Ad Widget .

ಮಂಗಳೂರು: ‘ಈಶ್ವರಪ್ಪನನ್ನು ಗಡಿಪಾರು ಮಾಡದಿದ್ರೆ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುತ್ತಾರೆ’ – ಪಿ.ವಿ ಮೋಹನ್

Ad Widget . Ad Widget .

ಮಂಗಳೂರು: ಶಿವಮೊಗ್ಗ ಬಜರಂಗ ದಳ ಕಾರ್ಯಕರ್ತನ ಕೊಲೆ ಮುಸ್ಲಿಮರು ಮಾಡಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದ್ದಾರೆ. ಇದಕ್ಕೆ ಅವರಲ್ಲಿ ಏನು ಸಾಕ್ಷಿಇದೆ. ಅವರು ಕರ್ನಾಟಕ ರಾಜ್ಯಕ್ಕೆ ಒಂದು ಶಾಪ. ಅವರನ್ನು ಗಡಿಪಾರು ಮಾಡಬೇಕು ಇಲ್ಲದಿದ್ದರೆ ಇಡೀ ಕರ್ನಾಟಕಕ್ಕೆ ಬೆಂಕಿ ಹಚ್ಚುತ್ತಾರೆ ಎಂದು ಎಐಸಿಸಿ ಕಾರ್ಯದರ್ಶಿ ಪಿ ವಿ ಮೋಹನ್ ವಾಗ್ದಾಳಿ ನಡೆಸಿದ್ದಾರೆ.

Ad Widget . Ad Widget .

ಈ ಕುರಿತು ಮಾತನಾಡಿದ ಅವರು, ಕೊಲೆಗಳು ನಡೆಯುದು ಬೇರೆ ಬೇರೆ ವಯಕ್ತಿಕ ಕಾರಣ ಅಥವಾ ಬೇರೆಬೇರೆ ರಾಜಕೀಯ. ಅದನ್ನು ನೀವು ಒಂದು ಸಮುದಾಯದ ಮೇಲೆ ಹೇಗೆ ಹಾಕ್ತೀರಾ? ಮೊದಲಿಗೆ ಈಶ್ವರಪ್ಪ ಮತ್ತು ನಳೀನ್ ಕುಮಾರ್ ಕಟೀಲ್ ನನ್ನು ಗಡಿ ಪಾರು ಮಾಡಬೇಕು. ಇವ್ರು ಬಷ್ಮಾಸುರನಂತೆ ಯಾರಾದೋ ತಲೆಗೆ ಕೈ ಇಟ್ರು ಈಗಾ ಅವರ ತಲೆಗೆ ಬಂತು. ಅದನ್ನು ತಪ್ಪಿಸಲು ಈ ಕೃತ್ಯಗಳನ್ನು ಎಳೆದು ತರ್ತಾರೆ. ಅವರು ಬಿಜೆಪಿ ಗಮನ ಬೇರೆಡೆ ಸೆಳೆಯುದರಲ್ಲಿ ಪರಿಣಿತರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಷ್ಮಾಸುರನ ಮುಖವೇ ಈಶ್ವರಪ್ಪ. ಅವರ ಮೆದುಳಿಗೂ ಮೈಗೂ ಕನೆಕ್ಷನ್ ಇಲ್ಲ ಎಂದು ನಮ್ಮ ನಾಯಕರು ಹೇಳುವು ಕರೆಕ್ಟ್. ಇಂತಹವರನ್ನು ಗಡಿಪಾರು ಮಾಡಬೇಕು ಎಂದಿದ್ದಾರೆ.

ಶಿವಮೊಗ್ಗ ಬಜರಂಗ ದಳ ಕಾರ್ಯಕರ್ತನ ಕೊಲೆ ಪ್ರಕರಣವನ್ನು ಮುಸ್ಲಿಮರು ಮಾಡಿದ್ದಾರೆ ಎಂದು ಈಶ್ವರಪ್ಪ ದೂರಿದ್ದಾರೆ. ಅದು ಯಾಕೆ ಅವ್ರು ಹೇಳಿದ್ರು ಅವರಲ್ಲಿ ಏನು ಎವಿಡೆನ್ಸ್ ಇದೆ. ಕುಂಬಳಕಾಯಿ ಕಳ್ಳ ಎಂದಾಗ ಹೆಗಲು ಮುಟ್ಟಿದ ಹಾಗೆ ಅವ್ರು ಯಾಕೆ ಹೇಳಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

Leave a Comment

Your email address will not be published. Required fields are marked *