Ad Widget .

“ಹರ್ಷನ ಕತೆ ಮುಗೀತು, ನೆಕ್ಸ್ಟ್ ನಿಮ್ದೇ”| ಪುತ್ತೂರಿನ ಇಬ್ಬರು ಸೇರಿ ಮೂರು ಮಂದಿಗೆ ಕೊಲೆ ಬೆದರಿಕೆ

L

Ad Widget . Ad Widget .

ಸಮಗ್ರ ನ್ಯೂಸ್: ದೇಶಾದ್ಯಂತ ಸುದ್ದಿಯಾಗಿರುವ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಕೋಲಾಹಲ ಸೃಷ್ಟಿಸಿದ ಈ ಕೊಲೆ ನಂತರ ಇದೀಗ ಇದೇ ರೀತಿ ಮತ್ತೆ ಮೂವರಿಗೆ ಕೊಲೆ ಬೆದರಿಕೆ ಬಂದಿದೆ.

Ad Widget . Ad Widget .

ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿಗೆ ಬೆದರಿಕೆ ಕರೆ ಬಂದಿದ್ದು, ಹರ್ಷ ಕಥೆ ಮುಗೀತು. ನೆಕ್ಸ್ಟ್ ಹಿಟ್ ಲಿಸ್ಟ್ ನಲ್ಲಿ ನೀನೆ ಇದ್ದೀಯ. ಹರ್ಷನ ಯಾಕೆ ಮರ್ಡರ್ ಯಾಕೆ ಮಾಡಿದ್ವಿ ಎನ್ನುವುದು ಗೊತ್ತಲ್ಲ ? ಇಲ್ಲಿಂದಲೇ ಸ್ಕೆಚ್ ಹಾಕ್ತೀವಿ ಗೊತ್ತಲ್ಲ, ಹಿಜಾಬ್ ತಂಟೆಗೆ ಬಂದರೆ ನಿಮ್ಮ ಕಥೆ ಮುಗಿಸುತ್ತೇವೆ ಎಂದು ಪುನೀತ್ ಕೆರೆಹಳ್ಳಿಗೆ ಬೆದರಿಕೆ ಹಾಕಲಾಗಿದೆ.

ಒಂದು ತಿಂಗಳಲ್ಲಿ ನಿನ್ನನ್ನು ಮುಗಿಸ್ತೀನಿ. ನಿನ್ನನ್ನು ತೆಗೆಯೋದಂತೂ ಪಕ್ಕಾ ಆಗಿದೆ. ಪುತ್ತೂರಲ್ಲಿ ಇನ್ನೊಬ್ಬ ಇದಾನೆ ಭರತ್. ಅವನ ಜೊತೆ ಇನ್ನೊಬ್ಬ ಇದಾನೆ ಮೂರು ಜನರನ್ನ ತೆಗೀತಿವಿ ಎಂದು ಆವಾಜ್ ಹಾಕಿ ಬೆದರಿಸಲಾಗಿದೆ. ವಾಟ್ಸಾಪ್ ನಲ್ಲಿ ಆಡಿಯೋ ಮೆಸೇಜ್ ಮೂಲಕ ಧಮ್ಕಿ ಹಾಕಿದ್ದು ಕಿಡಿಗೇಡಿಗಳು ಪ್ರಾಣ ಬೆದರಿಕೆ ಹಾಕಿದ್ದಾರೆ.

ಪೊಲೀಸ್ ಕಂಪ್ಲೆಂಟ್ ಗೂ ಬೆದರಲ್ಲ!

ತಲೆಯಲ್ಲಿ ಬುರುಡೆ ಇದ್ದರೆ ಮಾತನಾಡುವಾಗ ಯೋಚಿಸು. ನಿನಗೂ ಇದೇ ಗತಿ ನಿನಗೆ, ನೀನು ಟೆನ್ಶನ್ ಮಾಡಬೇಡ, ನೆಕ್ಸ್ಟ್ ನೀನೆ. ನಿಮಗೆ ಮಾರಿ ಹಬ್ಬ ಇನ್ನು ಇದೆ, ನಿನಗೆ ಸ್ಕೆಚ್ ಆಗಿದೆ. ಯಾವ ಸ್ಟೇಷನ್​ಗೆ ಹೋಗಿ ಬೇಕಾದರೂ ಕಂಪ್ಲೇಂಟ್ ಕೊಡು, ನಿನಗೆ ನೆನಪಿರಲಿ ಎಂದು ಬೆದರಿಸಲಾಗಿದೆ.

