Ad Widget .

‘ಅಧಿಕಾರವನ್ನು ನಿಮ್ಮ ಕೈಗೆ ತಗೊಳ್ಳಿ’ | ಉಕ್ರೇನ್ ಮಿಲಿಟರಿ ಪಡೆಗೆ ಪುಟಿನ್ ಸೂಚನೆ| ಒಡೆದು ಆಳುವ ನೀತಿ ಪ್ರಯೋಗಿಸಿದ ರಷ್ಯಾ|

Ad Widget . Ad Widget .

ಸಮಗ್ರ ನ್ಯೂಸ್: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಮಿಲಿಟರಿಗೆ ದೇಶದ ಅಧಿಕಾರವನ್ನು ವಶಪಡಿಸಿಕೊಳ್ಳಲು ಕರೆ ನೀಡಿದ್ದಾರೆ. ಪುಟಿನ್ ತಮ್ಮ ದೇಶವನ್ನು ಉದ್ದೇಶಿಸಿ ಉಕ್ರೇನ್ ಸೇನೆಗೆ ಈ ಸಂದೇಶವನ್ನು ಕಳುಹಿಸಿದ್ದಾರೆ. ರಷ್ಯಾದ ಅಧ್ಯಕ್ಷರು ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ಉದ್ದೇಶವನ್ನು ಹೊಂದಿಲ್ಲ ಮತ್ತು ಉಕ್ರೇನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲು ನಾವು ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ.

Ad Widget . Ad Widget .

ಜೊತೆಗೆ ರಷ್ಯಾದ ಅಧ್ಯಕ್ಷರು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ಅಧಿಕಾರದಿಂದ ತೆಗೆದುಹಾಕಲು ಮತ್ತು ಅಲ್ಲಿ ಮಿಲಿಟರಿ ಆಡಳಿತವನ್ನು ಸ್ಥಾಪಿಸಲು ಬಯಸುತ್ತಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ ನೆರೆಯ ದೇಶದ ಸೇನೆಯನ್ನು ತಮ್ಮ ಕೈಯಲ್ಲಿ ಅಧಿಕಾರ ಹಿಡಿಯುವಂತೆ ಕೇಳಿಕೊಂಡಿದ್ದಾರೆ ಎಂದು ರಾಯಿಟರ್ಸ್ ವರದಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

Leave a Comment

Your email address will not be published. Required fields are marked *