Ad Widget .

ಬಂಟ್ವಾಳ: ಕ್ರಿಕೆಟ್ ಆಡುವಾಗ ಕುಸಿದು ಬಿದ್ದು ವ್ಯಕ್ತಿ ಮೃತ್ಯು| ಗೆದ್ದ ಸಂಭ್ರಮಕ್ಕೆ ಆಟಗಾರನೇ ಇಲ್ಲ

Ad Widget . Ad Widget .

ಸಮಗ್ರ ನ್ಯೂಸ್: ವ್ಯಕ್ತಿಯೊಬ್ಬರು ಕ್ರಿಕೆಟ್ ಆಡುವಾಗ ಮೈದಾನದಲ್ಲಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಅನ್ನಡ್ಕ ಗ್ರಾಮದಲ್ಲಿ ನಡೆದಿದೆ.

Ad Widget . Ad Widget .

ಮೃತರನ್ನು ಮನೋಹರ ಪ್ರಭು (45) ಎಂದು ಗುರುತಿಸಲಾಗಿದೆ. ಇನ್ನು ತೀವ್ರ ಎದೆನೋವಿನಿಂದ ಬಳಲುತ್ತಿದ್ದ ಅವರು ದಿನದ ಮೂರನೇ ಪಂದ್ಯಕ್ಕೆ ಸಿದ್ದರಾಗುತ್ತಿದ್ದಂತೆ ನೆಲಕ್ಕೆ ಕುಸಿದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ.

ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪ್ರಭು ಒಬ್ಬ ಪ್ರಗತಿಪರ ರೈತ ಮತ್ತು ಒಬ್ಬ ನಿಪುಣ ಕ್ರಿಕೆಟಿಗ.

ಪ್ರಭು ಅವರು ಹಲವಾರು ಕ್ರಿಕೆಟ್ ತಂಡಗಳನ್ನು ಪ್ರತಿನಿಧಿಸಿದ್ದು, ಆಲ್ರೌಂಡ್ ಆಟಗಾರರಾಗಿದ್ದರು. ಭಾನುವಾರ ಸ್ಥಳೀಯ ಕ್ರಿಕೆಟ್ ತಂಡದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್‌ ಮಾಡಿದ್ದು, ಅವರ ತಂಡವು ಎರಡೂ ಪಂದ್ಯಗಳನ್ನು ಗೆದ್ದಿತು.

Leave a Comment

Your email address will not be published. Required fields are marked *