ಪುತ್ತೂರಿನ ಇಬ್ಬರಿಗೆ ಸ್ಕೆಚ್!?

ಲಿಮಿಟ್ ಕ್ರಾಸ್ ಮಾಡಬೇಡ, ಹೆಣವಾಗಿ ಬೀದಿಯಲ್ಲಿ ಬೀಳುವಾಗ ಯಾರು ಇಲ್ಲ, ಗುಂಪಿನಲ್ಲಿ ಗೋವಿಂದ ಆಗುತ್ತೀಯಲ್ಲ, ಹೆಣವಾಗಿ ಬೀಳುವಾಗ ಯಾರು ಬರಲ್ಲ. ನೀನು ಯಾವನೋ, ನಿನ್ನನ್ನು 100% ತೆಗೆಯೋದು ಪಕ್ಕಾ. ಒಂದೇ ಒಂದು ತಿಂಗಳು ನಿನಗೆ ಟೈಂ, ಅಷ್ಟರೊಳಗೆ ನಿನ್ನ ಹೆಣ ಬೀದಿಗೆ ಬರುತ್ತೆ. ಈ ಮೆಸೇಜ್ ಫ್ರೆಂಡ್ಸ್​ಗೆ ಕಳಿಸು, ಅವರಿಗೂ ಗೊತ್ತಾಗಲಿ ನಿನಗೆ ಗಡುವು ಇಟ್ಟಿದ್ದಾರೆಂದು. ಇನ್ನೊಬ್ಬ ಪುತ್ತೂರಲ್ಲಿದ್ದಾನೆ, ಅವನಿಗೂ ಸ್ಕೆಚ್ ಆಗಿದೆ, ಮತ್ತೊಬ್ಬ ಭರತ್ ಫಿಕ್ಸ್ ಆಗಿದ್ದಾನೆ. ನಿಮ್ಮ ಮೂವರ ಹೆಣ ಬೀಳೋದು ಗ್ಯಾರಂಟಿ, ಅದರಲ್ಲಿ ಒಬ್ಬನದು ಬೇಗ ಇದೆ ಎಂದು ವಾಯ್ಸ್ ಮೆಸೇಜ್ ಮೂಲಕ ಬೆದರಿಸಲಾಗಿದೆ.

ವಾಟ್ಸಾಪ್ ವಾಯ್ಸ್ ಮೆಸೇಜ್ ಮೂಲಕ ಬೆದರಿಕೆ ಹಾಕಲಾಗಿದ್ದು ಆವಾಚ್ಯ ಶಬ್ದಗಳಿಂದ ಬೈದು ನಿಂದಿಸಲಾಗಿದೆ. ನಾವು ಎಂದು ತನ್ನನ್ನು ತಾನು ಸಂಭೋದಿಸಿದ ವ್ಯಕ್ತಿ ಪುನೀತ್ ಕೆರೆಹಳ್ಳಿಯನ್ನು ಕೊಲ್ಲುವುದು ಪಕ್ಕಾ ಎಂದು ಮತ್ತೆ ಮತ್ತೆ ಸ್ಪಷ್ಟವಾಗಿ ಹೇಳಿದ್ದಾನೆ. ಹಾಗೆಯೇ ಹರ್ಷನನ್ನು ಕೊಂದಿರುವ ಬಗ್ಗೆಯೂ ಮಾತನಾಡಿದ್ದಾನೆ. ಪುತ್ತೂರಿನಲ್ಲಿ ಇಬ್ಬರು ಯುವಕರಿದ್ದು ಅವರನ್ನೂ ಕೊಲ್ಲುವುದಾಗಿ ಇದೇ ವೇಳೆ ವಾರ್ನ್ ಮಾಡಿದ್ದಾನೆ.

Leave a Comment

Your email address will not be published. Required fields are marked *