Ad Widget .

ರಷ್ಯಾ ಕಬಳಿಸುತ್ತಿದ್ದರೂ ಅಮೇರಿಕಾ ಸುಮ್ಮನಿದೆ| ಪೇಸ್ ಬುಕ್ ಲೈವ್ ನಲ್ಲಿ ಉಕ್ರೇನ್ ಅಧ್ಯಕ್ಷನ ಅಳಲು

Ad Widget . Ad Widget .

ಸಮಗ್ರ ನ್ಯೂಸ್: ಉಕ್ರೇನ್‌ನ ರಾಜಧಾನಿ ಕೀವ್‌ ಅನ್ನು ರಷ್ಯಾ ವಶಪಡಿಸಿಕೊಂಡಿದೆ ಎಂಬ ವರದಿಗಳ ಬೆನ್ನಲ್ಲೇ ಉಕ್ರೇನ್‌ ಅಧ್ಯಕ್ಷ ವೋಲೋದಿಮಿರ್‌ ಜೆಲೆನ್‌ಸ್ಕಿ ತನ್ನ ದೇಶವನ್ನುದ್ದೇಶಿಸಿ ಭಾವನಾತ್ಮಕ ಭಾಷಣ ಮಾಡಿದ್ದು, ಜಗತ್ತಿನ ನಂ.1 ಶಕ್ತಿಶಾಲಿ ದೇಶ ಅಮೆರಿಕ ದೂರದಿಂದ ಸುಮ್ಮನೆ ನೋಡುತ್ತಿದೆ ಎಂದು ಅಲವತ್ತುಕೊಂಡಿದ್ದಾರೆ.

Ad Widget . Ad Widget .

ನಾನು ರಷ್ಯಾದ ನಂ.1 ಗುರಿ, ನನ್ನ ಕುಟುಂಬ ನಂ.2 ಗುರಿ. ನಿನ್ನೆಯಂತೆ ಇಂದೂ ಕೂಡ ನಾವು ಏಕಾಂಗಿಯಾಗಿ ನಮ್ಮ ದೇಶವನ್ನು ರಕ್ಷಣೆ ಮಾಡಿಕೊಳ್ಳಲು ಯತ್ನಿಸುತ್ತಿದ್ದೇವೆ. ಜಗತ್ತಿನ ಅತ್ಯಂತ ಶಕ್ತಿಶಾಲಿ ದೇಶ ದೂರದಿಂದ ನೋಡುತ್ತಿದೆ ಎಂದು ಹೇಳಿದ್ದಾರೆ.

ಶುಕ್ರವಾರ ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿದ ಜೆಲೆನ್‌ಸ್ಕಿ, ‘ಮಾಸ್ಕೋ ಮೇಲೆ ನಿನ್ನೆ ಅನೇಕ ದೇಶಗಳು ನಿರ್ಬಂಧಗಳನ್ನು ಹೇರಿವೆ. ಆದರೆ ರಷ್ಯಾ ನಮ್ಮ ವಿರುದ್ಧ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ತಡೆಯಲು ಅವು ಸಾಲದು. ಒಗ್ಗಟ್ಟು ಹಾಗೂ ದೃಢ ನಿಶ್ಚಯದಿಂದ ಮಾತ್ರ ನಮ್ಮ ನೆಲದಲ್ಲಿರುವ ವಿದೇಶಿ ಪಡೆಗಳನ್ನು ಹಿಮ್ಮೆಟ್ಟಿಸಲು ಸಾಧ್ಯ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಉಕ್ರೇನ್‌ನಲ್ಲಿ ಯಾರನ್ನು ಕೊಲ್ಲಬೇಕು ಅಥವಾ ಹಿಡಿದು ಕ್ಯಾಂಪ್‌ಗಳಿಗೆ ಕಳಿಸಬೇಕು ಎಂದು ರಷ್ಯಾ ಹಿಟ್‌ಲಿಸ್ಟ್‌ ತಯಾರಿಸಿದೆ ಎಂದು ಅಮೆರಿಕ ಹೇಳಿದ ನಂತರ ‘ನಾನು ರಷ್ಯಾಕ್ಕೆ ನಂ.1 ಶತ್ರು, ನನ್ನ ಕುಟುಂಬ ನಂ.2 ಶತ್ರು’ ಎಂದು ಜೆಲೆನ್‌ಸ್ಕಿ ಹೇಳಿರುವುದು ಮಹತ್ವ ಪಡೆದಿದೆ.

Leave a Comment

Your email address will not be published. Required fields are marked *