Ad Widget .

ಎಂಸ್ಸಿ, ಪಿಯುಸಿ ಆದವರಿಗೆ ಸರ್ಕಾರಿ ಉದ್ಯೋಗ – ತಿಂಗಳಿಗೆ 1 ಲಕ್ಷದವರೆಗೆ ಸಂಬಳ

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಉದ್ಯೋಗ : ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ( Karnataka State Sericulture Research & Development Institute) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 9 ಸೀನಿಯರ್ ರಿಸರ್ಚ್​ ಅಸಿಸ್ಟೆಂಟ್ಸ್​, ಸೈಂಟಿಸ್ಟ್​​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 7ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಫೆಬ್ರವರಿ 28 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

Ad Widget . Ad Widget . Ad Widget .

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(KSSRDI )

ಹುದ್ದೆಯ ಮಾಹಿತಿ:
ಸೈಂಟಿಸ್ಟ್​-ಸಿ- 2 ಹುದ್ದೆ
ಸೈಂಟಿಸ್ಟ್​-ಬಿ- 1 ಹುದ್ದೆ
ಸೀನಿಯರ್ ರಿಸರ್ಚ್​ ಅಸಿಸ್ಟೆಂಟ್-5
ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್-1
ಒಟ್ಟು 9 ಹುದ್ದೆಗಳು

ವಿದ್ಯಾರ್ಹತೆ:

ಸೈಂಟಿಸ್ಟ್​-ಸಿ- ರೇಷ್ಮೆ ಕೃಷಿ/ಪ್ರಾಣಿಶಾಸ್ತ್ರದಲ್ಲಿ M.Sc, ಕೀಟಶಾಸ್ತ್ರದಲ್ಲಿ M.Sc (ಅಗ್ರಿ), ರೇಷ್ಮೆ ಕೃಷಿ/ಕೀಟಶಾಸ್ತ್ರ/ಪ್ರಾಣಿಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ, ಜವಳಿ ತಂತ್ರಜ್ಞಾನ/ ಜವಳಿ ವಿಜ್ಞಾನ/ಜವಳಿ ರಸಾಯನಶಾಸ್ತ್ರ/ಫೈಬರ್ ಸೈನ್ಸ್ ಇಂಡಸ್ಟ್ರಿಯಲ್ ಮ್ಯಾನೇಜ್ಮೆಂಟ್​​ನಲ್ಲಿ M.Tech ಪೂರ್ಣಗೊಳಿಸಿರಬೇಕು.

ಸೈಂಟಿಸ್ಟ್​-ಬಿ- ರೇಷ್ಮೆ ಕೃಷಿ/ಪ್ರಾಣಿಶಾಸ್ತ್ರದಲ್ಲಿ M.Sc, ಕೀಟಶಾಸ್ತ್ರದಲ್ಲಿ M.Sc (ಅಗ್ರಿ), ರೇಷ್ಮೆ ಹುಳು ಶರೀರಶಾಸ್ತ್ರ ಮತ್ತು ಜೈವಿಕ ರಸಾಯನಶಾಸ್ತ್ರದಲ್ಲಿ Ph.D, ಜವಳಿ ತಂತ್ರಜ್ಞಾನ/ಜವಳಿ ಎಂಜಿನಿಯರಿಂಗ್‌ನಲ್ಲಿ
ಸೀನಿಯರ್ ರಿಸರ್ಚ್​ ಅಸಿಸ್ಟೆಂಟ್-ರೇಷ್ಮೆ ಕೃಷಿ/ಸಸ್ಯಶಾಸ್ತ್ರ/ಪ್ರಾಣಿಶಾಸ್ತ್ರ/ಕೀಟಶಾಸ್ತ್ರದಲ್ಲಿ M.Sc, M.Sc. (ಅಗ್ರಿ) ಕೀಟಶಾಸ್ತ್ರ/ಸಿರಿಕಲ್ಚರ್‌, ಜವಳಿ, ರೇಷ್ಮೆ ತಂತ್ರಜ್ಞಾನದಲ್ಲಿ B.E ಅಥವಾ B.Tech, ಜವಳಿ ರಸಾಯನಶಾಸ್ತ್ರದಲ್ಲಿ B.Sc ಟೆಕ್

ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್- ಪಿಯುಸಿ

ವಯೋಮಿತಿ:
ಸೈಂಟಿಸ್ಟ್​-ಸಿ- 45 ವರ್ಷ
ಸೈಂಟಿಸ್ಟ್​-ಬಿ- 40 ವರ್ಷ
ಸೀನಿಯರ್ ರಿಸರ್ಚ್​ ಅಸಿಸ್ಟೆಂಟ್-35 ವರ್ಷ
ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್-KSSRDI ನೇಮಕಾತಿ ಅಧಿಸೂಚನೆ ಪ್ರಕಾರ

ವಯೋಮಿತಿ ಸಡಿಲಿಕೆ:
ಪ್ರವರ್ಗ 2ಎ ಅಭ್ಯರ್ಥಿಗಳು- 03 ವರ್ಷ
SC ಅಭ್ಯರ್ಥಿಗಳು: 05 ವರ್ಷ

ಅರ್ಜಿ ಶುಲ್ಕ:
SC/ST- 250 ರೂ
ಪ್ರವರ್ಗ 1 ಅಭ್ಯರ್ಥಿಗಳಿಗೆ -500 ರೂ.
ಉಳಿದ ಎಲ್ಲಾ ಅಭ್ಯರ್ಥಿಗಳಿಗೆ- 1000 ರೂ.
ಅರ್ಜಿ ಶುಲ್ಕ ಪಾವತಿ ವಿಧಾನ: ಪೋಸ್ಟಲ್​ ಆರ್ಡರ್

ಅನುಭವ:

ಸೈಂಟಿಸ್ಟ್​-ಸಿ: ಅಭ್ಯರ್ಥಿಗಳು ಕೀಟಶಾಸ್ತ್ರ / ಕೀಟ ರೋಗಶಾಸ್ತ್ರ / ಸೂಕ್ಷ್ಮ ಜೀವವಿಜ್ಞಾನ / ಕೀಟ ನಿರ್ವಹಣೆಯಲ್ಲಿ ಐದು ವರ್ಷಗಳ ಪೋಸ್ಟ್ ಡಾಕ್ಟರೇಟ್ ಸಂಶೋಧನಾ ಅನುಭವವನ್ನು ಹೊಂದಿರಬೇಕುಅಭ್ಯರ್ಥಿಗಳು ಜವಳಿ ಉದ್ಯಮ/ಸಂಶೋಧನೆಯಲ್ಲಿ 05 ವರ್ಷಗಳ ಅನುಭವವನ್ನು ಹೊಂದಿರಬೇಕು.

ಸೈಂಟಿಸ್ಟ್​-ಬಿ: ಅಭ್ಯರ್ಥಿಗಳು ಕೀಟ ರೋಗಶಾಸ್ತ್ರ/ಬಯೋ-ಕೆಮಿಸ್ಟ್ರಿ/ ಅಥವಾ ಜವಳಿ ಉದ್ಯಮ/ಸಂಶೋಧನೆಯಲ್ಲಿ 02 ವರ್ಷಗಳ ಅನುಭವವನ್ನು ಹೊಂದಿರಬೇಕು.

ವೇತನ:
ಸೈಂಟಿಸ್ಟ್​-ಸಿ- ಮಾಸಿಕ ₹ 56,800-99,600
ಸೈಂಟಿಸ್ಟ್​-ಬಿ- ಮಾಸಿಕ ₹ 52,650-97,100
ಸೀನಿಯರ್ ರಿಸರ್ಚ್​ ಅಸಿಸ್ಟೆಂಟ್-ಮಾಸಿಕ ₹ 27,650-52,650
ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್-ಮಾಸಿಕ ₹ 21,400-42,000

ಆಯ್ಕೆ ಪ್ರಕ್ರಿಯೆ: ಮೆರಿಟ್ ಲಿಸ್ಟ್​, ಸಂದರ್ಶನ

ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ನಿರ್ದೇಶಕರು
ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ
ತಲಗಟ್ಟಾಪುರ, ಕನಕಪುರ ರಸ್ತೆ,
ಬೆಂಗಳೂರು – 560109

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 07/02/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28/02/2022

ಹೆಚ್ಚಿನ ಮಾಹಿತಿಗಾಗಿ kssrdi.karnataka.gov.in ಗೆ ಭೇಟಿ ನೀಡಿ.

Leave a Comment

Your email address will not be published. Required fields are marked *