Ad Widget .

ವಿಟ್ಲ : ಮಗನನ್ನೇ ಕೊಲೆಗೈದ ತಂದೆ| ಕಾರಣ?

Ad Widget . Ad Widget .

ಸಮಗ್ರ ನ್ಯೂಸ್: ಕುಡಿದು ಗಲಾಟೆ ಮಾಡುತ್ತಿದ್ದ ಮಗನನ್ನು ತಂದೆಯೇ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಚಂದಳಿಕೆ ಸಮೀಪದ ಕುರುಂಬಳ ಕಾಂತಮೂಲೆಯಲ್ಲಿ ಬುಧವಾರ ನಡೆದಿದೆ. ಮೃತನನ್ನು ದಿನೇಶ್ (45) ಎಂದು ಗುರುತಿಸಲಾಗಿದೆ. ನೀಲಯ್ಯ ಗೌಡ ಮಗನ ಕೊಲೆ ನಡೆಸಿದ ಆರೋಪಿ.

Ad Widget . Ad Widget .

ಮೃತರ ತಂದೆ ವಸಂತ ಗೌಡ ಹಾಗೂ ದಿನೇಶ್ ಅವರು ಮನೆಯಲ್ಲಿ ವಾಸವಾಗಿದ್ದು, ದಿನೇಶ್ ಪ್ರತೀ ದಿನ ಮನೆಗೆ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಎಂದು ಹೇಳಲಾಗಿದ್ದು, ಮಗನ ಉಪಟಳ ತಾಳಲಾರದೆ ಅಪ್ಪ ದೊಣೆಯಿಂದ ಹೊಡೆದಿದ್ದಾರೆ.

ಮೃತರ ತಲೆ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಮೃತ ಪಟ್ಟಿದ್ದಾರೆ ಅಕ್ಕಪಕ್ಕದಲ್ಲಿ ಮನೆಗಳಿದ್ದರೂ ಈ ರೀತಿ ಘಟನೆ ಆಗಿದೆ ಎಂಬುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಆರೋಪಿತನನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.

Leave a Comment

Your email address will not be published. Required fields are marked *