Ad Widget .

ಸುಳ್ಯ : ಚಂದನ ಸಾಹಿತ್ಯ ವೇದಿಕೆ ವತಿಯಿಂದ ಚಂದನ ಕವಿ ಕಾವ್ಯ ಸಮ್ಮೇಳನ -2022

Ad Widget . Ad Widget .

ಸಾಹಿತಿ,ಜ್ಯೋತಿಷಿ, ಸಂಘಟಕ, ಗಾಯಕ , ನಟ , ಚಿತ್ರ ನಿರ್ದೇಶಕರೂ ಆದ ಎಚ್ ಭೀಮರಾವ್ ವಾಷ್ಠರ್ ಕೋಡಿಹಾಳ ಇವರ 46ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದ ಪ್ರಯುಕ್ತ ಚಂದನ ಕವಿ ಕಾವ್ಯ ಸಮ್ಮೇಳನ -2022 ಸಾಹಿತ್ಯ ಸಮಾರಂಭವು ಫೆ20 ರಂದು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಬಹಳ ಅದ್ದೂರಿಯಿಂದ ಅರ್ಥಪೂರ್ಣವಾಗಿ ಜರುಗಿತು. ರಾಜ್ಯ ಮಟ್ಟದ ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರದಾನ, ರಾಜ್ಯ ಮಟ್ಟದ ಚಂದನ ಕವಿಗೋಷ್ಠಿ ಹಾಗೂ ಚಂದನ ಸೌರಭ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯಿತು . ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಸುಳ್ಯ ಕೃಷಿ ಇಲಾಖೆಯ ತಾಂತ್ರಿಕ ಕೃಷಿ ಅಧಿಕಾರಿ ಮೋಹನ ನಂಗಾರು ಇವರ ಸರ್ವಾಧ್ಯಕ್ಷತೆಯಲ್ಲಿ ಹಿರಿಯ ಸಾಹಿತಿ ಪ್ರತಿಭಾ ರಂಗದ ರೂವಾರಿ ನಾರಾಯಣ ರೈ ಕುಕ್ಕುವಳ್ಳಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ದ.ಕ.ಜಿಲ್ಲಾಧ್ಯಕ್ಷರಾದ ಡಾ.ಹಾಜಿ.ಎಸ್ ಅಬೂಬಕ್ಕರ್ ಆರ್ಲಪದವುರವರು ಚಂದನ ಕವಿ ಕಾವ್ಯ ಸಮ್ಮೇಳನ – 2022 ಸಮಾರಂಭವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಸಾಹಿತಿಗಳಾದ ಎಮ್ ಬಿ ಸಂತೋಷ್ ಮೈಸೂರು, ಪಿ ಎಸ್ ವೈಲೇಶ್ ಕೊಡಗು ಉಪಸ್ಥಿತರಿದ್ದರು.46 ಹಣತೆಗಳಿಗೆ ದೀಪ ಬೆಳಗುವುದರ ಮೂಲಕ ಹೆಚ್ ಭೀಮರಾವ್ ವಾಷ್ಠರ್ ರವರ 46 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಯಿತು.
