾಲಾ-ಕಾಲೇಜುಗಳನ್ನ ಬಂದ್ ಮಾಡಿ, ಮೆಜೆಸ್ಟಿಕ್​​ನಿಂದ ವಿಧಾನಸೌಧದ ತನಕ ಬೃಹತ್ ರ್ಯಾಲಿ ನಡೆಸಲಿದ್ದಾರೆ. ಅನಿರ್ದಿಷ್ಟ ಅಹೋರಾತ್ರಿ ಧರಣಿಗೂ ಸಿದ್ದವಾಗಿರುವುದಾಗಿ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ರಾಜ್ಯಾಧ್ಯಕ್ಷ ಗೋಪಿನಾಥ್ ತಿಳಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಕಳೆದ 2014ರಿಂದಲ್ಲೂ ಅನೇಕ ಮನವಿಯನ್ನ ಸಲ್ಲಿಸಿದ್ದರೂ, ಹೋರಾಟಗಳನ್ನ ನಡೆಸಿದ್ದರೂ ಸರ್ಕಾರ ನಿರ್ಲಕ್ಷ್ಯವಹಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನುದಾನಿತ ಶಾಲಾ ಕಾಲೇಜು ನೌಕರರಿಗೆ ಪಿಂಚಣಿ ಸೌಲಭ್ಯ ಒದಗಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾರ್ಚ್​ 4 ರಂದು ರಾಜ್ಯದಾದ್ಯಂತ ಅನುದಾನಿತ ಶಾಲಾ ಕಾಲೇಜುಗಳು ಬಂದ್ ಮಾಡಲು ಶಾಲಾ ಕಾಲೇಜು ನೌಕರರ ಸಂಘ ಮುಂದಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್​ ಪ್ರತಿಭಟನೆ ನಡೆಸೋದಾಗಿ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷ ಡಿ.ಸಿ ಗೋಪಿನಾಥ್​ ತಿಳಿಸಿದ್ದಾರೆ.

ಫ್ರೀಡಂ ಪಾರ್ಕ್​ನಿಂದ ಜಾಥಾ ನಡೆಸಲು ನಿರ್ಧಾರ:

ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಡಿ.ಸಿ ಗೋಪಿನಾಥ್​ , ಕಳೆದ 2014ರಿಂದಲ್ಲೂ ಅನೇಕ ಮನವಿಯನ್ನ ಸಲ್ಲಿಸಿದ್ದರೂ, ಹೋರಾಟಗಳನ್ನ ನಡೆಸಿದ್ದರೂ ಸರ್ಕಾರ ನಿರ್ಲಕ್ಷ್ಯವಹಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಬೆಂಗಳೂರಿನ ಫ್ರೀಡಂ ಪಾರ್ಕ್​ನಿಂದ ವಿಧಾನಸೌಧ ಚಲೋ ನಡೆಸೋದಾಗಿ ಹೇಳಿದ್ರು. ಬೃಹತ್​ ಪ್ರತಿಭಟನೆಯಲ್ಲಿ ಸಾವಿರಾರು ಅನುದಾನಿತ ಶಾಲಾ-ಕಾಲೇಜು ನೌಕರರು ಭಾಗಿಯಾಗಲಿದ್ದಾರೆ ಅಂತ ತಿಳಿಸಿದರು.

ಅನುದಾನಿತ ಶಾಲಾ-ಕಾಲೇಜು ನೌಕರರು ಬೇಡಿಕೆ ಏನು?:

ನೌಕರರ ಪ್ರಮುಖ ಬೇಡಿಕೆಗಳಾದ 2006ಕ್ಕೂ ಮೊದಲು ನೇಮಕವಾಗಿ ನಂತರ ಅನುದಾನಕ್ಕೊಳಪಟ್ಟ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ನಿವೃತ್ತರಾಗಿರುವ ನೌಕರರ ಸೇವಾ ಅವಧಿಯನ್ನ ಕಾಲ್ಪನಿಕವಾಗಿ ಪರಿಗಣಿಸಿ, ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯ ನೀಡುವುದು. 2006ರ ನಂತರ ನೇಮಕವಾದ ನೌಕರರಿಗೆ ನೂತನ ಪಿಂಚಣಿ ಯೋಜನೆಯನ್ನ ನೌಕರರಿಗೆ ನೀಡಬೇಕು ಹಾಗೂ ನೌಕರರ ಪಾಲಿನ ಶೇ.14 ರಷ್ಟು ಹಣವನ್ನು ಆಡಳಿತ ಮಂಡಳಿಗೆ ನೀಡುವಂತೆ ಒತ್ತಾಯಿಸಿದ್ದಾರೆ.

