Ad Widget .

ಉಕ್ರೇನ್‍ನಲ್ಲಿ ಕರ್ನಾಟಕದ 10. ಮಂದಿ ವಿದ್ಯಾರ್ಥಿಗಳು ಲಾಕ್| ವಿದೇಶಾಂಗ ಇಲಾಖೆ ಜೊತೆ ಸಿಎಂ ಬೊಮ್ಮಾಯಿ ಚರ್ಚೆ

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸಮಗ್ರ ನ್ಯೂಸ್: ರಷ್ಯಾ ಮತ್ತು ಉಕ್ರೇನ್ ನಡುವೆ ದಾಳಿ ನಡೆಯುತ್ತಿದ್ದು, ಈ ಮಧ್ಯೆ ಕರ್ನಾಟಕದ 10 ಮಂದಿ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Ad Widget . Ad Widget . Ad Widget .

ಉಕ್ರೇನ್ ನಲ್ಲಿ ಬೆಂಗಳೂರು ವಿದ್ಯಾರ್ಥಿ ಲಾಕ್ ಆಗಿದ್ದು, ಪೋಷಕರು ಆತಂಕದಲ್ಲಿ ಇದ್ದಾರೆ. ಪ್ರಸ್ತುತ ದಾಳಿಯಲ್ಲಿ ಸಿಕ್ಕಿ ಹಾಕಿಕೊಂಡಿರುವ ವಿದ್ಯಾರ್ಥಿಗಳ ಪೋಷಕರು ವಾಟ್ಸ್ ಆ್ಯಪ್ ವೀಡಿಯೋ ಕಾಲ್ ಮೂಲಕ ಸಂಪರ್ಕದಲ್ಲಿ ಇದ್ದಾರೆ. ಬೆಳಗ್ಗೆಯಿಂದ ಬಾಂಬ್ ಬ್ಲಾಸ್ಟ್ ಸದ್ದು ಕೇಳಿಬರುತ್ತಿದ್ದು, ನಾವು ಸುರಕ್ಷಿತವಾಗಿರುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಪ್ರಸ್ತುತ ಭಾರತಕ್ಕೆ ಬರಲು ವಿಮಾನ ಸಿಗದೇ ಇರುವುದರಿಂದ ವಾಪಸಾಗಲು ಪರದಾಡುತ್ತಿದ್ದಾರೆ. ಸುದ್ದಿ ತಿಳಿದ ಅಧಿಕಾರಿಗಳು ವಿದ್ಯಾರ್ಥಿಗಳ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.

ಸಿಎಂ ಬೊಮ್ಮಾಯಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ವಿದ್ಯಾರ್ಥಿಗಳ ಜೊತೆ ವಿದೇಶಾಂಗ ಕಾರ್ಯದರ್ಶಿ ನಿರಂತರ ಸಂಪರ್ಕದಲ್ಲಿದ್ದಾರೆ. ಕರ್ನಾಟಕದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿರಿಸುತ್ತೇವೆ. ವಿದ್ಯಾರ್ಥಿಗಳ ಕುಟುಂಬದವರಿಗೆ ಮಾಹಿತಿ ನೀಡಲಾಗುವುದು ಎಂದು ಭರವಸೆಯನ್ನು ಕೊಟ್ಟಿದ್ದಾರೆ.

ವಿದ್ಯಾರ್ಥಿಗಳು ಏರ್ ಪೋರ್ಟ್ ತನಕ ಬಸ್ ನಲ್ಲಿ ಬಂದಿದ್ದರು. ಏರ್ ಪೋರ್ಟ್ ಗೆ ಬಂದ ಮೇಲೆ ಸಮಸ್ಯೆ ಕಾಣಿಸಿಕೊಂಡಿದ್ದು, ವಿಮಾನಗಳು ಹಾರಾಟ ಮಾಡಿಲ್ಲ. ಈ ಹಿನ್ನೆಲೆ ವಿದ್ಯಾರ್ಥಿಗಳು ಬಸ್ ನಲ್ಲೇ ಸಿಕ್ಕಿಕೊಂಡಿದ್ದಾರೆ. ಅವರಿಗೆ ಈಗ ಎಲ್ಲಿಗೆ ಬರಬೇಕು, ಯಾವುದು ಸುರಕ್ಷಿತ ಸ್ಥಳ ಎಂಬ ಮಾಹಿತಿ ನೀಡುತ್ತಿದ್ದೇವೆ. ಕೇಂದ್ರದ ವಿದೇಶಾಂಗ ಕಾರ್ಯದರ್ಶಿ ಜೊತೆಗೂ ನಾನು ಸಂಪರ್ಕ ಮಾಡಲು ಮುಂದಾಗಿದ್ದೇನೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *