Ad Widget .

ಮಂಗಳೂರು: ನಾಳೆ ಜಿಲ್ಲೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ

Ad Widget . Ad Widget .

ಸಮಗ್ರ ನ್ಯೂಸ್: ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಫೆ. 28ರಂದು ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಬಂಧಿಸಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

Ad Widget . Ad Widget .

ರಾಷ್ಟ್ರೀಯ ಹೆದ್ದಾರಿ 66ರ ಎನ್‌ಎಂಪಿಟಿ ಸಂಪರ್ಕಿಸುವ ಕೆಪಿಟಿ ಜಂಕ್ಷನ್‌ನಲ್ಲಿ 34.61 ಕೋ.ರೂ. ವೆಚ್ಚದಲ್ಲಿ ವಿಯುಪಿ ನಿರ್ಮಾಣ, ರಾ.ಹೆ. 75ರ ಬೆಂಗಳೂರು -ಮಂಗಳೂರು ವಿಭಾಗದಲ್ಲಿ ಗುಂಡ್ಯ ಅಡ್ಡ ಹೊಳೆಯಿಂದ ಪೆರಿಯಶಾಂತಿ ವರೆಗೆ 442.87 ಕೋ.ರೂ. ವೆಚ್ಚದ 15.13 ಕಿ.ಮೀ. ದೂರದ ನಾಲ್ಕು ಪಥ ರಸ್ತೆ ನಿರ್ಮಾಣ, ಗುಂಡ್ಯ ಅಡ್ಡಹೊಳೆಯಿಂದ ಪೆರಿಯಶಾಂತಿ -ಬಂಟ್ವಾಳಕ್ಕೆ 48.48 ಕಿ.ಮೀ. ದೂರಕ್ಕೆ 1,480.85 ಕೋ. ರೂ. ವೆಚ್ಚದ ಚತುಷ್ಪಥ ನಿರ್ಮಾಣ ಮತ್ತು ಕಲ್ಲಡ್ಕ ಪೇಟೆಯಲ್ಲಿ 6 ಪಥದ ಮೇಲ್ಸೇತುವೆ ಕಾಮಗಾರಿ, ರಾ.ಹೆ. 169ರ ಬಿಕರ್ನಕಟ್ಟೆ-ಸಾಣೂರು ನಡುವೆ 45.01 ಕಿ.ಮೀ. ದೂರದ 1,137 ಕೋ.ರೂ. ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನಡೆಯಲಿದೆ ಎಂದರು.

ರಾ.ಹೆ.73ರ ಮಂಗಳೂರು ತುಮಕೂರು ಭಾಗದ ಪುಂಜಾಲ ಕಟ್ಟೆಯಿಂದ ಚಾರ್ಮಾಡಿ ವರೆಗೆ ಪೇವ್‌ ಶೋಲ್ಡರ್‌ ನೊಂದಿಗೆ ದ್ವಿಪಥವಾಗಿ ರಸ್ತೆಯನ್ನು 696.26 ಕೋರೂ.ಗಳಲ್ಲಿ 35 ಕಿ.ಮೀ. ವರೆಗೆ ಅಭಿವೃದ್ಧಿಪಡಿಸ ಲಾಗುವುದು. ರಾ.ಹೆ. 275ರ 16.35 ಕಿ.ಮೀ, 17.80 ಕಿ.ಮೀ., 20.60 ಕಿ.ಮೀ., 23 ಕಿ.ಮೀ., 24.90 ಕಿ.ಮೀ., 27.36 ಕಿ.ಮೀ, 46.27 ಕಿ.ಮೀ ಮತ್ತು 66.64 ಕಿ.ಮೀ.ಗಳಲ್ಲಿ ಒಟ್ಟು 48.96 ಕೋ.ರೂ.ಗಳಲ್ಲಿ 8 ಕಿರು ಸೇತುವೆಗಳ ನಿರ್ಮಾಣ ವಾಗಲಿದೆ. ಡಿಪಿಆರ್‌ಗೆ ಕೇಂದ್ರ ಭೂಸಾರಿಗೆ ಸಚಿವಾಲಯದಲ್ಲಿ ಅನು ಮೋದನೆ ಹಂತದಲ್ಲಿದೆ ಎಂದರು.

Leave a Comment

Your email address will not be published. Required fields are marked *