2022ನೇ ಸಾಲಿನ ಸಾಧಕರಾದ ಶ್ರೀಧರ್ ರಾವ್ ಗುರೂಜಿ ಮೈಸೂರು, ಕೃಷ್ಣಾಜಿ ರಾವ್ ಸುರ್ವೆ ಮೈಸೂರು, ಭೀಮರಾವ್ ಗುರೂಜಿ ಮೈಸೂರು, ಶ್ರೀಮತಿ ರಶ್ಮಿ ಸನಿಲ್ ಮಂಗಳೂರು, ಪ್ರೇಮ್ ರಾಜ್ ಆರ್ಲಪದವು, ಶಿವ ಪ್ರಸಾದ್ ಕೇರ್ಪಳ, ಎಂ ಬಿ ಸಂತೋಷ್ ಮೈಸೂರು, , ನಾರಾಯಣ ಕುಂಬ್ರ ಮತ್ತು ಕು.ಚೈತನ್ಯ ಬಿ ಎನ್ ಉರುವಾಲು ಇವರಿಗೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಎಚ್ ಭೀಮರಾವ್ ವಾಷ್ಠರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ದಿಲೀಪ್ ವೇದಿಕ್ ಕಡಬ ಸ್ವಾಗತಿಸಿ, ಅನಿತಾ ಪಿ ಕೆ ಬೆಂಗಳೂರು ರವರು ವಂದಿಸಿದರು.ವಿನೋದ್ ಮರ್ಧಾಳ ಪ್ರಾರ್ಥಿಸಿದರು, ಸುಮಂಗಲ ಲಕ್ಷ್ಮಣ ಕೋಳಿವಾಡ ಕಾರ್ಯಕ್ರಮ ನಿರೂಪಿಸಿದರು.
ರಾಜ್ಯ ಮಟ್ಟದ ಚಂದನ ಕವಿಗೋಷ್ಠಿಯು ಹಿರಿಯ ಸಾಹಿತಿಗಳಾದ ಹಾ.ಮ.ಸತೀಶ್ ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ದ ಕ ಜಿಲ್ಲಾಧ್ಯಕ್ಷರಾದ ಎಂ ಪಿ ಶ್ರೀನಾಥ್ ರವರ ಗೌರವ ಸಾನಿಧ್ಯದಲ್ಲಿ , ಸುಳ್ಯ ತಾಲೂಕು ಕಸಾಪ ಅಧ್ಯಕ್ಷ ಚಂದ್ರಶೇಖರ್ ಪೇರಾಲು , ಮಿಥುನ್ ರಾಜ್ ವಿದ್ಯಾಪುರ, ಅರುಣ್ ಜಾಧವ್ ಸುಳ್ಯ, ಎಚ್ .ಭೀಮರಾವ್ ವಾಷ್ಠರ್ ರವರ ಉಪಸ್ಥಿತಿಯಲ್ಲಿ ನಡೆಯಿತು. ಕವಿಗೋಷ್ಠಿಯಲ್ಲಿ ಮುಹಮ್ಮದ್ ಸಿಂಸಾರುಲ್ ಹಖ್ ಆರ್ಲಪದವು, ದಿವ್ಯಾ ಎಂ ಬೆಟ್ಟಂಪಾಡಿ , ಎಂ ಎ ಮುಸ್ತಫಾ ಬೆಳ್ಳಾರೆ, ನಾರಾಯಣ ನಾಯ್ಕ ಕುದ್ಕೋಳಿ, , ವಿದ್ಯಾ ಸರಸ್ವತಿ ಸುಳ್ಯ , ಅಪೂರ್ವ ಕಾರಂತ್ ಪುತ್ತೂರು ,ರಶ್ಮಿ ಸನಿಲ್ ಮಂಗಳೂರು , ಹಿತೇಶ್ ಕುಮಾರ್ ಕಾಸರಗೋಡು , ಸುಮಂಗಲ ಲಕ್ಷ್ಮಣ ಕೋಳಿವಾಡ ,ಶಶಿಧರ್ ಏಮಾಜೆ,ನಾರಾಯಣ ಕುಂಬ್ರ,ಆಶಾ ಮಯ್ಯ ಪುತ್ತೂರು , ಸೌಮ್ಯ ಗೋಪಾಲ್ , ಗೋಪಾಲ್ ಕೃಷ್ಣ ಶಾಸ್ತ್ರಿ , ಗೀತಾ ಲಕ್ಷ್ಮೀಶ್ , ಪ್ರತೀಕ್ಷಾ ಕಾವು , ವಿಂಧ್ಯಾ ಎಸ್ ರೈ , ಚಂದ್ರಮೌಳಿ ಪಾಣಾಜೆ , ಕೇಶವ್ ಪುತ್ತೂರು , ನವ್ಯ ಪ್ರಸಾದ್ ನೆಲ್ಯಾಡಿ , ಎಸ್ ಕೆ ಕುಂಪಲ , ಪರಿಮಳ ಐವರ್ನಾಡು , ಪೂರ್ಣಿಮಾ ಪೆರ್ಲಂಪಾಡಿ , ಸುಭಾಷ್ ಪೆರ್ಲ , ಸೌಮ್ಯ ಸಿ ಡಿ ಎಲಿಮಲೆ , ಸಮ್ಯಕ್ತ್ ಜೈನ್ ಕಡಬ , ಹರಿಪ್ರಸಾದ್ ಪಿ ಸುಳ್ಯ , ಆಶಿಫ್ ಮಾಡಾವು , ಕೃಷ್ಣವೇಣಿ ಐವರ್ನಾಡು ಸೇರಿದಂತೆ 50 ಕವಿಗಳು ತನ್ನ ಸ್ವರಚಿತ ಕವನ ವಾಚಿಸಿ ರಾಜ್ಯಮಟ್ಟದ ಚಂದನ ಕವಿಗೋಷ್ಠಿ ಯಶಸ್ವಿಗೊಳಿಸಿದರು.. ಎಚ್ .