ಅನುದಾನಿತ ಶಾಲಾ ಮಕ್ಕಳಿಗೂ ಕೆಲ ಸೌಲಭ್ಯ ನೀಡಿ:

ಅನುದಾನಿತ ಶಾಲಾ-ಕಾಲೇಜುಗಳ ನೌಕರರಿಗೂ ಆರೋಗ್ಯ ಸಿರಿ ಯೋಜನೆಯನ್ನ ಜಾರಿಗೆ ತರಬೇಕು. ಖಾಲಿ ಹುದ್ದೆಗಳನ್ನ ತುಂಬಿಕೊಳ್ಳಲು ವಿಧಿಸಿರುವ ನಿಯಮಗಳನ್ನ ಸಡಿಲಗೊಳಿಸಬೇಕು. ಸರ್ಕಾರಿ ಶಾಲಾ ಮಕ್ಕಳಿಗೆ ನೀಡುತ್ತಿರುವ ಸೌಲಭ್ಯಗಳನ್ನ ಅನುದಾನಿತ ಶಾಲಾ ಮಕ್ಕಳಿಗೂ ನೀಡಬೇಕೆಂದು ಮನವಿ ಮಾಡಿದ್ದಾರೆ.

ಈ ಬಾರಿ ಅನುದಾನಿತ ಶಾಲಾ -ಕಾಲೇಜು ನೌಕರರು ವಿವಿಧ ಬೇಡಿಕೆಗಳ ಈಡೇರಿಕೆ ಪಟ್ಟು ಹಿಡಿದಿದ್ದಾರೆ ಏನೇ ಆದರೂ ಪಟ್ಟು ಬಿಡಲ್ಲ ಅಂತಿದ್ದಾರೆ. ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಈ ಬಾರಿ ಬೃಹತ್​ ಪ್ರತಿಭಟನೆಗೆ ಮುಂದಾಗಿದ್ದಾರೆ. ಸಾವಿರಾರು ನೌಕರರ ಮೆರವಣಿಗೆ ಮೂಲಕ ವಿಧಾನಸೌಧ ಚಲೋ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಅನುದಾನಿತ ಶಾಲಾ-ಕಾಲೇಜು ನೌಕರರ ಸಂಘ ಮುಂದಾಗಿದೆ.

ಅನುದಾನಿತ ಶಾಲಾ-ಕಾಲೇಜಿಗಷ್ಟೆ ರಜೆ:

ಮಾರ್ಚ್​ 4 ರಂದು ರಾಜ್ಯಾದ್ಯಂತ ಅನುದಾನಿತ ಶಾಲೆ-ಕಾಲೇಜಿಗಷ್ಟೆ ರಜೆ ನೀಡಲಾಗಿದೆ. ಉಳಿದಂತೆ ಸರ್ಕಾರಿ ಶಾಲೆಗಳು ಸೇರಿದಂತೆ ಖಾಸಗಿ ಶಾಲಾ, ಕಾಲೇಜಿನ ಮಕ್ಕಳಿಗೆ ಎಂದಿನಂತೆ ತರಗತಿಗಳು ನಡೆಯಲಿವೆ. ಇನ್ನು ಮಕ್ಕಳ ಪರೀಕ್ಷೆ ಟೈಮ್​ನಲ್ಲಿ ಶಾಲಾ-ಕಾಲೇಜು ನೌಕರರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ರೆ ತೊಂದರೆಯಾಗೋದು ತಮ್ಮ ಮಕ್ಕಳ ಭವಿಷ್ಯಕ್ಕೆ ಅಂತ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *