Ad Widget .

ನಮ್ಮ ಮನೆಯ ಮಕ್ಕಳು ಅಮಾಯಕರು; ಅವನಿಗೆ ಊಟ ಮಾಡಿಸಿ, ಮಾತ್ರೆ ಕೊಟ್ಟು ಮಲಗಿಸಿದ್ದೆ : ಆರೋಪಿ ತಾಯಿ ಅಳಲು

Ad Widget . Ad Widget .

ಸಮಗ್ರ ನ್ಯೂಸ್ ಡೆಸ್ಕ್: ಹಿಂದೂ ಕಾರ್ಯಕರ್ತ ಹರ್ಷನ ಕೊಲೆ ವಿಚಾರವಾಗಿ 7 ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡುತ್ತಿದ್ದಂತೆ ಆರೋಪಿಗಳ ಕುಟುಂಬದವರು ‘ನಮ್ಮ ಮಕ್ಕಳು ಅಮಾಯಕರು’ ಎಂದು ಅಳಲು ತೋಡಿಕೊಂಡಿದ್ದಾರೆ.

Ad Widget . Ad Widget .

ಪರ್ವಿನ್ ತಾಜ್, ಆರೋಪಿ ನದೀಮ್ ತಾಯಿ:
ನನ್ನ ಮಗನಿಗೆ ಯಾರು ಸತ್ತಿದ್ದಾರೆ, ಏನೂ ನಡೆದಿದೆ ಎಂಬುದೇ ತಿಳಿದಿಲ್ಲ. ಏನೂ ತಿಳಿಯದ ನನ್ನ ಮಗನ ಮೇಲೆ ಈ ಆರೋಪ ಮಾಡುತ್ತಿದ್ದಾರೆ. ಒಂದು ವೇಳೆ ಅವನು ತಪ್ಪು ಮಾಡಿದರೆ ಅವನನ್ನು ಬಂಧಿಸಿ. ಸರಿಯಾಗಿ ತನಿಖೆ ಮಾಡಿ ಎಂದು ಆರೋಪಿ ನದೀಮ್ ತಾಯಿ ಪರ್ವಿನ್ ತಾಜ್ ಕಣ್ಣಿರಿಟ್ಟಿದ್ದಾರೆ.

ಹರ್ಷನ ಕೊಲೆಯಾದ ದಿನ ಅವನು ಮನೆಯಲ್ಲೇ ಇದ್ದ. ಅಂದು ಅವನಿಗೆ ಆರೋಗ್ಯದಲ್ಲಿ ಸಮಸ್ಯೆ ಇತ್ತು. ಅದಕ್ಕೆ ಮನೆಯಲ್ಲಿಯೇ ಇದ್ದ. ಎರಡು ದಿನ ಅವನು ಸರಿಯಾಗಿ ಊಟ ಮಾಡಿರಲಿಲ್ಲ. ಆದರೆ ನಾನೇ ಅವನಿಗೆ ಊಟ ಮಾಡಿಸಿ, ಮಾತ್ರೆ ಕೊಟ್ಟು ಮಲಗಿಸಿದ್ದೆ ಎಂದು ತಿಳಿಸಿದ್ದಾರೆ.

ನಾನು ಊಟ ಮಾಡಿಸಿದ ಮೇಲೆ ಬೆಳಗ್ಗೆ ಕೆಲಸಕ್ಕೆ ಹೋಗಬೇಕು ಎಂದು ಬೇಗ ಮಲಗಿಕೊಂಡ. ಅಷ್ಟೊಂದು ಅನುಮಾನವಿದ್ದರೆ ಅವನು ಕೆಲಸ ಮಾಡುವ ಜಾಗದಲ್ಲಿ ಮೇಸ್ತ್ರಿ ಇದ್ದಾರೆ, ಅವರನ್ನು ಕೇಳಿ. ಅವನು ಇಲ್ಲೇ ಕೆಲಸ ಮಾಡುತ್ತಿದ್ದ ಎಂದಿದ್ದಾರೆ.

ಪೊಲೀಸರು ಬೆಳಗ್ಗೆ 3 ಗಂಟೆಗೆ ಮನೆಗೆ ಬಂದು ನನ್ನ ಮಗನನ್ನು ಕರೆದುಕೊಂಡು ಹೋದರು. ಅವರು ಏಕೆ ಕರೆದುಕೊಂಡು ಹೋಗುತ್ತಿದ್ದಾರೆ ಎಂಬುದು ಸಹ ನಮಗೆ ತಿಳಿದಿರಲಿಲ್ಲ. ನನ್ನ ಮಗನಿಗೂ ಈ ಕೊಲೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ಬೇಕೆಂದು ನನ್ನ ಮಗನಿಗೆ ತೊಂದರೆ ಕೊಡುತ್ತಿದ್ದಾರೆ. ನಿಜವಾದ ಆರೋಪಿಗಳನ್ನು ಬಂಧಿಸಿ. ಸುಮ್ಮನೆ ನನ್ನ ಮಗನನ್ನು ಕರೆದುಕೊಂಡು ಹೋಗಿದ್ದಾರೆ. ಏಕೆ ನನ್ನ ಮಗನ ಮೇಲೆ ಇಷ್ಟು ದೊಡ್ಡ ಆರೋಪ ಮಾಡುತ್ತಿದ್ದಾರೆ ಎಂದು ಸಂಕಟ ತೋಡಿಕೊಂಡಿದ್ದಾರೆ.

ಖಾಸಿಫ್ ಪತ್ನಿ:
ರಾತ್ರಿ 8 ಗಂಟೆಗೆ ಮನೆಯಿಂದ ಅವರು ಆಚೆ ಹೋದ್ರು. ರಾತ್ರಿ 11 ರಿಂದ 11:30ಗೆ ವಾಪಸ್ ಬಂದ್ರು. ಎಲ್ಲಿಗೆ ಹೋಗಿದ್ದೆ ಎಂದು ಕೇಳಿದ್ದೆ. ಅದಕ್ಕೆ ಅವರು ಫ್ರೆಂಡ್ಸ್ ಜೊತೆ ಹೋಗಿದ್ದೆ ಅಂದ್ರು. ರಾತ್ರಿ 1.30ಕ್ಕೆ ಪೊಲೀಸರು ಬಂದ್ರು. ನಂತರ ಅವನನ್ನು ಮಾಡಿ ಕರೆದುಕೊಂಡು ಹೋದ್ರು ಎಂದು ವಿವರಿಸಿದ್ದಾರೆ.

Leave a Comment

Your email address will not be published. Required fields are marked *