ಭೀಮರಾವ್ ವಾಷ್ಠರ್ ಸಂಪಾದಕತ್ವದ ಚಂದನ ಸೌರಭ ಕವನ ಸಂಕಲನ ಮತ್ತು ಸಾಹಿತಿ ಶರಭಯ್ಯ ಸ್ವಾಮಿ ತುರ್ವಿಹಾಳ್ ರವರು ಬರೆದ ಚಂದನ ದರ್ಪಣ,ಹಾಗೂ ಸುಮಾ ಕಿರಣ ರವರು ರಚಿಸಿದ ಶಕುನಿ ಸಾಹಿತ್ಯ ಕೃತಿಗಳು ವೇದಿಕೆಯಲ್ಲಿ ಬಿಡುಗಡೆಗೊಂಡವು . ಕವನ ವಾಚನ ಮಾಡಿದ ಎಲ್ಲಾ ಕವಿಗಳಿಗೂ ಸ್ಮರಣಿಕೆ, ಪ್ರಶಂಸನಾ ಪತ್ರ ಹಾಗೂ ಸಾಹಿತ್ಯ ಕೃತಿಗಳನ್ನು ನೀಡಿ ಗೌರವಿಸಿದರು. ಸಮಾರೋಪ ಸಮಾರಂಭದಲ್ಲಿ ಹಿರಿಯ ಸಾಹಿತಿಗಳಾದ ಶ್ರೀ ಹರಿ ನರಸಿಂಹ ಉಪಾಧ್ಯಾಯ ರವರು ಅಧ್ಯಕ್ಷತೆ ವಹಿಸಿ ಗುರು ಢವಳೇಶ್ವರ ಹುಬ್ಬಳ್ಳಿ ರವರು ಉದ್ಘಾಟಿಸಿದರು . ಸುಳ್ಯದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಹಾಗೂ ಬೆಂಗಳೂರಿನ ಹರಿನರಸಿಂಹ ಉಪಾಧ್ಯಾಯ ಅವರ ಬಳಗದಿಂದ ಸಾಹಿತಿ , ಜ್ಯೋತಿಷಿ ಎಚ್ .ಭೀಮರಾವ್ ವಾಷ್ಠರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಲವಾರು ವರ್ಷಗಳಿಂದ ಸಾಹಿತ್ಯ ಸೇವೆ ಮಾಡುತ್ತಿರುವ ಶ್ರೀ ಜ್ಯೋತಿಭಾ ಚಿಲ್ಲಣ್ಣವರ್ ಅವರಿಗೂ , ಎಂ ಎ ಮುಸ್ತಫಾ ಬೆಳ್ಳಾರೆ ಅವರಿಗೂ , ಸುಳ್ಯದ ಶಿಕ್ಷಕಿ ವಿದ್ಯಾ ಸರಸ್ವತಿ ಅವರಿಗೂ , ನಿಗೂಢ ರಿಗೂ , ವಿಹಾರಿ ಅವರಿಗೂ , ವಿಜಯ್ ದಾಸ್ ನವಲಿ ಗೂ , ಆಶಾ ಮಯ್ಯ ಅವರಿಗೂ , ಸುಮಾ ಕಿರಣ್ ಮಣಿಪಾಲ್ ಅವರಿಗೂ , ಶ್ರೀ ಶರಭಯ್ಯ ಸ್ವಾಮೀ ಹಿರೇಮಠ ಅವರಿಗೂ ಚಂದನ ಸೌರಭ ಪ್ರಶಸ್ತಿ ನೀಡಿ ಗೌರವಿಸಲಾಯಿತು . ಎಚ್ .ಭೀಮರಾವ್ ವಾಷ್ಠರ್ ಸ್ವಾಗತಿಸಿದರು . ಸಮಾರಂಭದ ಅದೃಷ್ಟ ಕವಿಗಳಾಗಿ ಆಯ್ಕೆಯಾದ ಸೌಮ್ಯ ಶೆಟ್ಟಿ ಅವರಿಗೆ ಚಂದನ ಸೌರಭ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು .

Ad Widget . Ad Widget .

Leave a Comment

Your email address will not be published. Required fields are marked *